ಒಂದು ಜೋಳದಿಂದ ಆಗುತ್ತೆ ಗರ್ಭೀಣಿಯರ ಆರೋಗ್ಯ ಸಮಸ್ಯೆ ದೂರ..!

ಒಂದು ಜೋಳದಿಂದ ಆಗುತ್ತೆ ಗರ್ಭೀಣಿಯರ ಆರೋಗ್ಯ ಸಮಸ್ಯೆ ದೂರ

ನಾವು ನೀವೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುತ್ತೇವೆ, ಅದಕ್ಕೂ ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಅನೇಕ ರೀತಿಯಲ್ಲಿ ಖರ್ಚುಗಳನ್ನು ಮಾಡುತ್ತೇವೆ, ಅದರೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಕೂಡ ನಾವು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು, ಅದರಂತೆ ಇಂದು ಮೆಕ್ಕೆ ಜೋಳ ತಿಂದರೆ ಏನೆಲ್ಲಾ ಉಪಯೋಗಳಿವೆ ಅನ್ನೋದನ್ನ ನಾವಿವತ್ತು ತಿಳಿದುಕೊಳ್ಳೋಣ..

  1. ಮೆಕ್ಕೆ ಜೋಳದಲ್ಲಿ ಅಧಿಕವಾದ ಮ್ಯಾಗ್ನಿಷಿಯಂ, ಕಬ್ಬಿಣದ ಅಂಶ, ರಂಜಕ ಇರುವುದರಿಂದ ಅದು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ, ಅಲ್ಲದೇ ಕಿಡ್ನಿಯನ್ನು ಆರೋಗ್ಯವಾಗಿಡಲು ಉತ್ತಮವಾದ ತಿನಿಸಾಗಿದೆ.
  2. ಮೆಕ್ಕೆ ಜೋಳದಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಇದು ಹೃದಯ ಸಂಬಂಧಿ ಕಾಯಿಲೆಗೆ ಉತ್ತಮವಾದ ಮದ್ದು, ಜೊತೆಗೆ ಇದರಲ್ಲಿ ಉತ್ತಮ ಕೊಲೆಸ್ಟ್ರಾಲ್ ಇರುವುದರಿಂದ ಇದು ದೇಹದ ಆರೋಗ್ಯವನ್ನು ಉತ್ತಮ ಮಾಡುತ್ತದೆ.
  3. ಮೆಕ್ಕೆ ಜೋಳದಲ್ಲಿ ನಾರಿನ ಅಂಶ ಇರುವುದರಿಂದ ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ಮಲಬದ್ಧತೆಯನ್ನು ದೂರಮಾಡುತ್ತದೆ ಜೊತೆಗೆ ಕರುಳಿನ ಕ್ಯಾನ್ಸರ್ ಕಾಯಿಲೆ ತಡೆಗಟ್ಟುವ ಗುಣವನ್ನು ಜೋಳ ಹೊಂದಿದೆ.
  4. ವಾರದಲ್ಲಿ ಎರಡರಿಂದ ಮೂರು ದಿನ ಮೆಕ್ಕೆ ಜೋಳ ತಿನ್ನುವುದರಿಂದ ಅದು ನಿಮ್ಮ ತ್ವಚೆಯನ್ನು ಮುಪ್ಪಾಗದಂತೆ ನೋಡಿಕೊಳ್ಳುತ್ತದೆ, ಇದರ ಎಣ್ಣೆಯನ್ನು ಮೈಗೆ ಹಚ್ಚಿಕೊಂಡರೆ ಅದು ಅಲರ್ಜಿಯನ್ನು ಸಹ ತಡೆಗಟ್ಟುತ್ತದೆ.
  5. ಗರ್ಭೀಣಿಯರು ಉತ್ತಮವಾದ ಆರೋಗ್ಯವನ್ನು ಹೊಂದಬೇಕಾದರೆ ಅವರು ಪ್ರತಿದಿನ ಒಂದು ಮೆಕ್ಕೆ ಜೋಳವನ್ನು ತಿನ್ನಲೇ ಬೇಕು ಇದನ್ನು ಸೇವನೆ ಮಾಡುವುದರಿಂದ ಅದು ಫಾಲಿಕ್ ಆಸಿಡ್ ಕೊರತೆಯನ್ನು ನೀಗಿಸುತ್ತದೆ, ಫಾಲಿಕ್ ಆಸಿಡ್ ಕೊರತೆಯಿಂದಾಗಿ ಗರ್ಭೀಣಿಯರಲ್ಲಿ ಕೈ ಕಾಲು ಊತ, ಅಧಿಕ ರಕ್ತದೊತ್ತಡ ಉಂಟಾಗಬಹುದು ಅಲ್ಲದೇ ಕಡಿಮೆ ತೂಕದಲ್ಲಿ ಮಗು ಹುಟ್ಟುತ್ತದೆ, ಅಲ್ಲದೇ ಪ್ರತಿದಿನ ಮೆಕ್ಕೆ ಜೋಳಕ್ಕೆ ಸಂಬಂಧಿಸಿದ ಆಹಾರವನ್ನು ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ.

ಈ ರೀತಿ ಮೆಕ್ಕೆ ಜೋಳವನ್ನು ಪ್ರತಿದಿನ ಉಪಯೋಗಿಸುವುದರಿಂದ ಗರ್ಭೀಣಿಯರು ಉತ್ತಮವಾದ ಆರೋಗ್ಯದ ಜೊತೆ ಉತ್ತಮ ಆರೋಗ್ಯದ ಮಗುವನ್ನು ಪಡೆಯಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top