ತೆಲುಗಿಗೆ ರಿಮೇಕ್ ಆಗ್ತಿದೆ ಲವ್‍ಮಾಕ್‍ಟೇಲ್..!ಕನ್ನಡದ ಆ ಡೈರೆಕ್ಟರ್ ಡೈರೆಕ್ಷನ್…!

ಈ ವರ್ಷದ ಸ್ಯಾಂಡಲ್‍ವುಡ್‍ನ ಸೂಪರ್ ಹಿಟಿ ಸಿನಿಮಾ ಅಂದ್ರೆ ಅದು ಲವ್ ಮಾಕ್ ಟೇಲ್' ಮಧುರ ಪ್ರೇಮಕಾವ್ಯ ಹೊಂದಿರೋ ಈ ಸಿನಿಮಾ ರಿಲೀಸ್ ಆದ ಪ್ರಾರಂಭದಲ್ಲಿ ಒಂದೇ ವಾರಕ್ಕೆ 150 ಥಿಯೇಟರ್‍ನಿಂದ ಒಂದು ಥಿಯೇಟರ್‍ಗೆ ಬಂದು ನಿಂತ ಲವ್‍ಮಾಕ್‍ಟೇಲ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಸಪೋರ್ಟ್‍ಗೆ ಮತ್ತೆ ಥಿಯೇಟರ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ದಾಖಲೆಯ ಕಲೆಕ್ಷನ್ ಜೊತೆಯಲ್ಲಿ ವರ್ಷದ ಸೂಪರ್ ಹಿಟ್ ಸಿನಿಮಾ ಅಂತ ಅನಿಸಿಕೊಳ್ತು,

ಇನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮತ್ತು ಮಿಲನ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬಂದ ಈ ಸಿನಿಮಾ ಹಿಟ್ ಆಗುತ್ತಿದ್ದಂತೆ, ಮಿಲನ ಮತ್ತು ಕೃಷ್ಣ ಲವ್ ಮಾಕ್ ಟೇಲ್ 2 ತರೋದಾಗಿ ಹೇಳಿ ಚಿತ್ರದ ಕೆಲಸವನ್ನು ಪ್ರಾರಂಭಿಸಿದ್ರು, ಇನ್ನು ಈ ಸಿನಿಮಾ ಓಟಿಟಿಯಲ್ಲಿ ಪ್ರಸಾರವಾದ ಮೇಲೆ ತೆಲುಗು ತಮಿಳಿನಲ್ಲೂ ಈ ಚಿತ್ರದ ಬಗ್ಗೆ ಸಖತ್ ರೆಸ್ಪಾನ್ಸ್ ಬರಲು ಪ್ರಾರಂಭವಾಯ್ತು, ಹೀಗಿರುವಾಗಲೇ ಲವ್‍ಮಾಕ್‍ಟೇಲ್ ಬೇರೆ ಭಾಷೆಗಳಿಗೆ ರಿಮೇಕ್ ಆಗಲಿದೆಯಾ ಅನ್ನೋ ಮಾತುಗಳು ಕೇಳಿ ಬರ್ತಾ ಇತ್ತು,

ಈಗ ಆ ಸುದ್ದಿ ಹೊರಬಂದಿದ್ದು, ಈ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗಲು ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆಯಂತೆ. ಇನ್ನು ಕನ್ನಡದಲ್ಲಿ ಡಾರ್ಲಿಂಗ್ ಕೃಷ್ಣಲವ್ ಮಾಕ್ ಟೇಲ್’ ಸಿನಿಮಾವನ್ನು ನಿರ್ದೇಶನ ಮಾಡಿದ್ರೆ ತೆಲುಗಿನಲ್ಲಿ ನಿರ್ದೇಶನ ಮಾಡ್ತಾ ಇರೋದು ಕೂಡ ಕನ್ನಡದ ನಿರ್ದೇಶಕನೇ..

ಕನ್ನಡದ ನಿರ್ದೇಶಕ ತೆಲುಗಿನಲ್ಲಿ ರಿಮೇಕ್ ಡೈರೆಕ್ಷನ್..!

ಇನ್ನು ತೆಲುಗಿನಲ್ಲಿ ಲವ್‍ಮಾಕ್‍ಟೇಲ್ ಸಿನಿಮಾ ಡೈರೆಕ್ಷನ್ ಮಾಡ್ತಾ ಇರೋದು ಯಾರು ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದ್ದು, ಈಗ ಇದಕ್ಕೂ ಸಹ ಉತ್ತರ ಸಿಕ್ಕಿದೆ, ಹೌದು ಮೈನಾ,ಸಂಜು ಮತ್ತು ಗೀತಾ,ಅಮರ್ ಸಿನಿಮಾ ನಿರ್ದೇಶನ ಮಾಡಿರೋ ಮೆಲೋಡಿ ಡೈರೆಕ್ಷರ್ ಅಂತಾನೇ ಕರೆಸಿಕೊಳ್ಳೋ ನಾಗ್‍ಶೇಖತ್ ತೆಲುಗಿನಲ್ಲಿ ಲವ್‍ಮಾಕ್‍ಟೇಲ್ ಸಿನಿಮಾವನ್ನು ಡೈರೆಕ್ಷನ್ ಮಾಡ್ತಿದ್ದಾರೆ.

ಆದಿ,ನಿಧಿಮಾ ಪಾತ್ರದಲ್ಲಿ ತಮ್ಮನ್ನಾ ಮತ್ತು ಸತ್ಯದೇವ್..!

ಲವ್‍ಮಾಕ್‍ಟೇಲ್‍ನಲ್ಲಿ ಆದಿ ಮತ್ತು ನಿಧಿಮಾ ಪಾತ್ರ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು, ಇವರಿಬ್ಬರ ಪಾತ್ರ ನೋಡಿ ಇದ್ರೆ ಈ ಜೋಡಿ ರೀತಿ ನಮ್ ಲೈಫ್‍ನಲ್ಲೂ ಇರಬೇಕು ಅಂತ ಅಂದುಕೊಂಡವರೇ ಹೆಚ್ಚು,ಹೀಗಿರುವಾಗ ತೆಲುಗಿನಲ್ಲಿ ಆದಿ ಮತ್ತು ನಿಧಿಮಾ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಅನ್ನೋ ಪ್ರಶ್ನೇ ಮೂಡಿದ್ದು, ಮಿಲ್ಕಿ ಬ್ಯೂಟಿ ತಮನ್ನಾ ಮತ್ತು ಸತ್ಯದೇವ್ ಆದಿ ಮತ್ತು ನಿಧಿಮಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿಯು ಈಗ ವರದಿಯಾಗಿದೆ.

ಈಗಾಗಲೇ ಚಿತ್ರದ ತೆಲುಗಿನ ಕಾರ್ಯ ನಡೀತಾ ಇದ್ದು, ಅಂದುಕೊಂಡಂತೆ ಎಲ್ಲವೂ ಆದೆ ಸೆಪ್ಟಂಬರ್ ತಿಂಗಳಿನಲ್ಲಿ ಚಿತ್ರ ಶೂಟಿಂಗ್ ಕೂಡ ಆರಂಭವಾಗಲಿದೆಯಂತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top