ಮಗನ ಲಕ್ಕಿ ನಂಬರ್‌ ಕೋಟ್ಯಾಧಿಪತಿಯಾದ ಅಪ್ಪ..! ಅದೃಷ್ಟ ಅಂದ್ರೆ ಇದಪ್ಪಾ..!

ಅದೃಷ್ಟ ಯಾವಾಗ ಯಾವ ರೀತಿ ಬದುಕಿನಲ್ಲಿ ಬರುತ್ತೆ ಅನ್ನೋದು ಯಾರು ಸಹ ಊಹಿಸಲು ಸಾಧ್ಯವಿಲ್ಲ, ಇಂದು ಬಡವನಾಗಿದ್ದವನು ಶ್ರೀಮಂತನಾಗಿರುತ್ತಾನೆ, ಇನ್ನು ಶ್ರೀಮಂತನಾಗಿದ್ದವನು ರಾತ್ರೋರಾತ್ರಿ ದಿವಾಳಿಯಾಗುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಗನ ಅದೃಷ್ಟದ ಸಂಖ್ಯೆಯಿಂದ ಕೋಟ್ಯಾಧಿಪತಿ ಆದ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಚುರುಡು ಗ್ರಾಮದಲ್ಲಿ ನಡೆದಿದೆ, ಇನ್ನು ಕೋಟ್ಯಾಧಿಪತಿಯಾದ ವ್ಯಕ್ತಿ ಸಂಜೀವ್‌ ಕುಮಾರ್‌.

ಸಂಜೀವ್‌ ಕುಮಾರ್‌ ಒಬ್ಬ ದಿನಗೂಲಿ ಕೆಲಸಗಾರನಾಗಿದ್ದು, ಪ್ಲಂಬಿಂಗ್‌ ಮತ್ತು ಎಲೆಕ್ಟ್ರಿಷಿಯನ್‌ ಕೆಲಸ ಮಾಡಿ ಜೀವನ ನಡೆಸುತ್ತಿದ್ದ, ಇದೇ ದೀಪಾವಳಿಯಂದು ಪಂಜಾಬ್‌ ರಾಜ್ಯ ಮಹಾಲಕ್ಷ್ಮಿ ದೀಪಾವಳಿ ಪೂಜಾ ಬಂಪರ್‌ ಲಾಟರಿಯನ್ನು ಖರೀದಿಸಿದ್ದರು. ಸುಮಾರು ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದರು ಅದೃಷ್ಟ ಖುಲಾಯಿಸಿರಲಿಲ್ಲ, ಎಂದಾದರೂ ಒಂದು ದಿನ ಅದೃಷ್ಟ ಬರಬಹುದು ಅನ್ನೋ ನಂಬಿಕೆಯಲ್ಲಿದ್ದ ಸಂಜೀವ್‌ ಕುಮಾರ್‌, ತನ್ನ ಮಗನಿಗೆ ಚಂಡೀಗಡ್‌ದ ಪಿಜಿಐ ವೈದ್ಯಕೀಯ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಿಕೊಂಡು ಮರಳಿ ಊರಿಗೆ ವಾಪಾಸ್‌ ಆಗುವ ವೇಳೆ ಬಸ್‌ಸ್ಟ್ಯಾಂಡ್‌ನಲ್ಲಿ ಲಾಟರಿ ಟಿಕೆಟ್‌ ಅಂಗಡಿಯಲ್ಲಿ ತಾನು ಮತ್ತು ಮಗ ಇಬ್ಬರು ಒಂದೊಂದು ಲಾಟರಿಯನ್ನು ತೆಗೆದುಕೊಂಡಿದ್ದಾರೆ.

ಇನ್ನುಈ ಲಾಟಿರಿ ಟಿಕೆಟ್‌ನಲ್ಲಿ 2.5ಕೋಟಿ ಲಾಟರಿ ಹೊಡೆದಿದ್ದು, ಅದು ನನ್ನ ಮಗ ಆಯ್ಕೆ ಮಾಡಿದ್ದ ನಂಬರ್‌ಗೆ ಬಂದಿದ್ದು ಇದು ನನಗೆ ನಂಬಲು ಆಗುತ್ತಿಲ್ಲ, ಅಲ್ಲದೇ ಈ ಸಂತೋಷವನ್ನು ಹೇಗೆ ಹೇಳಿಕೊಳ್ಳಬೇಕು,ಇದು ನನ್ನ ಮಗನ ಅದೃಷ್ಟದ ನಂಬರ್‌ನಿಂದ ಬಂದಿದೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ ಸಂಜೀವ್‌ ಕುಮಾರ್‌. ಇನ್ನು ಇದುವರೆಗೂ ಎಲೆಕ್ಟ್ರಿಷಿಯನ್‌ ಸಂಜೀವ್‌ ಕುಮಾರ್‌ ಎನ್ನುತಿದ್ದವರು ಈಗ ಕರೋಡ್‌ ಪತಿ ಸಂಜೀವ್‌ ಕುಮಾರ್‌ ಎನ್ನುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top