ವೀರೇಶ್ ಚಿತ್ರ ಮಂದಿರದಲ್ಲಿ ನಾನು ಮತ್ತು ಗುಂಡ ಹೌಸ್ ಫುಲ್!

ಮನುಷ್ಯ ಮತ್ತು ಪ್ರಾಣಿ ನಡುವಿನ ಭಾವನಾತ್ಮಕ ಸಂಬಂಧ ಹೊಂದಿರೋ ಒಂದು ನೈಜ್ಯ ಘಟನೆಯನ್ನಾಧರಿಸಿ ಮಾಡಿರೋ ನಾನು ಮತ್ತು ಗುಂಡ ಸಿನಿಮಾ ಎಲ್ಲಾ ರೀತಿಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ

https://www.instagram.com/p/B7sQEDWHTCa/

ನಾನು ಮತ್ತು ಗುಂಡ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ನಂತ್ರ, ಬಂದಿರೋ ಪೂರ್ಣಪ್ರಮಾಣದಲ್ಲಿ ಪ್ರಾಣಿಯೊಂದು ಕಾಣಿಸಿಕೊಂಡಿರುವಂತಹ ಸಿನಿಮಾ. ನೈಜತೆ ತುಂಬಿದ ತಾಜಾಕಥೆ, ಕ್ವಾಲಿಟಿ ಮೇಕಿಂಗ್, ಅದ್ಭುತ ಪರ್ಫಾರ್ಮೆನ್ಸ್ ಎಲ್ಲಾ ಆಂಗಲ್ ನಿಂದ್ಲೂ ಎಲ್ಲಾ ವರ್ಗದವರನ್ನೂ ಸೆಳೆಯುವಂತಹ ರಂಜನಿಯ ಅಂಶಗಳಿರೋ ಸಿನಿಮಾ. ಎರಡು ಗಂಟೆ ನಮ್ಮ ಊರಲ್ಲಿ, ನಮ್ಮ ನಡುವೆಯೇ ನಡೆಯುತ್ತಿರೋ ಘಟನಾವಳಿಗಳಂತೆ ಭಾಸವಾಗೋ ಈ ಭಾವನಾತ್ಮಕ ಕಥೆ ನಿಜಕ್ಕೂ ಎಂದೂ ಮರೆಯಲಾಗದಂತಹ ಕಥೆ,

ಖಂಡಿತ ನಾನು ಮತ್ತು ಗುಂಡ ಸಿನಿಮಾ ನೋಡಿ ಥಿಯೇಟರಿಂದ ಆಚೆ ಬರೋ ಪ್ರೇಕ್ಷಕ ಅಂತಹದೊಂದು ಎಮೋಷನ್ನ ಹೊತ್ತು ಆಚೆ ಬರ್ತಾರೆ. ಕಾಡುವಂತಹ ಕಥೆ ನಾನು ಮತ್ತು ಗುಂಡ. ನಗುತ್ತಾ ನಗುತ್ತಾ ಅಳಿಸೋ,ರಂಜಿಸೋ ಗುಂಡನನ್ನ ಮಿಸ್ ಮಾಡ್ದೇ ನೋಡಿ. ಗ್ಯಾರೆಂಟಿ ನೀವು ಕೊಟ್ಟ ಕಾಸಿಗೆ ಮೋಸ ಆಗೋಲ್ಲ.

ಚಿತ್ರ : ನಾನು ಮತ್ತು ಗುಂಡ
ತಾರಾಗಣ: ಶಿವರಾಜ್ ಕೆ.ಆರ್ ಪೇಟೆ, ಸಂಯುಕ್ತ ಹೊರನಾಡು, ಜಿಜಿ ಮತ್ತು ಸಿಂಬಾ ( ಶ್ವಾನ)
ನಿರ್ದೇಶನ: ಶ್ರೀನಿವಾಸ್ ತಿಮ್ಮಯ್ಯ
ಸಂಭಾಷಣೆ: ಶರತ್ ಚಕ್ರವರ್ತಿ
ಸಂಗೀತ : ಕಾರ್ತಿಕ್ ಶರ್ಮಾ
ಛಾಯಾಗ್ರಹಣ: ಚಿದಾನಂದ ಹೆಚ್.ಕೆ
ನಿರ್ಮಾಣ: ರಘು ಹಾಸನ್ (Poem Pictures)
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top