ಮೈಸೂರು ರಾಜರನ್ನು ಭೇಟಿಯಾದ ಮಂಡ್ಯ ಸಂಸದೆ ಸುಮಲತಾ

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೆಲ ದಿನದಿಂದ ತಮ್ಮ ಕ್ಷೇತ್ರ ಮಂಡ್ಯದ ಕೆಲ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ಕುಂದುಕೊರತೆಗಳನ್ನು ಆಲಿಸಿ ಭರವಸೆಯನ್ನು ನೀಡುತ್ತಿದ್ದಾರೆ, ಈ ನಡುವೆ ಮೈಸೂರು ರಾಜವಂಶಸ್ಥರಾದ ರಾಜಮಾತೆ ಪ್ರಮೋದ ದೇವಿ ಮತ್ತು ಯದುವೀರ್ ಒಡೆಯರ್ ಅವರನ್ನು ಅರಮೆನೆಯಲ್ಲಿ ಔಪಚಾರಿಕ ಭೇಟಿ ಮಾಡಿದ್ದಾರೆ. ಅಲ್ಲದೇ ಮಂಡ್ಯದ ಬಗ್ಗೆ ಕೆಲ ವಿಚಾರದ ಬಗ್ಗೆ ಮಾತನಾಡಿದ್ದಾರೆ..
ಸುಮಲತಾ ತಮ್ಮ ಟ್ವೀಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು.

ಅರಮನೆಗೆ ಭೇಟಿ ನೀಡಿದ್ದು, ಯದುವೀರ್ ಸುಮಲತಾರನ್ನ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇನ್ನು ಸುಮಲತಾ ರಾಜವಂಶಸ್ಥರ ಜೊತೆ ಮಂಡ್ಯದ ಬಗ್ಗೆ ಸಾಕಷ್ಟು ವಿಷಯಗಳನ್ನ ಚರ್ಚೆ ನಡೆಸಿರುವುದಾಗಿ ಹೇಳಿದ್ದು, ಮೈಸೂರು ಯದುವಂಶದ ಪರಂಪರೆಯನ್ನ ಕೊಂಡಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top