ಮಾಲ್ಗುಡಿ ಡೇಸ್ ಚಿತ್ರದ ಮೋಷನ್ ಪೋಸ್ಟರ್ Video

Malgudi days motion poster | Vijay Raghavendra

ನಟ ವಿಜಯ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರದ ಮೋಷನ್ ಪೋಸ್ಟರ್ ನ್ನು ಮಾಲ್ಗುಡಿ ಡೇಸ್ ಚಿತ್ರ ತಂಡ ರಿಲೀಸ್ ಮಾಡಿದ್ದು, ಚಿತ್ರದ ಬಗ್ಗೆ ಒಂದಿಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ, ಅಲ್ಲದೇ ಈ ಚಿತ್ರದಲ್ಲಿ ಏನೋ ವಿಶೇಷ ಇದೆ ಅನ್ನೋದನ್ನ ಮೋಷನ್ ಪೋಸ್ಟರ್ ತೋರಿಸಿಕೊಟ್ಟಿದೆ. ಕಿಶೋರ್ ಮೂಡಬಿದ್ರೆ ನಿರ್ದೇಶನದಲ್ಲಿ ಮಾಲ್ಗುಡಿ ಡೇಸ್ ಚಿತ್ರ ರೆಡಿಯಾಗ್ತಾ ಇದ್ದು, ಚಿತ್ರಕ್ಕೆ ಕೆ.ರತ್ನಾಕರ್ ಕಾಮತ್ ಬಂಡವಾಳ ಹೂಡಿದ್ದಾರೆ. ಉದಯ್ ಲೀಲಾ ಕ್ಯಾಮರ ಕೈಚಳಕ, ಗಗನ್ ಬಡೇರಿಯಾ ಸಂಗೀತದ ಇಂಪು ಈ ಚಿತ್ರಕ್ಕೆ ಇರಲಿದೆ.

ತಮ್ಮ ಪಾತ್ರಗಳಲ್ಲಿ ಪ್ರಯೋಗ ನಡೆಸುವ ಕಲಾವಿದ ಎಂದು ಹೆಸರಾಗಿರುವ ವಿಜಯ್ ರಾಘವೇಂದ್ರ ಇದರಲ್ಲಿ 65ರಿಂದ 70 ವರ್ಷದ ವೃದ್ಧನ ಪಾತ್ರ ನಿರ್ವಹಿಸುತ್ತಿದ್ದಾರೆ.

ಚಿತ್ರಕ್ಕೆ ಮೇಕಪ್ ಮಾಡಿಸಿಕೊಳ್ಳಲು ವಿಜಯ್ ರಾಘವೇಂದ್ರ 4ರಿಂದ 5 ಗಂಟೆ ಕೂರಬೇಕಂತೆ. ನಂತರ ಅದನ್ನು ತೆಗೆಯಲು ಒಂದೂವರೆ ಗಂಟೆ ಬೇಕು. ಹೀಗೆ ಸುಮಾರು 30 ದಿನಗಳ ಕಾಲ ಮಾಡಿದ್ದರಂತೆ. ಕರ್ನಾಟಕ ಹಲವು ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ.

ಮಾಲ್ಗುಡಿ ಡೇಸ್ ಚಿತ್ರ ವಿಜಯ್ ರಾಘವೇಂದ್ರಗೆ ಒಂದು ಮೈಲಿಗಲ್ಲು ಆಗೋದ್ರಲ್ಲಿ ಅನುಮಾನವಿಲ್ಲ ಅಂತಿದೆ ಗಾಂಧಿನಗರ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top