‘ಮೋದಿ’ ದೇವಾಲಯ ಕಟ್ಟಿದ ರೈತ! Modi Temple Video

ಭಾರತದ ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವದಲ್ಲೇ ಜನಪ್ರಿಯತೆ ಪಡೆದಿರುವ ನಾಯಕರು. ಸಹಜವಾಗಿ ವಿರೋಧಿಗಳಿದ್ದರೂ ಅಭಿಮಾನಿಗಳ ಸಂಖ್ಯೆಯೇ ಜಾಸ್ತಿ ಅನ್ನೋದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಅಂತೆಯೇ ತಮಿಳು ನಾಡಿನ ತಿರುಚ್ಚಿ ಜಿಲ್ಲೆಯ ಎರಕುಡಿ ಗ್ರಾಮದ ರೈತರೊಬ್ಬರು ಮೋದಿಗಾಗಿ ನಮೋ ದೇವಾಲಯವನ್ನು ಕಟ್ಟಿದ್ದಾರೆ.

50 ವರ್ಷದ ಶಂಕರ್ ಎಂಬ ರೈತ ಮೋದಿ ಅಭಿಮಾನಿಯಾಗಿದ್ದು, ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ, ತಮ್ಮ ಜಮೀನನಲ್ಲಿ 8 ‍x 8 ಅಡಿ ಜಾಗದಲ್ಲಿ ಮಂದಿರ ಕಟ್ಟಿ, ಮೋದಿ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ. ದೇವಾಲಯ ನಿರ್ಮಾಣಕ್ಕೆ 8 ತಿಂಗಳು ಹಿಡಿದಿದ್ದು, 1.2 ಲಕ್ಷ ರೂ ವೆಚ್ಚ ತಗಲಿದೆ. ಇನ್ನು ಮೋದಿ ವಿಗ್ರಹದ ಎರಡೂ ಬದಿಗಳಲ್ಲಿ ದೀಪ ಬೆಳಗುತ್ತಿದ್ದಾರೆ. ನಿತ್ಯ ಆರತಿ ಎತ್ತಿ ಪೂಜಿಸುತ್ತಾರೆ. “ಮೋದಿ ದೇವರನ್ನು” ಶಂಕರ್ ಭಕ್ತಿ, ಪ್ರೀತಿಯಿಂದ ಅಯ್ಯ ಎಂದು ಕರೆಯುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top