ನೈಸ್‌ ರಸ್ತೆಯಲ್ಲಿ ಯುವ ಜೋಡಿಗಳನ್ನು ಹೆದರಿಸಿ ಹಣ ಕೀಳುತ್ತಿದ್ದ ನಕಲಿ ಪೊಲೀಸ್ ಬಂಧನ!

nice road robbery fake police

ಬೆಂಗಳೂರು- ಮೈಸೂರು ಹೆದ್ದಾರಿ ನೈಸ್‌ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಮಾತನಾಡುವ ಜನರನ್ನು ಅಥವಾ ಜೋಡಿಗಳನ್ನು ತಾವು ಸಿಸಿಬಿ ಪೊಲೀಸರು ಎಂದು ಹೆದರಿಸಿ ಹಣ ಕೀಳುತ್ತಿದ್ದ ಇಬ್ಬರು ಖತರ್ನಾಕ್‌ ವ್ಯಕ್ತಿಗಳನ್ನು ಈಗ ಪೊಲೀಸರ ಬಂಧಿಸಿದ್ದಾರೆ.

ರಘು ಮತ್ತು ರವೀಶ್‌ ಬಂಧಿತರಾದ ವ್ಯಕ್ತಿಗಳು.. ರಾಮನಗರ ಜಿಲ್ಲೆಯ ನರಸಿಂಹಯ್ಯನದೊಡ್ಡಿ ನಿವಾಸಿ ಮತ್ತು ತುಂಬೇನಹಳ್ಳಿ ನಿವಾಸಿಗಳಾಗಿದ್ದು.. ಇವರು ನೈಸ್‌ರಸ್ತೆಯಲ್ಲಿ ವಾಹನಗಳ ಬಳಿ ತೆರಳಿ ,ತಾವು ಸಿಸಿಬಿ ಪೊಲೀಸರು ಎಂದು ವಾಹನ ಸವಾರರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು, ಇನ್ನು ಇವರ ಪ್ರಮುಖ ಟಾರ್ಗೆಟ್‌ ಯುವ ಜೋಡಿಗಳು.

ಹೌದು ನೈಸ್‌ ರಸ್ತೆಯಲ್ಲಿ ಸವಾರಿ ಮಾಡುವ ಜೋಡಿಗಳೂ ಇವರ ಟಾರ್ಗೆಟ್‌ ಆಗಿದ್ದು, ನಾವು ಸಿಸಿಬಿಯವರು ಎಂದು ಕೈಯಲ್ಲಿ ಒಂದು ಕೋಳವನ್ನು ಹಿಡಿದುಕೊಂಡು, ಹತ್ತಿರ ಠಾಣೆಗೆ ಕರೆದೊಯ್ಯುವುದಾಗಿ ಹೇಳಿ ಸ್ವಲ್ಪ ದೂರ ಹೋದ ನಂತರ ಆ ಜೋಡಿಯ ಫೋಟೋಗಳನ್ನು ತೆಗೆದುಕೊಂಡು ಹಣ ನೀಡಿ ಇಲ್ಲ ನಿಮ್ಮ ಫೋಟೋವನ್ನು ನಿಮ್ಮ ಪೋಷಕರಿಗೆ ಕಳುಹಿಸುವುದಾಗಿ ಹೇಳಿ ಹೆದರಿಸುತ್ತಿದ್ದರು. ಇನ್ನು ಈ ಬಗ್ಗೆ ಮಾಹಿತಿ ತಿಳಿದ ರಾಮನಗರ ಪೊಲೀಸರು ವಾಹನ ಸವಾರರಿಗೆ ಬೆದರಿಸಿ ಹಣ ಪಡೆಯುತ್ತಿದ್ದ ರಘು ಮತ್ತು ರವೀಶ್‌ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಗುಂಪಿನ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು ಅವನ ಶೋಧಕಾರ್ಯದಲ್ಲಿದ್ದಾರೆ ರಾಮನಗರ ಪೊಲೀಸರು.

ಇನ್ನು ನಿಮಗೆ ಯಾರಾದರು ನಾವು ಪೊಲೀಸರು ಹಣ ನೀಡಿ ಎಂದು ಬೆದರಿಸುವ ಕೆಲಸ ಮಾಡಿದರೆ ಅವರ ವಿರುದ್ಧ ಧೈರ್ಯವಾಗಿ ಹತ್ತಿರದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ಎಂದು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಎ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top