ಬಿಗ್‍ಬಾಸ್‍ನಿಂದ ಮೊದಲ ದಿನವೇ ನಾಮಿನೇಟ್‌ ಆದ್ರ ಕುರಿ ಪ್ರತಾಪ್‌.?

kuri pratap nominated

ಬಿಗ್‌ಬಾಸ್‌ ನಿನ್ನೆಯಷ್ಟೇ ಶುರುವಾಗಿದೆ, ಶುರುವಾದ ದಿನವೇ ಬಿಗ್‌ಬಾಸ್‌ ಹೊಸದೊಂದು ಟಾಸ್ಕ್‌ ಕೂಡ ನೀಡಿತ್ತು, ಮನೆಯ ಸದಸ್ಯರಿಗೆ ಮೂರು ಬಾಕ್ಸ್‌ಗಳನ್ನು ನೀಡಿ ಅದರಲ್ಲಿ ಕ್ಯಾಪ್ಟನ್‌ ಆಯ್ಕೆ ಮತ್ತು ನೇರ ನಾಮಿನೆಟ್‌ ಬಾಕ್ಸ್‌ಗಳನ್ನು ನೀಡಿತ್ತು, ಆದ್ರೆ ಮೂರು ಬಾಕ್ಸ್‌ನಲ್ಲಿ ಯಾರಿಗೆ ಕ್ಯಾಪ್ಟನ್‌ ಪಟ್ಟ ದೊರೆಯುತ್ತೆ, ಯಾರು ನಾಮಿನೆಟ್‌ ಆಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು.

kannada bigg boss season 7 contestants

ಅದರಂತೆ ಮೂರು ಬಾಕ್ಸ್‌ನಲ್ಲಿ, ಕುರಿ ಪ್ರತಾಪ್‌, ಭೂಮಿಕಾ ಶೆಟ್ಟಿ ಮತ್ತು ಕಿಶನ್‌ ಆಯ್ಕೆಯಾಗಿದ್ದು ಮೂವರಲ್ಲಿ ಯಾರಿಗೆ ಕ್ಯಾಪ್ಟನ್‌ ಪಟ್ಟ ಬರಲಿದೆ ಅನ್ನೋದು ಕುತೂಹಲ, ಆದ್ರೆ ಕುರಿ ಪ್ರತಾಪ್‌ ಓಪನ್‌ ಮಾಡಿದ ಬಾಕ್ಸ್‌ನಲ್ಲಿ ನಾಮಿನೆಟ್‌ ಬೋರ್ಡ್‌ ಇದ್ದು, ಕುರಿ ಪ್ರತಾಪ್‌ ಟಾಸ್ಕ್‌ ಶುರುವಾದ ಮೊದಲನೇ ದಿನವೇ ನಾಮಿನೇಟ್‌ ಆಗ್ತಾರಾ ಅನ್ನೋ ಕುತೂಹಲ ಈಗ ಎಲ್ಲರಲ್ಲೂ ಮನೆಮಾಡಿದೆ.. ಸದ್ಯ ಪ್ರೋಮೋದ ತುಣುಕು ಬಿಟ್ಟಿರೋ ಕಲರ್ಸ್‌ ಕನ್ನಡ ಇವತ್ತಿನ ಟಾಸ್ಕ್‌ನಲ್ಲಿ ಅದೃಷ್ಟ ಯಾರ ಪರವಾಗಿದೆ ಅನ್ನೋದನ್ನ ರಾತ್ರಿ 9ಗಂಟೆಯ ವರೆಗೆ ಕಾದು ನೋಡಬೇಕು.

Bigg Boss

ಮೊದಲ ದಿನವೇ ಅದೃಷ್ಟ ಪರೀಕ್ಷೆ, ಗೆದ್ದವರು ಕ್ಯಾಪ್ಟನ್‌ ಆದ್ರೆ, ಮತ್ತೊಬ್ಬರಿಗೆ ಡೈರೆಕ್ಟ್ ನಾಮಿನೇಶನ್ ಭೀತಿ!ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada

Posted by Colors Kannada on Sunday, 13 October 2019
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top