16 ವರ್ಷದ ಹುಡುಗಿಗೆ 66 ವರ್ಷದ ಮುದಕನಿಂದ ಲವ್‌ ಲೆಟರ್‌..! ಮುಂದೇನಾಯ್ತು..?

ಪ್ರೀತಿ ಯಾವಾಗ ಯಾರಿಗೆ ಹೇಗೆ ಹುಟ್ಟುತ್ತೆ ಅಂತ ಗೊತ್ತಾಗಲ್ಲ, ಇನ್ನು ಪ್ರೀತಿಗೆ ವಯಸ್ಸಿನ ಮಿತಿ ಇರೋದಿಲ್ಲ, ಆದ್ರೆ ಪ್ರೀತಿಗೆ ವಯಸ್ಸಿಲ್ಲ ಎಂದು ಪ್ರೀತಿ ಮಾಡೋರು ವಯಸ್ಸಿನ ಅಂತವನ್ನು ನೋಡೋ ಬೇಕಾಗುತ್ತೆ. ಆದ್ರೆ ಇಲ್ಲೊಬ್ಬ ಮಾತ್ರ ತನ್ನ ಮೊಮ್ಮಗಳ ವಯಸ್ಸಿನ ಹುಡುಗಿಗೆ ಲವ್‌ ಲೆಟರ್‌ ಕೊಟ್ಟು ಪೊಲೀಸರ ಅಥಿತಿ ಆಗಿರೋ ಘಟನೆಯೊಂದು ನಡೆದಿದೆ. ಈ ರೀತಿಯ ವಿಚಿತ್ರ ಘಟನೆ ನಡೆದಿರೋದು ತಮಿಳು ನಾಡಿನಲ್ಲಿ.

ತಮಿಳುನಾಡಿನಲ್ಲಿ 16 ವರ್ಷದ ಅಪ್ರಾಪ್ತ ಹುಡುಗಿಗೆ 66 ವರ್ಷದ ವೃದ್ಧ ಲವ್‌ ಲೆಟರ್‌ ಕೊಟ್ಟಿದ್ದು, ಲವ್‌ ಲೆಟರ್‌ ಕೊಟ್ಟ ಆರೋಪಿ ಮೊಹಮ್ಮದ್‌ ಬಹೀರ್‌ ಬಾಷಾ ಅಂತ ಗುರುತಿಸಲಾಗಿದೆ. ಕೆಲವು ದಿನಗಳಿಂದ ಭಾಷಾ ತನ್ನ ಮನೆಯ ಬಳಿಯೇ ವಾಸವಾಗಿರೋ 16 ವರ್ಷದ ಹುಡುಗಿಗೆ ಪ್ರೇಮ ಪತ್ರವನ್ನು ನೀಡಿದ್ದಾನೆ. ಪ್ರೇಮ ಪತ್ರದಲ್ಲಿ ʻನೀನಂದ್ರೆ ನನಗೆ ತುಂಬಾ ಇಷ್ಟ , ನಾನು ನಿನಗೆ ಒಪ್ಪಿಗೆನಾ ಅಂತʼ ಪತ್ರದಲ್ಲಿ ಬರೆದು ಹುಡುಗಿಗೆ ನೀಡಿದ್ದಾನೆ.


ಇನ್ನು ಆ ಮುದುಕ ನೀಡಿದ ಪತ್ರವನ್ನು ಹೆದರಿಕೆಯಿಂದ ತನ್ನ ತಾಯಿ ಬಳಿ ನೀಡಿದ ಹುಡುಗಿ, ಪತ್ರ ನೋಡಿದ ತಾಯಿ ತಮ್ಮ ಪತಿ ಬಳಿ ತೋರಿಸಿದ್ದಾರೆ. ತಕ್ಷಣ ಹುಡುಗಿ ಮನೆಯವರು ವೃದ್ಧನ ಮನೆಯ ಬಳಿ ಹೋಗಿ ಮನೆಯವರಲ್ಲಿ ಈ ವಿಚಾರ ಬಗ್ಗೆ ತಿಳಿಸಿದ್ದಾರೆ.


ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ವೃದ್ಧನ ಮನೆಯವರು ಹುಡುಗಿ ಮನೆಯವ ಬಳಿ ಕ್ಷಮೆಯನ್ನು ಕೇಳಿದ್ದಾರೆ. ಆದ್ರೆ ಕೆಲವು ದಿನಗಳು ಸುಮ್ಮನಿದ್ದ ಚಪಲ ಚೆನ್ನಿಗರಾಯ ಮತ್ತೆ 16 ವರ್ಷದ ಹುಡುಗಿಗೆ ಲವ್‌ಲೆಟರ್‌ ಕೊಡುವ ಜೊತೆಯಲ್ಲಿ ಬೆದರಿಕೆಯನ್ನು ಸಹ ಹಾಕಿದ್ದಾನೆ.

ಇದರಿಂದ ಭಯಗೊಂಡ ಹುಡುಗಿ ಮನೆಯಿಂದ ಹೊರಬರಲು ಹೆದರುತ್ತಿದ್ದಳು, ಇದನ್ನು ಕಂಡ ಆಕೆಯ ಪೋಷಕರು ರಾಮನಾಥಪುರಂ ಮಹಿಳಾ ಪೊಲೀಸ್‌ ಸ್ಟೇಷನ್‌ನಲ್ಲಿ ಬಾಷಾ ವಿರುದ್ಧ ದೂರನ್ನು ನೀಡಿದ್ದಾರೆ.

ಸದ್ಯ ಬಾಷಾ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ದೂರನ್ನು ದಾಖಲಿಸಿಕೊಂಡಿದ್ದು, ಬಾಷಾನನ್ನು ಬಂಧಿಸಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top