ತಂಡದ ಒಳಜಗಳ ಮಿಥಾಲಿ ರಾಜ್ ನಿವೃತ್ತಿ.!

mithali raj retired

ಮಹಿಳಾ ಟೀಂ ಇಂಡಿಯಾದಲ್ಲಿ ಯಾವುದು ಸರಿ ಇಲ್ಲ ಅಂತ ಅನಿಸುತ್ತಿದೆ. ಹೌದು ಮಹಿಳಾ ಟೀಂ ಇಂಡಿಯಾದಲ್ಲಿ ಒಳ ಜಗಳ ಈಗ ತಾರಕಕ್ಕೆ ಏರಿದೆ. ದಾಖಲೆಗಳ ಆಟಗಾರ್ತಿ ಮಿಥಾಲಿ ರಾಜ್ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರೆ ಅನ್ನೋ‌ ಸುದ್ದಿ ಈಗ ಹರಿದಾಡ್ತಾ ಇದೆ. ಮಿಥಾಲಿ ರಾಜ್ ಉತ್ತಮ ಫಾರ್ಮ್ ನಲ್ಲಿ ಇದ್ದರು ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ‌ ಟಿ20 ಪಂದ್ಯದಿಂದ‌ ಕೈ ಬಿಡಲಾಗಿದ್ದು, ಇದು ತಂಡದೊಳಗಿನ ಒಳಜಗಳದಿಂದಲೇ ಮಿಥಾಲಿ ರಾಜ್ ಅವರನ್ನು ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿಬರ್ತಾ ಇದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ನಡೆಯಲಿರೋ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯೊಂದಿಗೆ ದಾಖಲೆಗಳ ಒಡತಿ ಮಿಥಾಲಿರಾಜ್ ಚುಟುಕು ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತಿದೆ. ಇನ್ನು ಮಿಥಾಲಿ ರಾಜ್ 85 ಟಿ20 ಪಂದ್ಯಗಳನ್ನು ಆಡಿದ್ದು 2283 ರನ್ ಬಾರಿಸಿದ್ದು ಇದರಲ್ಲಿ 17ಅರ್ಧ ಶತಕಗಳು ಸೇರಿವೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top