ಇದೊಂದು ಮರೆಯಲಾಗದ ಕಥೆ ಎಂದ ಪ್ರೇಕ್ಷಕರು

naanu mattu gunda public review

ನಾನು ಮತ್ತು ಗುಂಡ ಚಿತ್ರದ ಟ್ಯಾಗ್ ಲೈನ್ ಹೇಳುವಂತೆ ನಿಜಕ್ಕೂ ಇದೊಂದು ಮರೆಯಲಾಗದ ಕಥೆ. ಪ್ರಾಣಿ ಪ್ರಿಯರಿಗೆ, ಅದ್ರಲ್ಲೂ ನಾಯಿಯನ್ನ ಸಾಕಿರೋರಿಗೆ ಅದ್ರ ನಿಯತ್ತು ಪ್ರೀತಿ ಗೊತ್ತಿರೋರ ಹೃದಯಸ್ಪರ್ಶಿಸುತ್ತೆ. ನಗುವಿನಿಂದ ಶುರುವಾಗಿ, ಕೌತುಕ ತಿರುವುಗಳೊಂದಿಗೆ, ಭಾವುಕಥೆಯ ಮಡುವಿನಲ್ಲಿ ಮುಳುಗಿ ತೇಲಿಸೋ ಭಾವನಾತ್ಮಕ ಸಿನಿಮಾ ನಾನು ಮತ್ತು ಗುಂಡ.

ಇದೊಂದು ಮರೆಯಲಾಗದ ಕಥೆ ಎಂದ ಪ್ರೇಕ್ಷಕರು

ವೀರೇಶ್ ಚಿತ್ರ ಮಂದಿರದಲ್ಲಿ ನಾನು ಮತ್ತು ಗುಂಡ ಹೌಸ್ ಫುಲ್

Posted by Kannada News on Friday, 24 January 2020


ರಘುಹಾಸನ್ ಮತ್ತು ಶ್ರೀನಿವಾಸ್ ತಿಮ್ಮಯ್ಯರ ಕಥೆ ಚಿತ್ರಕಥೆ ವಿಶಿಷ್ಠವಾಗಿದೆ. ಶ್ರೀನಿವಾಸ್ ತಿಮ್ಮಯ್ಯ ಚೊಚ್ಚಲ ಚಿತ್ರದಲ್ಲಿ ತಮ್ಮೊಳಗಿನ ಅಷ್ಟು ಸಿನಿಮೋತ್ಸಾಹವನ್ನ ಹೊರಹಾಕಿದ್ದಾರೆ. ತೆರೆ ಮೇಲೆ ಅದು ಕಾಣುತ್ತೆ. ಚಿತ್ರದ ಮುಖ್ಯ ಹೈಲೈಟ್ ಅಂದ್ರೆ ಕಥೆ ಮತ್ತು ಶಿವರಾಜ್ ಕೆ.ಆರ್ ಪೇಟೆ ಹಾಗೂ ಸಿಂಬಾ ( ಗುಂಡ)ನ ಅದ್ಭುತ ಪರ್ಫಾರ್ಮೆನ್ಸ್. ಶಿವರಾಜ್ ಕೆ.ಆರ್ ಪೇಟೆ ಮತ್ತು ಸಿಂಬಾ ನಡುವಿನ ಬಾಂಡಿಂಗ್ ಅದ್ಭುತ ಅನ್ನಿಸುತ್ತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top