ಮದುವೆಯಾಗಲ್ಲ ಇನ್ನು ಓದಬೇಕು ಎಂದ ಪ್ರೇಯಸಿಗೆ ಪೆಟ್ರೋಲ್ ಹಾಕಿ ಸುಟ್ಟ ಯುವಕ..!

ಪ್ರೀತಿಸಿದ ಹುಡುಗಿ ಮದುವೆಯಾಗು ಎಂದು ಹೇಳಿದಾಗ ಒಪ್ಪಲಿಲ್ಲ ಎಂದು ಆಕೆಯನ್ನೇ ಬೆಂಕಿ ಹಚ್ಚಿ ಸುಟ್ಟು, ತಾನು ಸತ್ತ ಘಟನೆ ಕೇರಳದಲ್ಲಿ ನಡೆದಿದೆ..
ಕೊಚ್ಚಿಯಲ್ಲಿ ಈ ದುರಂತ ಪ್ರೇಮ ಕಥೆ ನಡೆದಿದ್ದು, ಮಿಥುನ್ ಎಂಬ ಯುವಕ ತನ್ನ ಹತ್ತಿರದ ಸಂಬಂಧಿ ಹುಡುಗಿಯನ್ನು ಪ್ರೀತಿಸುತ್ತಿದ್ದನು, ಇನ್ನು ಅವರಿಬ್ಬರ ಮನೆಯೂ ಕೂಡ ಅಕ್ಕಪಕ್ಕದಲ್ಲೇ ಇದ್ದು , ಅಗಾಗ ಮಿಥುನ್ ಆಕೆಯ ಮನೆಗೆ ಹೋಗುತ್ತಿದ್ದ, ಹೀಗೆ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು, ಇದೇ ವೇಳೆ ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದೇವೆ ಇಬ್ಬರು ಮದುವೆಯಾಗೋಣ ಎಂದು ಮಿಥುನ್ ಹುಡುಗಿಯನ್ನು ಕೇಳಿದ್ದಾನೆ.

ಆದ್ರೆ 17ವರ್ಷದ ಹುಡುಗಿ ಮಿಥುನ್ ಮಾತನ್ನು ನಿರಾಕರಿಸಿದ್ದು.ನಾನು ಮದುವೆಯಾಗಲ್ಲ ಇನ್ನು ಓದ ಬೇಕು ಎಂದು ಹೇಳಿದ್ದಾಳೆ. ಅಲ್ಲದೇ ಮಿಥುನ್‍ನಿಂದ ಸ್ವಲ್ಪ ದೂರವನ್ನು ಸಹ ಕಾಯ್ದುಕೊಂಡಿದ್ದಳು. ಹುಡುಗಿ ನಿರಾಕರಿಸಿದ್ರು ಮಿಥುನ್ ಆ ಹುಡುಗಿಗೆ ಪೀಡಿಸುತ್ತಲೇ ಇದ್ದ ಇದರಿಂದ ಬೇಸತ್ತ ಹುಡುಗಿಯ ಮನೆಯವರು ಪೊಲೀಸರಿಗೆ ದೂರು ಸಹ ನೀಡಿದ್ರು, ಆದಾದ ಬಳಿಕ ಮಿಥುನ್ ಸುಮ್ಮನಾಗದೇ ಹುಡುಗಿ ಹೋಗುತ್ತಿದ್ದ ಟ್ಯೂಷನ್‍ಗೆ ಹೋಗಿದ್ದಾಗ ಅಲ್ಲಿಗೂ ಹೋಗಿ ಹುಡುಗಿಯ ಜೊತೆ ಜಗಳ ಕೂಡವಾಡಿದ್ದ. ನಂತರ ಇಬ್ಬರು ಮನೆಗೆ ತೆರಳಿದ್ದರು.

ಹುಡುಗಿ ಮನೆಗೂ ಹೋಗಲು ಯತ್ನಿಸಿದ್ದ ಮಿಥುನ್‍ನನ್ನು ಹುಡುಗಿ ತಂದೆ ತಡೆದಿದ್ದರು , ಇದರಿಂದ ಸಿಟ್ಟಾಗಿದ್ದ ಮಿಥುನ್ ಪೆಟ್ರೋಲ್ ಬಂಕ್‍ಗೆ ಹೋಗಿ ಪೆಟ್ರೋಲ್ ತಂದು ಹುಡುಗಿಯ ಮನೆಗೆ ನುಗ್ಗಿದ ಮಿಥುನ್ ಹುಡುಗಿ ಪೋಷಕರ ಎದುರೆ ಹುಡುಗಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾನು ಸಹ ಪೆಟ್ರೋಲ್ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ, ಇದೇ ವೇಳೆ ಬೆಂಕಿ ಆರಿಸಲು ಹೋದ ಹುಡುಗಿ ತಂದೆಗೂ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು, ಇಬ್ಬರನ್ನು ಆಸ್ಪತ್ರೆ ಸೇರಿಸುವ ಮರ್ಗ ಮಧ್ಯದಲ್ಲಿ ಪ್ರಾಣ ಬಿಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top