ನಿಮ್ಮ ಮನೆಯಲ್ಲಿಯೇ ಇದೆ ಸಾವಿರಾರೂ ಔಷಧಿಯ ಗುಣಗಳು..ಅದನ್ನು ಬಳಸೋದು ಹೇಗೆ ಗೊತ್ತಾ..?

ನಾವು ಅನೇಕ ಕಾಯಿಲೆಗಳಿಗೆ ಹಣವನ್ನು ವ್ಯಯಿಸಿ ಆರೋಗ್ಯವನ್ನು ಗುಣಪಡಿಸಿಕೊಳ್ಳಲು ನೋಡುತ್ತೇವೆ ಆದ್ರೆ, ಆನೇಕ ಕಾಯಿಲೆ, ರೋಗಗಳಿಗೆ, ದೈಹಿಕ ತೊಂದರೆಗಳಿಗೆ ಮನೆಯಲ್ಲಿಯೇ, ಆಹಾರ, ನೀರು ಮನೆಯಲ್ಲಿರುವ ಅಡುಗೆಗೆ ಉಪಯೋಗಿಸುವ ಕೆಲವೊಂದು ವಸ್ತುಗಳನ್ನು ಬಳಸಿಕೊಂಡು ಔಷಧಿ ಮಾಡಿಕೊಂಡು ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು, ಈ ಪದ್ಧತಿ ಅನಾದಿಕಾಲದಿಂದಲ್ಲೂ ವಾಡಿಕೆಯಿಂದ, ಹಿರಿಯರಿಂದ ಮನೆಯಿಂದ ನಡೆದುಕೊಂಡು ಬಂದಿದೆ, ಆದ್ರೆ ಈ ಔಷಧಿಗಳಿಗೆ ಯಾವುದೇ ದಾಖಲೆಗಳು ಇಲ್ಲ, ಆದ್ರೆ ಇದು ಮನೆಯಲ್ಲಿ ಹಿರಿಯರಿಂದ ಬಳುವಳಿಯಾಗಿ ಬಂದಿರುವಂತಹದ್ದು.

ಯಾವಾಗಲೂ ಮನೆಮದ್ದುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದಿಂದ ಅದು ಆರೋಗ್ಯಕ್ಕೆ ಉತ್ತಮ ಅಂತಾನೇ ಹೇಳಬಹುದು..!

ಈ ಕೆಳಕಂಡ ಮನೆಮದ್ದುಗಳನ್ನು ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ..

1.ಯಾವುದೇ ಕಾಯಿಲೆ ಇರಲಿ ಹೊಟ್ಟೆ ತುಂಬ ಊಟ ಮಾಡಿದ ನಂತರ ಔಷದಿಗಳನ್ನು ತೆಗೆದುಕೊಳ್ಳುವುದು ಪ್ರತೀತಿ, ಆದ್ರೆ ಕೆಲವೊಂದು ಮನೆಮದ್ದುಗಳನ್ನು ಖಾಲಿಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಅದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

2.ಬೆಳಗ್ಗೆ ಎದ್ದ ನಂತ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ಜೇನುತುಪ್ಪವನ್ನು ಹಾಗೂ ನಿಂಬೆರಸವನ್ನು ಬೆರೆಸಿ ಕುಡಿದರೆ ನಿಮಗಿರುವ ಬೊಜ್ಜಿನ ಸಮಸ್ಯೆ ದೂರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

3.ಜಾಯಿಕಾಯಿ, ಶುಂಠಿ, ಮೆಣಸಿನ ಕಾಳು, ಹಿಪ್ಪಲಿಯನ್ನು ತೇಯ್ದು ಮಗುವಿಗೆ ಒಂದು ಚಮಚದಷ್ಟು ಬೆಳಗ್ಗಿನ ಹೊತ್ತು ನೀಡುವುದರಿಂದ ಮಗುವಿನ ಹೊಟ್ಟೆಯಲ್ಲಿರುವ ಜಂತು ಹುಳುವಿನ ಸಮಸ್ಯೆ ಬಗೆಹರಿಯುತ್ತದೆ.

4.ಹೊಟ್ಟೆ ಹಸಿದಿರುವಾಗ ಆದಷ್ಟು ನೀರನ್ನು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಹಾಗೂ ಮೂತ್ರಕೋಶದ ಸೋಂಕಿದ್ದರೆ ಅದಕ್ಕೆ ಇದು ಉತ್ತಮ ಮದ್ದು

5.ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವದರಿಂದ ಅದು ಹೊಟ್ಟೆ ಮತ್ತು ಎದೆಯುರಿಯನ್ನು ದೂರ ಮಾಡುವ ಜೊತೆಗೆ ದೇಹದಲ್ಲಿನ ವಿಷದ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

6.ನೀವೇನಾದ್ರು ಖಾಲಿ ಹೊಟ್ಟೆಯಲ್ಲಿ ಕರಿಬೇವು ಸೇವನೆ ಮಾಡುವುದರಿಂದ ನಿಮಗೆ ಸಾಮಾನ್ಯವಾಗಿ ಕಾಡುವ ಗ್ಯಾಸ್ಟ್ರಿಕ್‌ ಮತ್ತು ಆಸಿಡಿಟಿಗೆ ಇಂದು ರಾಮಬಾಣ ಅಂತಾನೇ ಹೇಳ ಬಹದು. ಅಲ್ಲದೇ ನಿಮಗಿರುವ ಕೀಲು ನೋವು ಸಮಸ್ಯೆಯನ್ನು ಸಹ ಇದು ದೂರ ಮಾಡುತ್ತದೆ.

7.ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಅದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ, ಜೊತೆಗೆ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.

8.ನಿಮ್ಮಲ್ಲಿ ಉದ್ವೇಗ ಮತ್ತು ಆತಂಕದಿಂದ ಎದೆಬಡಿತ ಹೆಚ್ಚಾಗುವ ಸಮಸ್ಯೆ ಇದ್ದರೆ ನೀವೂ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೀಬೆ ಹಣ್ಣು ತಿನ್ನುವುದರಿಂದ ಈ ಸಮಸ್ಯೆಯಿಂದ ನೀವೂ ದೂರವಾಗಬಹುದು.

ಈ ರೀತಿ ಮನೆಯಲ್ಲಿಯೇ ಸಿಗುವ ಅನೇಕ ಅಡುಗೆ ವಸ್ತುಗಳಿಂದ ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top