ರಿಯಲ್‌ ಸ್ಟೋರಿಯಲ್ಲಿ ನಿಖಿಲ್‌ ಕುಮಾರ್‌ ನಾಯಕ..!

ಯುವರಾಜ ನಿಖಿಲ್‌ ಕುಮಾರ್‌ ಸದ್ಯ ಉಪಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ. ಆದ್ರೆ ನಿಖಿಲ್‌ ಈ ಬಾರಿ ಮತ್ತೆ ಸ್ಯಾಂಡಲ್‌ವುಡ್‌ ಕಡೆ ಮುಖಮಾಡಲು ರೆಡಿಯಾಗಿದ್ದಾರೆ. ಸೀತಾರಾಮ ಕಲ್ಯಾಣ ಸಿನಿಮಾವಾದ ಮೇಲೆ ನಿಖಿಲ್‌ ಮುಂದಿನ ಸಿನಿಮಾ ಯಾವ್ದು ಅನ್ನೋ ಪ್ರಶ್ನೆಯನ್ನು ನಿಖಿಲ್‌ ಅಭಿಮಾನಿಗಳು ಕೇಳ್ತಾ ಇದ್ರು, ಪೈಲ್ವಾನ್‌ ನಿರ್ದೇಶಕ ಕೃಷ್ಣ ನಿಖಿಲ್‌ ಕುಮಾರ್‌ಗೆ ಸಿನಿಮಾ ಮಾಡ್ತಾರೆ ಅನ್ನೋ ಮಾಹಿತಿಯು ಹೊರ ಬಿದ್ದಿತ್ತು, ಆದ್ರೆ ಯಾವ ರೀತಿಯ ಸಿನಿಮಾ, ಯಾವಾಗ ಸೆಟ್ಟೆರಲಿದೆ ಅನ್ನೋ ಮಾಹಿತಿ ಮಾತ್ರ ಬಹಿರಂಗವಾಗಿರಲಿಲ್ಲ,

ಆದ್ರೆ ಈಗ ಬಂದಿರೋ ಮಾಹಿತಿ ಪ್ರಕಾರ ನಿರ್ದೇಶಕ ಕೃಷ್ಣ ನಿಖಿಲ್‌ ಕುಮಾರ್‌ಗಾಗಿ ಒಂದು ರಿಯಲ್‌ ಸ್ಟೋರಿಯನ್ನು ರೆಡಿಮಾಡಿಕೊಳ್ಳುತ್ತಿದ್ದಾರಂತೆ. ಇನ್ನು ಚಿತ್ರದಲ್ಲಿ ನಿಖಿಲ್‌ ಕುಮಾರ್‌ ಗೆಟಪ್‌ ಕೂಡ ಡಿಫರೆಂಟ್‌ ಆಗಿರಲಿದ್ದು, ಇದಕ್ಕಾಗಿ ನಿಖಿಲ್‌ ಈಗಾಗಲೇ ತಯಾರಿಯನ್ನು ಸಹ ನಡೆಸುತ್ತಿದ್ದಾರಂತೆ. ನಿಖಿಲ್‌ ಮತ್ತು ಕೃಷ್ಣ ಕಾಂಭಿನೇಷನ್‌ನ ಈ ಸಿನಿಮಾ ಜನವರಿಯಲ್ಲಿ ಸೆಟ್ಟೇರಲಿದ್ದು , ಕೃಷ್ಣ ಪ್ರಿಪ್ರೊಡಕ್ಷನ್‌ ವರ್ಕ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನು ಚಿತ್ರದ ಉಳಿದ ಕಲಾವಿದರ ಸೆಲೆಕ್ಷನ್‌ನಲ್ಲಿ ಮಾಡಬೇಕಾಗಿದ್ದು, ಇನ್ನು ಈ ಚಿತ್ರಕ್ಕೆ ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆ ಲೈಕಾ ಪ್ರೋಡಕ್ಷನ್‌ ನಿರ್ಮಾಣಮಾಡಲಿದೆ. ಈ ಹಿಂದೆ ರಜಿನಿಯ 2.0 ಸಿನಿಮಾ ನಿರ್ಮಾಣ ಮಾಡಿದ್ದ ಲೈಕಾ.. ಈಗ ನಿಖಿಲ್‌ ಅಭಿನಯದ ಚಿತ್ರವನ್ನು ನಿರ್ಮಾಣ ಮಾಡ್ತಾ ಇದ್ದು ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top