ಶಂಕ್ರಣ್ಣನ ಮಾಲ್ಗುಡಿಗೂ ವಿಜಯ್ ಮಾಲ್ಗುಡಿಗೂ ಇದ್ಯಾ ನಂಟು..!

new malgudi days kannada movie

ಮಾಲ್ಗುಡಿ ಡೇಸ್ ಎಂಬ ಶಬ್ದ ನಮ್ಮ ಕಿವಿಗೆ ಬಿದ್ದಾಕ್ಷಣ ನಮ್ಮ ಕಿವಿ ಒಮ್ಮೆಲೆ ನೆಟ್ಟಗಾಗುತ್ತೆ ಇನ್ನು ಶಂಕ್ರಣ್ಣ ನೆನಪಿಗೆ ಬರ್ತಾರೆ, ಆದ್ರೆ ಈಗ ಮತ್ತೆ ಅದೇ ಹೆಸರು ಈಗ ಸ್ಯಾಂಡಲ್‍ವುಡ್‍ನಲ್ಲಿ ಕೇಳಿಸೋಕೆ ಶುರುವಾಗಿದೆ.

ಹೌದು ಈಗ ಆ ಹೆಸರಿನಲ್ಲಿ ಸಿನಿಮಾ ಬರ್ತಾ ಇದೆ, ಆ ಸಿನಿಮಾಗೆ ನಾಯಕನಾಗಿ ನಮ್ಮ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಟಿಸ್ತಾ ಇದ್ದಾರೆ. ಇತ್ತೀಚೆಗೆ ಸಿನಿಮಾದ ಪೋಸ್ಟರ್ ಒಂದು ರಿಲೀಸ್ ಆಗಿದ್ದು ಆ ಪೋಸ್ಟರ್ ಈಗ ಗಾಂಧೀನಗರದಲ್ಲಿ ಟಾಕ್‍ಆಫ್ ದಿ ಟೌನ್ ಆಗಿದೆ, ವಿಭಿನ್ನ ಗೆಟಪ್‍ನಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿರೋದೆ ಇದಕ್ಕೆ ಪ್ರಮುಖ ಕಾರಣ.

malgudi days poster launch

ಹೌದು ವಯಸ್ಸಾದ ಅಜ್ಜನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಪೋಸ್ಟರ್ ಒಂದನ್ನು ಮಾಲ್ಗುಡಿ ಡೇಸ್ ಚಿತ್ರ ತಂಡ ರಿಲೀಸ್ ಮಾಡಿದ್ದು, ಚಿತ್ರದ ಬಗ್ಗೆ ಒಂದಿಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ, ಅಲ್ಲದೇ ಈ ಚಿತ್ರದಲ್ಲಿ ಏನೋ ವಿಶೇಷ ಇದೆ ಅನ್ನೋದನ್ನ ಪೋಸ್ಟರ್ ತೋರಿಸಿಕೊಟ್ಟಿದೆ. ಕಿಶೋರ್ ಮೂಡಬಿದ್ರೆ ನಿರ್ದೇಶನದಲ್ಲಿ ಮಾಲ್ಗುಡಿ ಡೇಸ್ ಚಿತ್ರ ರೆಡಿಯಾಗ್ತಾ ಇದ್ದು, ಚಿತ್ರಕ್ಕೆ ಕೆ.ರತ್ನಾಕರ್ ಕಾಮತ್ ಬಂಡವಾಳ ಹೂಡಿದ್ದಾರೆ. ಉದಯ್ ಲೀಲಾ ಕ್ಯಾಮರ ಕೈಚಳಕ, ಗಗನ್ ಬಡೇರಿಯಾ ಸಂಗೀತದ ಇಂಪು ಈ ಚಿತ್ರಕ್ಕೆ ಇರಲಿದೆ.

ಈಗಾಗ್ಲೇ ಚಿತ್ರದ ಎಲ್ಲಾ ವರ್ಕ್ ಮುಗಿದಿದ್ದು, ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ತಾ ಇದೆ, ಪೋಸ್ಟರ್ ಈಗ ಸಖತ್ ಕ್ಯೂರ್ಯಾಸಿಟಿ ಹುಟ್ಟಿಸಿದ್ದು ಮಾಲ್ಗುಡಿ ಡೇಸ್ ಚಿತ್ರ ವಿಜಯ್ ರಾಘವೇಂದ್ರಗೆ ಒಂದು ಮೈಲಿಗಲ್ಲು ಆಗೋದ್ರಲ್ಲಿ ಅನುಮಾನವಿಲ್ಲ ಅಂತಿದೆ ಗಾಂಧಿನಗರ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top