ಪ್ರೇಯಸಿ ಹೇಳಿದಳೆಂದು ಬೈಕ್‍ನಲ್ಲಿ ಪಾಕಿಸ್ತಾನಕ್ಕೆ ಹೊರಟ ಮುಂದೇನಾಯ್ತು ಗೊತ್ತಾ.?!

ಈ ಲವ್ ಅನ್ನೋದೆ ಹಾಗೆ, ಯಾರನ್ನ ಯಾವಾಗ ಏನು ಬೇಕಾದ್ರು ಮಾಡಿಸಿಬಿಡುತ್ತೆ. ಕೆಲವ್ರು ತಮ್ಮ ಪ್ರಿಯತಮೆ ಅಥವಾ ಪ್ರಿಯತಮನಿಗಾಗಿ ಏನೇನೋ ತ್ಯಾಗ ಮಾಡಲು ರೆಡಿಯಾಗಿ ಬಿಡ್ತಾರೆ. ಇನ್ನು ಈ ಪ್ರೀತಿ ಅನ್ನೋದು ಯಾರಿಗೂ ಹೇಳಿ ಕೇಳಿ ಹುಟ್ಟೋದಿಲ್ಲ..ಕೆಲವೊಮ್ಮೆ ಒಬ್ಬ ಹುಡುಗ ಒಂದು ಹುಡುಗಿಯನ್ನು ನೋಡಿದಾಕ್ಷಣ ಪ್ರೇಮಕ್ಕೆ ಬಿದ್ರೆ, ಇನ್ನು ಕೆಲವ್ರು ನೋಡದೇನೇ ಪ್ರೀತಿಯಲ್ಲಿ ಬಿದ್ದುಬಿಟ್ಟಿರುತ್ತಾರೆ. ಅದರಲ್ಲೂ ಈ ತಂತ್ರಜ್ಞಾನ ಮುಂದುವರೆದಂತು ಈ ಪ್ರೀತಿ ಅನ್ನೋದು ಆದ್ಯಾವಾಗ ಎಲ್ಲಿ ಬೇಕಾದರೂ ಯಾವ ರೀತಿ ಬೇಕಾದರೂ ಹುಟ್ಟಿ ಬಿಡುತ್ತದೆ. ಇನ್ನು ಒಂದು ಮಿಸ್ ಕಾಲ್‍ನಿಂದ ಶುರುವಾದ ಪ್ರೀತಿ.. ಎಲ್ಲಿಗೋ ಹೋಗಿ ತಲುಪುದ್ರೆ, ಫೇಸ್‍ಬುಕ್‍ನಿಂದ ಶುರುವಾದ ಪ್ರೀತಿ ಮದುವೆ ತನಕ ತಂದು ನಿಲ್ಲಿಸಿರುತ್ತೆ.

ಆದ್ರೆ ಈ ಪ್ರೇಮಿಗಳು ಹಾಗೇನೇ ಫೇಸ್‍ಬುಕ್‍ನಲ್ಲಿ ಪರಿಚಯವಾಗಿ ಪರಿಚಯ ಪ್ರೇಮಕ್ಕೆ ತಿರುಗಿದ ಲವ್ ಸ್ಟೋರಿ ಇದು.. ಆದ್ರೆ ಈ ಲವ್ ಸ್ಟೋರಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಆಗಿರೋ ಲವ್ ಇದು. ಅಂದ್ರೆ ಎರಡು ದೇಶಗಳ ಪ್ರೇಮಿಗಳ ಲವ್ ಸ್ಟೋರಿ, ಇಲ್ಲಿ ಹುಡುಗ ಇರೋದು ಭಾರತದ ಮಹಾರಾಷ್ಟ್ರದಲ್ಲಿ, ಹುಡಗಿ ಇರೋದು ಪಾಕಿಸ್ತಾನದ ಕರಾಚಿಯಲ್ಲಿ.. ಇವರಿಬ್ಬರು ಪರಿಚಯವಾಗಿದ್ದು ಫೇಸ್ ಬುಕ್ ಮೂಲಕ.

ಫೇಸ್‍ಬುಕ್‍ನಲ್ಲೇ ಚಾಟಿಂಗ್ ಮೀಟಿಂಗ್ ಮಾಡುತ್ತಿದ್ದು, ಈ ಇಬ್ಬರು ಪ್ರೇಮಿಗಳಿಗೆ ಒಂದು ದಿನ ಅದೇನೂ ಅನಿಸಿತೋ ಗೊತ್ತಿಲ್ಲ, ಇಬ್ಬರು ಭೇಟಿಯಾಗ ಬೇಕು ಅನಿಸಿದೆ.ಹೀಗಾಗಿ ಹುಡುಗಿ ತನ್ನ ಪ್ರಿಯಕರನಿಗೆ ಪಾಕಿಸ್ತಾನಕ್ಕೆ ಬರಲು ಹೇಳಿದ್ದಾಳೆ.

ಪ್ರೇಮಲೋಕದಲ್ಲಿ ಪಾರಿವಾಳದ ರೀತಿ ಹಾರಾಡುತ್ತಿದ್ದ ಮಹಾರಾಷ್ಟ್ರದ 20 ವರ್ಷದ ಜಿಷಾನ್ ಮೊಹಮ್ಮದ್ ಸಿದ್ಧಿಕಿ ಅನ್ನೋ ಪ್ರೇಮಿ, ತನ್ನ ಪ್ರೇಯಸಿ ಹೇಳಿದ್ದೇ ತಡ ತನ್ನ ಬಳಿಯಿದ್ದ ಬೈಕ್ ಸ್ಟಾರ್ಟ್ ಮಾಡಿ ಪ್ರೇಯಸಿಯನ್ನು ಮೀಟ್ ಮಾಡಲು ಹೊರಟೇ ಬಿಟ್ಟ.

ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಈ ಹುಡುಗ ಪ್ರೇಯಸಿಯನ್ನು ನೋಡಲು ಬೈಕ್‍ನಲ್ಲಿ ಮಹಾರಾಷ್ಟ್ರದಿಂದ ಗೂಗಲ್ ಮ್ಯಾಪ್ ಬಳಸಿಕೊಂಡು ಗುಜರಾತ್ ಗಡಿ ಕಚ್ ಪ್ರದೇಶದ ವರೆಗೂ ತಲುಪಿದ್ದಾನೆ. ಇನ್ನೇನೂ ಪಾಕಿಸ್ತಾನ ತಲುಪಬೇಕು ಅಷ್ಟರಲ್ಲಿ ಗಡಿಯಲ್ಲಿ ಬಿಎಸ್‍ಎಫ್ ಯೋಧರು ಇತನನ್ನು ತಡೆದು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಹುಡುಗ ತಾನು ತನ್ನ ಪ್ರೇಯಸಿಯ್ನು ನೋಡಲು ಹೊರಟಿದ್ದು, ಮಹಾರಾಷ್ಟ್ರದಿಂದ ಬಂದಿರುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೇ ತನ್ನ ಫೇಸ್‍ಬುಕ್ ಕಥೆಯನ್ನೆಲ್ಲಾ ಯೋಧರಿಗೆ ತಿಳಿಸಿದ್ದಾನೆ. ಆದ್ರೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕಾನೂನು ಬಾಹಿರವಾಗಿ ಹೋಗಲು ಸಾಧ್ಯವಾಗದೇ ಇರುವುದರಿಂದ ಯೋಧರು ಯುವಕ ಎಷ್ಟೇ ಕೇಳಿಕೊಂಡರು ಬಿಡುವುದಿಲ್ಲ.

ಇನ್ನು ಹುಡುಗಿ ಇರುವ ಸ್ಥಳಕ್ಕೂ ಹುಡುಗ ತಲುಪಿರುವ ಸ್ಥಳಕ್ಕೂ ಕೇವಲ 1.5 ಕಿಲೋಮೀಟರ್ ದೂರವಿದ್ದು, ಗಡಿಯಲ್ಲಿ ನುಸುಳಿ ಹೋಗಲು ಅವಕಾಶವಿಲ್ಲದ ಕಾರಣ ಆತನನ್ನು ತಡೆದಿದ್ದಾರೆ. ಅಷ್ಟೇ ಅಲ್ಲದೇ ಬೇರೆ ಏನಾದರೂ ವಿಚಾರಗಳು ಇರಬಹುದು ಅನ್ನೋ ಕಾರಣ ಆ ಹುಡುಗನನ್ನು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top