ಪಾಕ್ ಆಟಗಾರರ ಫೋಟೋ ಕಿತ್ತೆಸೆದ ಮೊಹಾಲಿ ಸ್ಟೇಡಿಯಂ.!

punjab cricket pca

ಪಂಜಾಬ್‍ನ ಮೊಹಾಲಿ ಸ್ಟೇಡಿಯಂನಲ್ಲಿದ್ದ 15ಕ್ಕೂ ಹೆಚ್ಚು ಪಾಕ್ ಆಟಗಾರರ ಫೋಟೋಗಳನ್ನ ಪಿಸಿಎ ತೆಗೆದು ಹಾಕಿದೆ. ಮೊನ್ನೆ ಪುಲ್ವಾಮಾ ದುರಂತದಲ್ಲಿ ಮಡಿದವರಿಗೆ ಈ ಮೂಲಕ ಗೌರವ ಸೂಚಿಸಿದ್ದಾರೆ. ಪುಲ್ವಾಮಾ ಉಗ್ರರ ದಾಳಿಯಿಂದ ಇಡೀ ಭಾರತವೇ ಆಕ್ರೋಶವನ್ನು ವ್ಯಕ್ತಪಡಿಸಿದೆ ಈ ವೇಳೆ ನಾವು ಸಹ ಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಮೂಲಕ ಸ್ಟೇಡಿಯಂನ ಲಾನ್ ಮತ್ತು‌ ರಿಸೆಪ್ಷನ್ ನಲ್ಲಿ‌ ಇದ್ದ ಪಾಕ್ ಆಟಗಾರರಾದ ಶಾಹೀದ್ ಅಫ್ರಿದಿ, ಜಾವಿದ್ ಮಿಯಾನ್ ದಾದ್, ವಾಸಿಂ ಅಕ್ರಂ, ಹಾಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಸೇರಿ 15 ಆಟಗಾರರ ಫೋಟೋಗಳನ್ನ ತೆಗೆಯಲಾಗಿದೆ ಎಂದು ಪಿಸಿಎ ಖಜಾಂಚಿ ಅಜಯ್ ತ್ಯಾಗಿ ಹೇಳಿದ್ದಾರೆ. ಇನ್ನು 2011ರ ವರ್ಲ್ಡ್ ಕಪ್ ನಲ್ಲಿ ಇಂಡಿಯಾ ವಿರುದ್ಧ ಅಫ್ರಿದಿ ನಾಯಕತ್ವದ ಪಾಕ್ ತಂಡ 29ರನ್ ಗಳಿಂದ ಇಲ್ಲಿ ಸೋತಿತ್ತು. ಒಟ್ಟಿನಲ್ಲಿ ಈಗ ಮೊಹಾಲಿಯ ಸ್ಟೇಡಿಯಂನಲ್ಲಿ ಪಾಕ್ ಆಟಗಾರರ ಫೋಟೋ ತೆಗೆದು ಹಾಕುವ ಮೂಲಕ ಪುಲ್ವಾಮಾ ಅಟ್ಯಾಕ್ ನ ಆಕ್ರೋಶವನ್ನು ಪಿಸಿಎ ಹೊರಹಾಕಿದೆ.

Read : ಕೊನೆಗೂ ಬಯಲಾಯ್ತು ಸ್ಮೃತಿ ಮಂದಾನ ಜೆರ್ಸಿ 18 ನಂಬರ್ ಸೀಕ್ರೆಟ್.!

2019ರ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ನನ್ನ ಫೇವರೇಟ್ ಟೀಂ ಅಲ್ಲ – ಗವಾಸ್ಕರ್

Read :ದೇವರನ್ನು ಒಲಿಸಿಕೊಳ್ಳಲು ನನ್ನ ಮಗನನ್ನು ಬಲಿಕೊಡಲು ಅನುಮತಿ ಕೊಡಿ!

Read : ಒಂದು ರಾತ್ರಿಗೆ 1ಕೋಟಿ ಆಫರ್ ಮಾಡ್ತಾರೆ-ನಟಿ ಸಾಕ್ಷಿ.!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top