ಬಿಸಿಸಿಐಗೆ ಶಾಕ್‌ ಕೊಟ್ಟ ನ್ಯೂಜಿಲೆಂಡ್‌..!

ಕೊರೋನಾ ಭೀತಿಯಿಂದಾಗಿ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ನಡೆಯ ಬೇಕಾಗಿದ್ದ ಟಿ೨೦ ವಿಶ್ವಕಪ್‌ ಟೂರ್ನಿ ರದ್ದಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಈಗ ಬಿಸಿಸಿಐ ವಿಶ್ವಕಪ್‌ ವೇಳಾ ಪಟ್ಟಿಯ ಸಮಯದಲ್ಲೇ ಐಪಿಎಲ್‌ ಟೂರ್ನಿಯನ್ನು ನಡೆಸುವ ತವಕದಲ್ಲಿದೆ, ಇನ್ನು ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಿನಲ್ಲಿ ಭಾರತದಲ್ಲಿ ಕೊರೋನಾ ಕಂಟ್ರೋಲ್‌ಗೆ ಬಂದರೇ ಭಾರತದಲ್ಲಿಯೇ ಐಪಿಎಲ್‌ ಆಯೋಜನೆ ಮಾಡಲು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಇನ್ನು ಕೊರೋನಾ ಕಂಟ್ರೋಲ್‌ಗೆ ಬರದೇ ಹೋದಲ್ಲಿ ಐಪಿಎಲ್‌ ಅನ್ನು ಬೇರೆ ದೇಶದಲ್ಲಿ ಆಯೋಜನೆ ಮಾಡೋ ಪ್ಲಾನ್‌ ಅನ್ನು ಕೂಡ ಮಾಡಿಕೊಳ್ತಾ ಇದೆ.

ಈಗಾಗಲೇ ಶ್ರೀಲಂಕಾ ಮತ್ತು ಯುಎಇ ದೇಶಗಳು ಐಪಿಎಲ್‌ ಆಯೋಜನೆ ಬಗ್ಗೆ ಉತ್ಸುಕತೆ ವಹಿಸಿದ್ದು, ಬಿಸಿಸಿಐಗೆ ಮನವಿಯನ್ನು ಸಹ ಸಲ್ಲಿಸಿದೆ. ಹೀಗಿರುವಾಗಲೇ ಐಪಿಎಲ್‌ ಟೂರ್ನಿ ಆಯೋಜನೆ ಮಾಡಲು ನ್ಯೂಜಿಲೆಂಡ್‌ ಕೂಡ ಉತ್ಸುಕವಾಗಿದೆ ಎಂದು ಇತ್ತಿಚೆಗೆ ಬಿಸಿಸಿಐನ ವಕ್ತಾರರು ಹೇಳಿಕೆಯನ್ನು ನೀಡಿದ ಬೆನ್ನಲ್ಲೇ, ನ್ಯೂಜಿಲೆಂಡ್‌ನ ಕ್ರಿಕೆಟ್‌ ಬೋರ್ಡ್‌ ಈ ರೀತಿಯ ಯಾವುದೇ ಮನವಿಯನ್ನು ನಾವು ಬಿಸಿಸಿಐಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯೂಜಿಲೆಂಡ್‌ ಕ್ರಿಕೆಟ್‌ ಬೋರ್ಡ್‌ನ ವಕ್ತಾರರಾದ ರಿಚರ್ಡ್‌, ನಾವು ಐಪಿಎಲ್‌ ಆಯೋಜಿಸುವ ಕುರಿತು ಯಾವುದೇ ಪ್ರಸ್ತಾವನೆಯನ್ನು ನಾವು ಬಿಸಿಸಿಐಗೆ ನೀಡಿಲ್ಲ ಎಂದು ಹೇಳಿದ್ದಾರೆ.

ಐಪಿಎಲ್‌ ಆಯೋಜನೆ ಮಾಡಲು ಬಿಸಿಸಿಐಗೆ ನ್ಯೂಜಿಲೆಂಡ್‌ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ, ಈ ರೀತಿಯ ಸುದ್ದಿ ಸತ್ಯಕ್ಕೆ ದೂರವಾದದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ನಾವೂ ಬಿಸಿಸಿಐ ಜೊತೆ ಯಾವುದೇ ಮಾತುಕತೆ ಹಾಗೂ ಚರ್ಚೆಯನ್ನು ನಡೆಸಿಲ್ಲ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ ಬೋರ್ಡ್‌ನ ವಕ್ತಾರ ರಿಚರ್ಡ್‌ ಹೇಳಿದ್ದಾರೆ.

ಇನ್ನು ಈಗಾಗಲೇ ಆಟಗಾರರ ಹಿತದೃಷ್ಟಿಯಿಂದ ಏಷ್ಯಾ ಕಪ್‌ ಟೂರ್ನಿಯನ್ನು ರದ್ದು ಮಾಡಿದ್ದು, ಈಗಾಗಲೇ ಐಪಿಎಲ್‌ನಲ್ಲಿ ದೇಶೀ ಪ್ರತಿಭೆಗಳನ್ನು ಬಳಸಿಕೊಂಡು ಐಪಿಎಲ್‌ ಟೂರ್ನಿಯನ್ನು ನಡೆಸಬೇಕು ಅನ್ನೋ ಚಿಂತನೆಯಲ್ಲೂ ಬಿಸಿಸಿಐ ಇದೆ. ಹೀಗಿರುವಾಗ ಐಪಿಎಲ್‌ ಭಾರತದಲ್ಲಿ ನಡೆಯಲಿದೆಯೇ ಅಥವಾ ಬೇರೆ ದೇಶದಲ್ಲಿ ಆಯೋಜನೆ ಆಗಲಿದೆಯೇ ಅನ್ನೋ ಅನುಮಾನ ಈಗ ಕ್ರಿಕೆಟ್‌ ಅಭಿಮಾನಿಗಳಲ್ಲೂ ಮನೆಮಾಡಿದೆ.

ಕ್ರಿಕೆಟ್‌ ಉಳಿವಿಗಾಗಿ ಐಪಿಎಲ್‌ ಅವಶ್ಯಕ-ಜಸ್ಟಿನ್‌ ಲ್ಯಾಂಗರ್‌.!

ಇನ್ನು ಕೊರೋನಾ ಭೀತಿಯಿಂದಾಗಿ ಕ್ರಿಕೆಟ್‌ ಟೂರ್ನಿಗಳು ರದ್ದಾಗುತ್ತಿರುವ ಬೆನ್ನಲ್ಲೇ ಜಸ್ಟಿನ್‌ ಲ್ಯಾಂಗರ್‌ ಒಂದು ಹೇಳಿಕೆಯನ್ನು ನೀಡಿದ್ದಾರೆ. ಜಗತ್ತಿನಲ್ಲಿ ಕ್ರಿಕೆಟ್‌ ಉಳಿಯ ಬೇಕಾಗದರೆ ಐಪಿಎಲ್‌ ಅಗತ್ಯ ಎಂದು ಹೇಳಿದ್ದಾರೆ. ಕ್ರಿಕೆಟ್‌ ಭವಿಷ್ಯದಲ್ಲಿ ಉಳಿಯಬೇಕಾದರೆ ಐಪಿಎಲ್‌ ಆಗತ್ಯವಾಗಿ ಬೇಕು, ಅದೆಷ್ಟೋ ಪ್ರತಿಭೆಗಳು ಐಪಿಎಲ್‌ನಿಂದ ಹೊರ ಬರುತ್ತಿದ್ದಾರೆ. ಶ್ರೇಷ್ಠ ಕ್ರಿಕೆಟಿಗರು ಭಾಗಿಯಾಗುವ ಐಪಿಎಲ್‌ ನಡೆಯದೇ ಇದ್ದರೆ ಆ ವರ್ಷ ಅರ್ಥಹೀನ ಎಂದು ಮಾಜಿ ಕ್ರಿಕೆಟಿಗ ಜಸ್ಟಿನ್‌ ಲ್ಯಾಂಗರ್‌ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top