ಬಿಗ್‍ಬಾಸ್ ಮನೆಯಲ್ಲಿ ಕುರಿಪ್ರತಾಪ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?

kuri pratap and ravi belagere bigg boss revenue

ಬಿಗ್‍ಬಾಸ್ ಸೀಸನ್ 7 ಶುರುವಾಗಿ ವಾರ ಕಳೆಯುತ್ತಾ ಬಂದಿದೆ, ಮನೆಯಲ್ಲಿ ಈಗ ಎಮೋಷನ್, ಗಲಾಟೆ, ಕಿತ್ತಾಟಗಳು ಶುರುವಾಗ್ತಾ ಇದೆ, ದಿನೇ ದಿನೇ ಬಿಗ್‍ಬಾಸ್ ಮನೆಯಿಂದ ಇಂಟರೆಸ್ಟಿಂಗ್ ವಿಷಯಗಳು ಹೊರ ಬರ್ತಾನೇ ಇದೆ, ಆದ್ರೆ ನಾವ್ ಇವತ್ತು ನಿಮಗೆ ಹೇಳೋಕೆ ಹೋಗ್ತಾ ಇರೋದು, ಬಿಗ್‍ಬಾಸ್ ಮನೆಯಲ್ಲಿರುವ ಸದಸ್ಯರ ಸಂಭಾವನೆ ಬಗ್ಗೆ ಹೌದು ಬಿಗ್‍ಬಾಸ್ ಶೋಗೆ ಎಂಟ್ರಿಕೊಟ್ಟಿರುವ 18 ಜನ ಸ್ಪರ್ಧಿಗಳಲ್ಲಿ ಯಾರ್ಯಾರು ಎಷ್ಟೆಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಅಂತ ಹೇಳ್ತೀವಿ ಕೇಳಿ, ಬಿಗ್‍ಬಾಸ್ ಶೋನ ನಿಯಮದ ಪ್ರಕಾರ ಪ್ರತಿಯೊಬ್ಬ ಸ್ಪರ್ಧಿಗೂ ವಾರದ ಲೆಕ್ಕದಲ್ಲಿ ಸಂಭಾವನೆಯನ್ನು ನೀಡಲಾಗುತ್ತದೆ, ಈ ಬಾರಿ ಬಿಗ್‍ಬಾಸ್ ಮನೆ ಸೇರಿರುವ ಸದಸ್ಯರ ಸಂಭಾವನೆಯನ್ನು ನೋಡೋದಾದ್ರೆ, ಒಂದು ಮೂಲದ ಮಾಹಿತಿ ಪ್ರಕಾರ ಅಗ್ನಿ ಸಾಕ್ಷಿ ಧಾರಾವಾಹಿ ಖ್ಯಾತಿಯ ಪ್ರಿಯಾಂಕ ಒಂದು ವಾರಕ್ಕೆ ಒಂದು ಲಕ್ಷ ಸಂಭಾವನೆ ಪಡೆಯುತ್ತಾರಂತೆ.

ಇನ್ನು ಖ್ಯಾತ ಪತ್ರಕರ್ತ ರವಿಬೆಳಗೆರೆಯವರು ಒಂದು ವಾರಕ್ಕೆ ಒಂದು ಲಕ್ಷದ 20 ಸಾವಿರ ಸಂಭಾವನೆ ಪಡೆಯುತ್ತಾರೆ ಅನ್ನೋ ಮಾಹಿತಿ ಇದೆ. ಇದರ ಜೊತೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಮನೆಮಾತಾಗಿರೋ ದೀಪಿಕಾ ದಾಸ್ ಒಂದು ವಾರಕ್ಕೆ 90ಸಾವಿರ ಸಂಭಾವನೆ ಪಡೆದ್ರೆ,

ಇಡೀ ಬಿಗ್‍ಬಾಸ್ ಮನೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ವ್ಯಕ್ತಿ ಅಂದ್ರೆ ಅದು ಮಜಾ ಟಾಕೀಸ್‍ನಲ್ಲಿ ಸಖತ್ ಮಜಾ ಕೊಟ್ಟು ಬಿಗ್‍ಬಾಸ್ ಮನೆಯಲ್ಲೂ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸ್ತಾ ಇರೋ ಕುರಿ ಪ್ರತಾಪ್ ಅವರು ಹೌದು ಕುರಿಪ್ರತಾಪ್ ಅವರು ಒಂದು ವಾರಕ್ಕೆ ಒಂದು ಲಕ್ಷದ ಅರವತ್ತು ಸಾವಿರ ರೂಪಾಯಿ ಸಂಭಾವನೆಯನ್ನು ಪಡೆಯುವ ಮೂಲಕ ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿಯಾಗಿದ್ದಾರೆ, ಇನ್ನು ಉಳಿದಂತೆ ಸ್ಪರ್ಧಿಗಳಿಗೆ ವಾರಕ್ಕೆ 60 ರಿಂದ 70 ಸಾವಿರದ ವರೆಗೆ ಸಂಭಾವನೆ ನೀಡಲಾಗುತ್ತದೆ ಅನ್ನೋ ಮಾತುಗಳು ಕೇಳಿ ಬರ್ತಾ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top