ಮಾಂಗಲ್ಯ ಸರವನ್ನೇ ನುಂಗಿದ ಜೋಡೆತ್ತು..! ಆಮೇಲೆ ಏನಾಯ್ತು ಗೊತ್ತಾ..?

ಮನುಷ್ಯ ತಾನು ಮಾಡೋ ಒಂದೊಂದು ತಪ್ಪಿನಿಂದ ಭೂ ಮಂಡಲದಲ್ಲಿ ಅದೆಷ್ಟೋ ಜೀವ ಸಂಕುಲಗಳು ಕಷ್ಟ ಅನುಭವಿಸುತ್ತಿದೆ, ಇನ್ನು ಮನುಷ್ಯ ಎಸೆಯೋ ತ್ಯಾಜ್ಯ ವಸ್ತುಗಳು ಈಗ ಮೂಕ ಪ್ರಾಣಿಗಳ ಹೊಟ್ಟೆ ಸೇರುತ್ತಿವೆ, ನಾನು ನೀವು ಪ್ರತಿ ನಿತ್ಯ ರಸ್ತೆ ಬದಿಯಲ್ಲಿ ಮೂಕ ಪ್ರಾಣಿ ಕಸವನ್ನು ತಿಂದು ಅರಗಿಸಿಕೊಳ್ಳಲು ಸಾಧ್ಯವಾಗದೆ ಇರುವುದನ್ನು ನಾವು ನೋಡಿರ್ತಿವಿ, ಇನ್ನು ನಾವು ಮಾಡುತ್ತಿರೋ ತಪ್ಪಿಗೆ ಆ ಮೂಕ ಪ್ರಾಣಿಗಳು ನೋವು ಅನುಭವಿಸಬೇಕಾಗಿದೆ, ಈಗ ಅಂತದ್ದೆ ಒಂದು ಘಟನೆ ಅಹಮದ್ ನಗರದಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಬೈಲ್ ಪೋಲಾ ಎಂಬ ಹಬ್ಬವನ್ನು ಆಚರಿಸಲಾಗುತ್ತದೆ, ಈ ಹಬ್ಬದ ದಿನ ನಾನಾ ಬಗೆಯ ತಿನಿಸುಗಳ ಜೊತೆ ಹಸು ಮತ್ತು ಎತ್ತುಗಳಿಗೆ ಬಣ್ಣ ಬಣ್ಣದಿಂದ ಅಲಂಕಾರ ಮಾಡಿ ಅವುಗಳಿಗೆ ಪೂಜೆ ಮಾಡಲಾಗುತ್ತದೆ, ಇನ್ನು ಸಂಜೆ ವೇಳೆ ಮಾಡೋ ಈ ಪೂಜೆ ಬಹಳ ವಿಶೇಷವಾದದ್ದು,ಈ ವೇಳೆ ಮಹಿಳೆಯರು ತಮ್ಮ ಅಮೂಲ್ಯವಾದ ವಸ್ತುಗಳನ್ನು ಇಟ್ಟು ಪೂಜೆ ಮಾಡ್ತಾರೆ, ಈ ವೇಳೆ ಮಹಿಳೆಯೊಬ್ಬಳ ಮಾಂಗಲ್ಯ ಸರವನ್ನು ಎತ್ತೊಂದು ತಿಂದಿರುವ ಘಟನೆ ನಡೆದಿದೆ, ಹೌದು ಬೈಲ್ ಪೋಲಾ ಹಬ್ಬದಂದು ಮಹಿಳೆಯೊಬ್ಬಳು ತನ್ನ ಮಾಂಗಲ್ಯ ಸರವನ್ನು ಜೋಡೆತ್ತುಗಳ ಎದುರು ಇಟ್ಟು ಪೂಜೆಮಾಡುತ್ತಿದ್ದ ವೇಳೆ ಕರೆಂಟ್ ಹೋಗಿದ್ದು,ದೀಪ ತರಲು ಹೋದ ಮಹಿಳೆ ಪಾಪಾಸ್ ಬಂದು ನೋಡಿದಾಗ ಮಾಂಗಲ್ಯ ಸರ ಕಾಣೆಯಾಗಿದೆ.

ಹೌದು ಕರೆಂಟ್ ಹೋದ ವೇಳೆ ಜೋಡೆತ್ತುಗಳ ಎದುರಿಗೆ ಇಟ್ಟಿದ್ದ ತಿನಿಸನ್ನು ಆ ಎತ್ತು ತಿಂದಿದ್ದು ಅದರ ಜೊತೆಯಲ್ಲೇ ಇದ್ದ ಮಾಂಗಲ್ಯ ಸರವನ್ನು ಸಹ ಆ ಎತ್ತು ತಿಂದುತ್ತು, ನಂತರ ಈ ವಿಷಯ ಮನೆಯವರಿಗೆ ತಿಳಿದ ಕೂಡಲೆ,ಯಾವ ಎತ್ತು ತಿಂದಿರಹುದು ಎಂದು ಪಶುವೈದ್ಯರ ಬಳಿ ಹೋಗಿದ್ದಾರೆ.ವೈದ್ಯರು `ಮೆಟಲ್ ಡಿಟೆಕ್ಟರ್’ ಮೂಲಕ ಎತ್ತುಗಳನ್ನು ತಪಾಸಣೆ ನಡೆಸಿ ಸರ ನುಂಗಿದ್ದ ಎತ್ತಿಗೆ 1ಸೆಪ್ಟೆಂಬರ್ 8’ರಂದು ಆಪರೇಶನ್ ಮಾಡಿ ಸರವನ್ನು ಹೊರಗೆ ತೆಗೆದಿದ್ದಾರೆ, ಆದ್ರೆ ಸರ ಕಳೆದುಕೊಂಡಿದ್ದ ಮಹಿಳೆ ಸರ ಮರಳಿ ಬಂತೆಂದು ಖುಷಿಪಡುತ್ತಿದ್ದರೆ, ಇತ್ತ ಮನುಷ್ಯ ಮಾಡಿದ ಸಣ್ಣ ತಪ್ಪಿನಿಂದಾಗಿ ಆ ಮೂಕ ಪ್ರಾಣಿ ಈಗ ನೋವನ್ನು ಅನುಭವಿಸುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top