
ಜಿಯೋ ಗ್ರಾಹಕರಿಗೆ ಈಗ ಮತ್ತೆ ಇನ್ನೊಂದು ಹೊಸ ಸಂತೋಷದ ಸುದ್ದಿ ಸಿಕ್ಕಿದೆ, ಹೌದು ಜಿಯೋ ಬಳಕೆದಾರರಿಗೆ ಬಂಪರ್ ಆಫರ್ ನೀಡಿತ್ತಿರೋ ಜಿಯೋ, ಇತ್ತಿಚೆಗೆ ಆಲ್ ಇನ್ ಒನ್ ಪ್ಲಾನ್ ಅಡಿಯಲ್ಲಿ ಹೊಸ ಪ್ಲಾನ್ಗಳನ್ನು ಪರಿಚಯ ಮಾಡಿತ್ತು, ಆದ್ರೆ ಈಗ ಜಿಯೋ ಇನ್ನೊಂದು ಹೊಸ ಯೋಜನೆಯಲ್ಲಿ ಪರಿಚಯಿಸುವ ಮೂಲಕ ಜಿಯೋ ಗ್ರಾಹಕರಿಗೆ ದೀಪಾವಳಿ ಹಬ್ಬದ ಭರ್ಜರಿ ಗಿಫ್ಟ್ ನೀಡಿದೆ, ಹೌದು ಕೇವಲ 75 ರೂಪಾಯಿಗೆ 3 ಜಿಬಿ ಡಾಟಾ ಕೊಡುವ ಮೂಲಕ ಹೊಸ ಯೋಜನೆಯೊಂದನ್ನು ಪ್ರಾರಂಭ ಮಾಡಿದೆ, ಈ ಹೊಸ ಪ್ಲಾನ್ ನಲ್ಲಿ 4 ರೀತಿಯ ಟ್ಯಾರಿಫ್ಗಳಿದ್ದು 75ರೂ,125ರೂ,155ರೂ, ಮತ್ತು 185ರೂಗಳ ಹೊಸ ಬೆಲಯಲ್ಲಿ ಆಲ್ ಇನ್ ಒನ್ ಪ್ಯಾಕ್ ಅನ್ನು ಖರೀದಿಸಬಹುದಾಗಿದೆ, ಆದ್ರೆ ಈ ಎಲ್ಲಾ ಪ್ಲಾನ್ಗಳು ಸಹ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಜಿಯೋ ಪ್ರಿಪೇಯ್ಡ್ ಗ್ರಾಹಕ ಪ್ರತಿ ತಿಂಗಳು 75 ರೂಪಾಯಿಯ ರೀಚಾರ್ಜ್ ಮಾಡಿಸಿದರೆ ಒಂದು ತಿಂಗಳಿಗೆ 3 ಜಿಬಿ ಡಾಟಾವನ್ನು ಪಡೆಯುವಿರಿ, ಇದರಲ್ಲಿ ಪ್ರತಿದಿನ 0.10 ಜಿಬಿ ಡೆಟಾ, ಜಿಯೋ ಟು ಜಿಯೋ ಅನಿಯಮಿತ ಉಚಿತ ಕರೆಗಳು, ಇತರೆ ನೆಟ್ವರ್ಕ್ಗಳಿಗೆ 500 ಉಚಿತ ಕರೆಗಳು ಮತ್ತು ಪ್ರತಿದಿನ 500 ಉಚಿತ ಎಸ್ಎಂಎಸ್ಗಳು ಲಭಿಸಲಿದೆ.

125ರೂಪಾಯಿಯ ರಿಚಾರ್ಜ್ ಮಾಡಿಸಿದ್ರೆ ಪ್ರತಿದಿನ 0.50 ಜಿಬಿ ಡೇಟಾ, 300 ಉಚಿತ ಎಸ್ಎಂಎಸ್ಗಳು ಮತ್ತು ಜಿಯೋ ಟು ಜಿಯೋ ಉಚಿತ ಕರೆಗಳು ಮತ್ತು 500 ಬೇರೆ ನೆಟ್ವರ್ಕ್ಗೆ ಕರೆಗಳನ್ನು ಮಾಡಬಹುದು
155ರೂಪಾಯಿಗಳ ರಿಚಾರ್ಜ್ ಮಾಡಿಸಿದ್ರೆ ಪ್ರತಿದಿನ ಒಂದು ಜಿಬಿ ಡೆಟಾ ಮತ್ತು ಪ್ರತಿದಿನ 100 ಉಚಿತ ಎಸ್ಎಂಎಸ್ಗಳು, ಜಿಯೋ ಟು ಜಿಯೋ ಉಚಿತ ಕರೆಗಳ ಜೊತೆ 500 ಉಚಿತ ಬೇರೆ ನೆಟ್ವರ್ಕ್ಗಳಿಗೆ ಕರೆಗಳನ್ನು ಮಾಡಬಹುದು.

ಕೊನೆಯದಾಗಿ 185ರೂಪಾಯಿ ರಿಚಾರ್ಜ್ ಮಾಡಿಸಿದ್ರೆ 28 ದಿನಗಳಿಗೆ 56 ಜಿಬಿ ಡೆಟಾ ಜೊತೆಗೆ ಪ್ರತಿದಿನ 100 ಉಚಿತ ಎಸ್ಎಂಎಸ್ಗಳು , ಜಿಯೋ ಟು ಜಿಯೋ ಉಚಿತ ಕರೆಗಳು, ಜೊತೆಗೆ ಬೇರೆ ನೆಟ್ವರ್ಕ್ಗಳಿಗೆ 500 ಉಚಿತ ಕರೆಗಳನ್ನು ಸಹ ಮಾಡಬಹುದಾಗಿದೆ.

ಈ ನಾಲ್ಕು ಹೊಸ ಯೋಜನೆಗಳು ಭರ್ಜರಿಯಾಗಿದ್ದು ಜಿಯೋ ಬಳಕೆಗೆ ದಾರರಿಗೆ ಈ ಸೇವೆಗಳು ಇನ್ನಷ್ಟು ಅಗ್ಗವಾಗುವುದರಲ್ಲಿ ಆಶ್ವರ್ಯವೇ ಇಲ್ಲ.
