ಹೊಸ ಇತಿಹಾಸ ಸೃಷ್ಟಿಸಲು ರೆಡಿಯಾದ ಯಶ್‌ ಅಭಿಮಾನಿಗಳು..!

yash birthday special

ಒಬ್ಬ ಸ್ಟಾರ್‌ ನಟನ ಬರ್ತ್‌ ಡೇ ಹತ್ತಿರ ಬರುತ್ತಿದೆ ಅಂದರೆ ಸಾಕು, ಆತನ ಅಭಿಮಾನಿಗಳು ತನ್ನ ನೆಚ್ಚಿನ ಸ್ಟಾರ್‌ ನಟನ ಬರ್ತಡೇಯನ್ನು ಟ್ರೆಂಡಿಂಗ್‌ ಮಾಡಲು ಅನೇಕ ರೀತಿಯ ಯೋಜನೆಗಳನ್ನು ಹಾಕಿಕೊಳ್ತಾರೆ, ಇನ್ನು ತನ್ನ ಸ್ಟಾರ್‌ ನಟನ ಬರ್ತ್‌ಡೇಯನ್ನು ಗ್ರ್ಯಾಂಡ್‌ ಆಗಿ ಆಚರಿಸಬೇಕು, ಟ್ವೀಟರ್‌, ಫೇಸ್‌ಬುಕ್‌ಗಳಲ್ಲಿ ಬಾಸ್‌ ಬರ್ತ್‌ಡೇಯನ್ನು ಟ್ರೆಂಡ್‌ ಮಾಡ್ಬೇಕು ಅಂತ ಇರ್ತಾರೆ, ಆದ್ರೆ ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳು ಮಾತ್ರ ಈ ಬಾರಿ ಯಶ್‌ ಬರ್ತ್‌ಡೇಯನ್ನು ವಿಭಿನ್ನವಾಗಿಸಲು ಹೊರಟ್ಟಿದ್ದಾರೆ.

ಅಭಿಮಾನಿಗಳಿಂದ ಪರಿಸರ ಕಾಳಜಿ…!ನಮ್ಮ ಯಶ್ ಅವರ ಪರಿಸರ ಕಾಳಜಿ ಇಂದ ಪ್ರೇರಣೆಗೊಂಡು ಇದೇ 17ನೇ ತಾರೀಖಿನಂದು ಪ್ರತಿ ಜಿಲ್ಲೆಗಳಲ್ಲಿ 24 ಗಂಟೆ…

Posted by YashoMarga on Monday, 11 November 2019

ಹೌದು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹುಟ್ಟುಹಬ್ಬಕ್ಕೆ ಇನ್ನು 50 ದಿನಗಳು ಇರುವಾಗಲೇ ಹೊಸದೊಂದು ಟ್ರೆಂಡ್‌ ಮಾಡಲು ಹೊರಟ್ಟಿದ್ದಾರೆ ರಾಕಿ ಭಾಯ್‌ ಅಭಿಮಾನಿಗಳು, ಇದೇ 17ನೇ ತಾರೀಖಿನಂದು ಪ್ರತಿ ಜಿಲ್ಲೆಯಲ್ಲಿ 24 ಗಂಟೆ ಗಿಡ ನೆಡುವ ಮೂಲಕ ಪರಿಸರ ಪ್ರೇಮ ಮೆರೆಯಲಿದ್ದಾರೆ ಯಶ್‌ ಅಭಿಮಾನಿಗಳು, ಯಶ್‌ ಬರ್ತ್‌ಡೇಯನ್ನು ಟ್ವೀಟರ್‌ನಲ್ಲಿ ಟ್ರೆಂಡ್‌ ಮಾಡುತ್ತಿದ್ದ ಅಭಿಮಾನಿಗಳು ಇದೇ ಮೊದಲ ಬಾರಿಗೆ ಯಶ್‌ ಅವರ ಹುಟ್ಟು ಹಬ್ಬಕ್ಕೆ 50 ದಿನ ಇರುವಾಗಲೇ ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರುಯುವ ಮೂಲಕ ಹೊಸ ಟ್ರೆಂಡ್‌ ಮಾಡುತ್ತಿದ್ದು, ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ರೆಡಿಯಾಗುತ್ತಿದ್ದಾರೆ ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top