ನನಗೆ ಯಾವ ಸಿನಿಮಾ ಸ್ಟಾರ್ ಪ್ರಚಾರ ಬೇಡ – ನಿಖಿಲ್ ಕುಮಾರಸ್ವಾಮಿ.!

nikhil mp candidate mandya

ಮಂಡ್ಯ ಲೋಕಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಇಂದು ಮಂಡ್ಯದಲ್ಲಿ ಟೆಂಪಲ್‌ ರನ್ ಶುರುಮಾಡಿದ್ದಾರೆ. ಈಗಾಗ್ಲೇ ಪ್ರಚಾರದ ಅಖಾಡಕ್ಕೆ ಇಳಿದಿರೋ ನಿಖಿಲ್ ಇಂದು ಮಂಡ್ಯದ ಕೆಲವು ಗ್ರಾಮಗಳಿಗೆ ಭೇಟಿ ನೀಡಿದ ನಿಖಿಲ್ ‘ನನಗೆ ಪ್ರಚಾರಕ್ಕೆ ಚಿತ್ರರಂಗದ ಅವಶ್ಯಕತೆ ಇಲ್ಲ’ ನನ್ನ ಪಕ್ಷದ ಕಾರ್ಯಕರ್ತರೇ ನಮಗೆ ಯೋಧರಿದ್ದಂತೆ ಅಂತ ಹೇಳಿದ್ದಾರೆ. ಅಲ್ಲದೇ ನನ್ನ ಪರ ಯಾವ ಸ್ಟಾರ್ ನಟರು ಕೂಡ ಪ್ರಚಾರಕ್ಕೆ ಬರೋದಿಲ್ಲ ನಾನು ಯಾರನ್ನು ಕೇಳಿಯೂ ಇಲ್ಲ ನನಗೆ ಜೆಡಿಎಸ್ ಕಾರ್ಯಕರ್ತರ ಶಕ್ತಿ ಇದೆ ಅಂತ ಹೇಳಿದ್ದಾರೆ ನಿಖಿಲ್ ಕುಮಾರ ಸ್ವಾಮಿ. ಒಟ್ಟಿನಲ್ಲಿ ಮಂಡ್ಯ ಲೋಕಸಭಾ ಚುನಾವಣಾ ಕಾವು ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ನಾಳೆ ಮಂಡ್ಯಕ್ಕೆ ದೊಡ್ಡಗೌಡರು ಭೇಟಿನೀಡಿದ ಮೇಲೆ‌ ಚಿತ್ರಣ ಏನಾಗಲಿದೆ ಕಾದುನೋಡಬೇಕು.
Read : ಹಾಸನದಲ್ಲಿ ಗೌಡರ ಕಣ್ಣೀರಧಾರೆ.!
Read : ಇದು ವಿಶಿಷ್ಟದಲ್ಲಿ ವಿಶಿಷ್ಟ ಮದುವೆ – ಗಂಡನಿಗೆ ತಾಳಿ ಕಟ್ಟಿದ ಹೆಂಡತಿ.!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top