ಚಿನ್ನಾರಿಮುತ್ತ ಇನ್ ಮಾಲ್ಗುಡಿ ಡೇಸ್!

malgudi days kannada movie ಮಾಲ್ಗುಡಿ ಡೇಸ್ ಕನ್ನಡ ಸಿನಿಮಾ

ಕೋಸ್ಟಲ್ ವುಡ್ ನಿಂದ ಈಗ ಸ್ಯಾಂಡಲ್‍ವುಡ್‍ ಗೆ ಪ್ರತಿಭಾವಂತರು ಬಂದು ಸ್ಯಾಂಡಲ್‍ವುಡ್‍ನಲ್ಲಿ ಮಿಂಚಿ ಸಿನಿ ರಸಿಕರ ಮನಗೆದಿದ್ದಾರೆ. ಈಗ ಆ ಸಾಲಿಗೆ ಈಗ ತುಳು ಸಿನಿಮಾದಲ್ಲಿ ಸಂಚಲನವನ್ನೇ ಸೃಷ್ಟಿಸಿ ಕೊಸ್ಟಲ್‌ವುಡ್ ನಲ್ಲಿ ಹೊಸ ಇತಿಹಾಸ ಬರೆದ ಚಿತ್ರತಂಡವೊಂದು ಈಗ ಸ್ಯಾಂಡಲ್‍ವುಡ್‍ನಲ್ಲಿ ಹೊಸ ದಾಖಲೆ ಬರೆಯೋಕೆ ಎಂಟ್ರಿಕೊಡ್ತಾ ಇದೆ. ಹೌದು ತುಳು ಚಿತ್ರರಂಗದಲ್ಲಿ ‘ಅಪ್ಪೇ ಟೀಚರ್’ ಚಿತ್ರ ಮಾಡಿ ತುಳು ಸಿನಿಮಾರಂಗದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿ 100ದಿನ ಪ್ರದರ್ಶನ ಕಂಡು 4ಕೋಟಿಗೂ ಹೆಚ್ಚು ಬಾಕ್ಸಾಫಿಸ್ ಗಳಿಕೆ ಕಂಡಿದ್ದ ಚಿತ್ರತಂಡ ಈಗ ‘ಮಾಲ್ಗುಡಿ ಡೇಸ್’ ಅನ್ನೋ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ ಗೆ ಎಂಟ್ರಿಕೊಡ್ತಾ ಇದೆ. ಇನ್ನು‌’ಅಪ್ಪೇ ಟೀಚರ್’ ಚಿತ್ರದ ನಿರ್ದೇಶಕ ಕಿಶೋರ್ ಮೂಡ ಬಿದ್ರೆ’ ಮತ್ತು ಅದೇ ಚಿತ್ರಕ್ಕೆ ಬಂಡವಾಳ ಹೂಡಿ ದಾಖಲೆ ಬರೆದಿದ್ದ ನಿರ್ಮಾಪಕ ಕೆ.ರತ್ನಾಕರ್ ಕಾಮತ್ ಮಾಲ್ಗುಡಿ ಡೇಸ್ ಚಿತ್ರದ ಮೂಲಕ‌ ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಒಂದಾಗಿದ್ದಾರೆ. ಇನ್ನು ಈ ಚಿತ್ರದಲ್ಲಿ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ನಟಿಸುತ್ತಿದ್ದು ವಿಜಯ್ ರಾಘವೇಂದ್ರ ಹಿಂದೆಂದೂ ಕಾಣದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಅಲ್ಲದೇ ಈ ಚಿತ್ರ ವಿಜಯ್ ರಾಘವೇಂದ್ರ ಅವರಿಗೆ ಒಂದೊಳ್ಳೇ ಮೈಲೇಜ್ ಕೊಡೋದ್ರಲ್ಲಿ ಡೌಟಿಲ್ಲ ಅಂತಿದೆ ಚಿತ್ರತಂಡ. ಫೆಬ್ರವರಿಯಲ್ಲಿ‌ ಚಿತ್ರದ ಶೂಟಿಂಗ್ ಕೆಲಸ ಪ್ರಾರಂಭವಾಗಲಿದ್ದು, ಇನ್ನಷ್ಟೆ ನಾಯಕಿಯ ಆಯ್ಕೆ ಆಗಬೇಕಾಗಿದೆ. ಒಟ್ಟಿನಲ್ಲಿ ತುಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿರೋ ಚಿತ್ರತಂಡ ಸ್ಯಾಂಡಲ್‍ವುಡ್‍ನಲ್ಲಿ ಹೊಸದೊಂದು ದಾಖಲೆಯನ್ನು ‘ಮಾಲ್ಗುಡಿ ಡೇಸ್’ ಚಿತ್ರದ ಮೂಲಕ ನಿರ್ಮಿಸೋ ಕಾತುರದಲ್ಲಿದೆ ರತ್ನಾಕರ್ ಮತ್ತು ಕಿಶೋರ್ ತಂಡ.

malgudi days new kannada movie ಮಾಲ್ಗುಡಿ ಡೇಸ್ ಕನ್ನಡ ಸಿನಿಮಾ
ಮಾಲ್ಗುಡಿ ಡೇಸ್ ಕನ್ನಡ ಸಿನಿಮಾ – Malgudi Days kannada Movie

ನಿಮ್ಮ ವಾಟ್ಸ್ ಆಪ್ ನಲ್ಲಿ ಇಂಟರೆಸ್ಟಿಂಗ್ ಸ್ಟೋರಿಗಳನ್ನು ಪಡೆಯಲು ಈ ನಂಬರ್ ಗೆ ವಾಟ್ಸ್ ಆಪ್ ಮಾಡಿ +918296301915

malgudi days kannada movie
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top