ಮಳೆಗಾಲ ಶುರುವಾಯ್ತು ನಿಮ್ಮ ಆರೋಗ್ಯಕ್ಕೆ ಈ ಮನೆಮದ್ದು ಮಾಡಿಕೊಳ್ಳಲೇಬೇಕು..!

ಮಳೆಗಾಲ ಶುರುವಾಗಿದೆ, ಈಗಾಗಲೇ ಬೆಂಗಳೂರು ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಶುರುವಾಗಿದ್ದು, ಇದರಿಂದಾಗಿ ಕೆಲವರಿಗೆ ಆರೋಗ್ಯದಲ್ಲೂ ಏರುಪೇರುಗಳು ಉಂಟಾಗುವು ಸರ್ವೇ ಸಾಮಾನ್ಯ, ಸದ್ಯ ಕೊರೊನಾ ಎಫೆಕ್ಟ್‌ನಿಂದಾಗಿ ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರಿಂದ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳ ಬೇಕಾಗುತ್ತದೆ. ಅದೇ ರೀತಿ ಮಳೆ ಪ್ರಾರಂಭವಾಗಿರುವುದರಿಂದಾಗಿ ಕೆಮ್ಮು, ಶೀತ,ಕಫ ಈ ಟೈಂನಲ್ಲಿ ಉಂಟಾಗುತ್ತದೆ. ಈ ವೇಳೆ ಹೆಚ್ಚಾಗಿ ಆಸ್ಪತ್ರೆಗೆ ಹೋಗಿ ಔಷಧಿಗಳನ್ನು ಪಡೆದುಕೊಳ್ಳುತ್ತಾರೆ. ಆದ್ರೆ ಮನೆಯಲ್ಲಿ ಈ ವಿಧಾನಗಳನ್ನು ಮಾಡಿಕೊಳ್ಳುವುದರಿಂದ ನಿಮಗೆ ಬರುವಂತಹ ಕೆಮ್ಮು,ಶೀತ,ಕಫದ ಸಮಸ್ಯೆಯನ್ನು ಮನೆಯಲ್ಲಿಯೇ ನಿವಾರಣೆ ಮಾಡಿಕೊಳ್ಳ ಬಹುದು.

ನೀವು ಮನೆಯಲ್ಲಿ ನಿತ್ಯ ಬಳಸುವ ವಸ್ತುಗಳನ್ನೇ ಬಳಸಿಕೊಂಡು ಶೀತ,ಕೆಮ್ಮು,ಕಫವನ್ನು ಹೋಗಲಾಡಿಸಿಕೊಳ್ಳಬಹುದು.

ಮಳೆಗಾಲಕ್ಕೆ ಮನೆ ಮದ್ದು

*ನಿಮಗೆ ಕೆಮ್ಮು ಮತ್ತು ಕಫದ ಸಮಸ್ಯೆ ಉಂಟಾದರೆ ನೀವು ರಾತ್ರಿ ಮಲಗುವ ಮುನ್ನ ಹಾಲಿಗೆ ಒಂದು ಅಥವಾ ಎರಡು ಚಿಟಿಕೆ ಅರಿಶಿನ ಮತ್ತು ಬಿಳಿ ಕಲ್ಲು ಸಕ್ಕರೆಯನ್ನು ಬೆರೆಸಿಕೊಂಡು ಬೆಚ್ಚಗಿನ ಹಾಲನ್ನು ಕುಡಿಯುವುದರಿಂದ ಕೆಮ್ಮು ಮತ್ತು ಕಫ ನಿವಾರಣೆಯಾಗುತ್ತದೆ.

  • ನಿಮಗೆ ಬಿಟ್ಟು ಬಿಡದೆ ಕೆಮ್ಮು ಮತ್ತು ಕಫದ ಸಮಸ್ಯೆ ಉಂಟಾದಾಗ ಒಂದು ನಿಂಬೆ ಹಣ್ಣು, 4 ರಿಂದ 5 ಕಲ್ಲು ಮೆಣಸಿಕಾಳು ಮತ್ತು ಒಂದು ಅಚ್ಚು ಕಲ್ಲು ಸಕ್ಕರೆಯನ್ನು ಪುಡಿಮಾಡಿಕೊಂಡು ಸ್ವಲ್ಪ ಪಾನಕದ ರೀತಿ ಮಾಡಿಕೊಂಡು ಕುಡಿಯುವುದರಿಂದ ನಿಮಗಿರುವ ಸಮಸ್ಯೆ ನಿವಾರಣೆಯಾಗುತ್ತದೆ.
  • ನಿಮಗೆ ಟೀ ಕುಡಿಯುವ ಅಭ್ಯಾಸವಿದ್ದರೆ ನೀವು ಟೀ ಮಾಡುವಾಗ ಟೀ ಪುಡಿಯ ಜೊತೆಯಲ್ಲಿ ಒಂದು ಅಚ್ಚು ಶುಂಠಿಯನ್ನು ಹಾಕಿ ಟೀಯನ್ನು ಕುದಿಸಿ ಕುಡಿದರೆ ಕೆಮ್ಮು ಮತ್ತು ಶೀತದ ಸಮಸ್ಯೆ ತಕ್ಕ ಮಟ್ಟಿಗೆ ನಿವಾರಣೆಯಾಗುತ್ತದೆ.
  • ಒಂದು ಲೋಟ ನೀರಿಗೆ ನಿಂಬೆ ರಸ,ಕಾಳು ಮೆಣಸು,ಬೆಲ್ಲ ಮತ್ತು ಶುಂಠಿ ಹಾಕಿ ಕುದಿನ ನಂತರ ಅದನ್ನು ಬೆಚ್ಚಗೆ ಮಾಡಿಕೊಂಡು ಕುಡಿಯುವುದರಿಂದ ಕೆಮ್ಮಿನ ಸಮಸ್ಯೆ ಇಲ್ಲವಾಗುತ್ತದೆ.
  • ನಿಮಗೇನಾದರೂ ಶೀತದಿಂದಾಗಿ ಗಂಟಲು ನೋವು ಶುರುವಾಗಿದ್ದರೆ, ಒಂದುಲೋಟ ಬಿಸಿನೀರಿಗೆ ಉಪ್ಪನ್ನು ಬೆರೆಸಿ ಗಾರ್ಲಿಕ್‌ ಮಾಡುವುದರಿಂದ ಗಂಟಲು ನೋಡು ಶಮನವಾಗುತ್ತದೆ.
  • ಕೆಮ್ಮು ಇದ್ದಾಗ ನೀವೂ ಹೊರಗಡೆ ಪ್ರಯಾಣಿಸುತ್ತಿದ್ದರೆ, ತಕ್ಷಣಕ್ಕೆ ಕಲ್ಲುಸಕ್ಕರೆ ಚೂರು ಮತ್ತು ಲವಂಗವನ್ನು ಜಗಿಯುದು ಅದರ ರಸ ನುಂಗುವುದರಿಂದ ಕೆಮ್ಮು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
  • ಲವಂಗ ಮತ್ತು ಉಪ್ಪು ಶುಂಠಿಯನ್ನು ಅಗಿದು ಅದರ ರಸ ಕುಡಿಯುವುದರಿಂದಲೂ ನಿಮಗೆ ಗಂಟಲು ನೋವು ಕಡಿಯಾಗುತ್ತದೆ.

ಈ ರೀತಿ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಮಳೆಗಾಲದಲ್ಲಿ ನಿಮ್ಮ ಆರೈಕೆಯನ್ನು ನೀವೇ ಮಾಡಿಕೊಳ್ಳ ಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top