ದರ್ಶನ್‍ಗಾಗಿ ಮತ್ತೆ ಕನ್ನಡಕ್ಕೆ ಬಂದ್ರು ನಯನತಾರ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ಅಂದ್ರೆ ಅದು ರಾಜವೀರ ಮದಕರಿ' ಈಗಾಗಲೇ ರಾಜವೀರ ಮದಕರಿ ಚಿತ್ರ ಭರ್ಜರಿಯಾಗಿ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದು, ಮೊದಲ ಹಂತದ ಶೂಟಿಂಗ್ ಕೂಡ ಹೈದರಬಾದ್‍ನಲ್ಲಿ ಕಂಪ್ಲೀಟ್ ಮಾಡಿದೆ, ಹೀಗಿರುವಾಗಲೇ ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿ ಯಾರು ಆಯ್ಕೆ ಆಗ್ತಾರೆ ಅನ್ನೋ ಮಾತುಗಳು ಅಭಿಮಾನಿಗಳಲ್ಲಿ ಕೇಳಿ ಬರ್ತಾ ಇತ್ತು, ಆದ್ರೆ ಈಗ ಒಂದು ಮೂಲಗಳ ಪ್ರಕಾರರಾಜವೀರ ಮದಕರಿ’ ಚಿತ್ರಕ್ಕೆ ಲೇಡಿ ಸೂಪರ್ ಸ್ಟಾರ್ `ನಯನಾ ತಾರ’ ಆಯ್ಕೆಯಾಗಿದ್ದಾರೆ ಎಂದು ಕೇಳಿ ಬರ್ತಾ ಇದೆ, ಇನ್ನು ಈ ವಿಚಾರದ ಬಗ್ಗೆ ಚಿತ್ರತಂಡ ಎಲ್ಲಿಯೂ ಹೇಳಿಕೊಂಡಿಲ್ಲ, ಇನ್ನು ನಯನ ತಾರಾ ಈ ಹಿಂದೆ ಉಪೇಂದ್ರ ನಿರ್ದೇಶನದ ಸೂಪರ್ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದು, ಈಗ ರಾಜವೀರ ಮದಕರಿ ಚಿತ್ರದ ಮೂಲಕ ಕನ್ನಡಕ್ಕೆ ಕಮ್‍ಬ್ಯಾಕ್ ಮಾಡುತ್ತಿದ್ದಾರೆ.

ಸದ್ಯ ಹೈದರಬಾದ್‍ನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿ ಎರಡೇ ಹಂತದ ಶೂಟಿಂಗ್‍ಗೆ ರೆಡಿ ಮಾಡಿಕೊಳ್ಳುತ್ತಿದ್ದು, ಚಿತ್ರದಲ್ಲಿ ಇನ್ನು ಯಾವ ಯಾವ ನಟ ನಟಿಯರು ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಕ್ಯೂರ್ಯಾಸಿಟಿ ಹೆಚ್ಚಾಗುತ್ತಲೇ ಇದೆ.

ಇದರ ನಡುವೆಯಲ್ಲಿ ಈಗ ರಾಜವೀರ ಮದಕರಿ ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿ ನಯನತಾರ ಕಾಣಿಸಿಕೊಳ್ಳಿದ್ದಾರೆ ಅನ್ನೋ ಸುದ್ದಿ ಕೇಳಿದ ಡಿ ಬಾಸ್ ಅಭಿಮಾನಿಗಳು ಈ ಎರಡು ಜೋಡಿ ತೆರೆಮೇಲೆ ಯಾವ ರೀತಿ ಮೋಡಿ ಮಾಡಲಿದ್ದಾರೆ ಅನ್ನೋದನ್ನ ಕಲ್ಪಿಸಿಕೊಳ್ಳೋಕೆ ಶುರು ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top