ಇದು ಸೈರಾಟ್ ಫೀಲು, ಉತ್ತರ ಕರ್ನಾಟಕ ಸ್ಟೈಲು, ಮದುವೆ ಮಾಡಿ ಸರಿ ಹೋಗ್ತಾನೆ.!

ಇದು ಸೈರಾಟ್ ಫೀಲು, ಉತ್ತರ ಕರ್ನಾಟಕ ಸ್ಟೈಲು .. ಸಿನಿಮಾ..ಟೈಟಲ್ಲು ಏನು ಗೊತ್ತಾ.? ಮದುವೆ ಮಾಡಿ ಸರಿ ಹೋಗ್ತಾನೆ..ಹೌದು ಮದುವೆ ಮಾಡಿ ಸರಿ ಹೋಗ್ತಾ ಇದೇ ವಾರ ತೆರೆಕಾಣ್ತಾ ಇದ್ದು, ಸ್ಯಾಂಡಲ್‍ವುಡ್‍ನಲ್ಲಿ ಸೌಂಡ್ ಮಾಡಲು ರೆಡಿಯಾಗ್ತಾ ಇದೆ. ರವಿಮಾಮನ ಪ್ರೇಮಲೋಕದ ರೀತಿ 11 ಹಾಡುಗಳನ್ನು ಇಟ್ಟುಕೊಂಡು ಬರ್ತಾ ಇರೋ ಮದುವೆ ಮಾಡಿ ಸರಿ ಹೋಗ್ತಾನೆ ಸಿನಿಮಾ, ಟೀಸರ್ ಮತ್ತು ಟ್ರೈಲರ್ ಮೂಲಕ ಸಖತ್ ಸೌಂಡ್ ಕೂಡ ಮಾಡ್ತಾ ಇದೆ.

ಉತ್ತರ ಕರ್ನಾಟಕ ಶೈಲಿಯ ಈ ಸಿನಿಮಾ, ಲವ್ ಕಮ್ ಆಕ್ಷನ್ ಥ್ರಿಲ್ಲರ್ ಸಿನಿಮಾ, ಇನ್ನು ಕಾಮಿಡಿ ಚಿತ್ರದ ಹೈಲೆಟ್ ಆಗಿದ್ದು, ಪಕ್ಕಾ ಕಮರ್ಷಿಯಲ್ ಮತ್ತು ಮ್ಯೂಸಿಕಲ್ ಸಿನಿಮಾ ಇದಾಗಿದೆ, ಚಿತ್ರದ ಹೊಸ ಪ್ರತಿಭೆ `ರಂಕಲ್ ರಾಟೇ’ ಡೈರೆಕ್ಷನ್ ಹೇಳಿದ್ದು, ಈ ಮೂಲಕ ಸ್ಯಾಂಡಲ್‍ವುಡ್‍ಗೆ ಹೊಸ ನಿರ್ದೇಶಕನ ಎಂಟ್ರಿ ಕೂಡ ಆಗ್ತಾ ಇದೆ, ಇನ್ನು ಚಿತ್ರಕ್ಕೆ ಎಸ್,ಎಲ್,ಡಿ ಪ್ರೊಡಕ್ಷನ್ಸ್ ಅಡಿಯಲ್ಲಿ ಶಿವರಾಜ್ ಲಕ್ಷ್ಮಣರಾವ್ ದೇಸಾಯಿ ಬಂಡವಾಳ ಹೂಡಿದ್ದು, ಶಿವಚಂದ್ರ ಕುಮಾರ್ ನಾಯಕನಾಗಿ ಹಾಗೂ ಆರಾಧ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಚಿತ್ರದಲ್ಲಿ ಕೃಷ್ಣಮೂರ್ತಿ ಕೌತಾರ್, ಚಿತ್ಕಲಾ ಬೀರಾಧರ್, ಚಕ್ರವರ್ತಿ ದಾವಣಗೆರೆ ಇವ್ರಿಗೆ ಸಾಥ್ ಕೊಟ್ಟಿದ್ದಾರೆ. ಔಟ್ ಅಂಡ್ ಔಟ್ ಮ್ಯೂಸಿಕ್ ಲವ್ ಆಕ್ಷನ್ ಥ್ರಿಲ್ಲರ್ ಅಂತ ಹೇಳ್ತೀರೋ ಈ ಚಿತ್ರದ ಮೈನ್ ಹೈಲೈಟೇ ಮ್ಯೂಸಿಕ್ ಆಗಿದ್ದು, ಅವಿನಾಶ್ ಬಾಸೂತ್ಕರ್ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದಲ್ಲಿ ಒಟ್ಟು 11 ಹಾಡುಗಳಿದ್ದು. ಒಂದೊಂದು ಒಂದೊಂದು ಕಾರಣಕ್ಕೆ ವಿಶೇಷತೆಯಿಂದ ಕೂಡಿವೆ.


ಅಂದ್ಹಾಗೆ ದೇಶದ ದೊಡ್ಡ ದೊಡ್ಡ ಗಾಯಕರೊಂದಿಗೆ ವಿಶಿಷ್ಠ ಹಾಡುಗಳನ್ನ ಹಾಡಿಸಿ, ಅಪ್ಪಟ ಉತ್ತರ ಕರ್ನಾಟಕದ ಸೊಗಡಿನ ಚಿತ್ರವನ್ನ ಪ್ರೇಕ್ಷಕರೆದುರಿಗೆ ತರೋ ಪ್ರಯತ್ನ ಮಾಡಿರೋ ಚಿತ್ರತಂಡ ಈ ಶುಕ್ರವಾರ ಸಿನಿಮಾವನ್ನ ರಿಲೀಸ್ ಮಾಡ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top