ಕುಡಿಯಬೇಡಿ ಎಂದು ಹೇಳಿದ ಪತ್ನಿಯ ತಲೆಯನ್ನೇ ಕಡಿದು ಪೊಲೀಸ್‌ ಠಾಣೆಗೆ ಹೋದ ಪತಿ..!

kuduka pati hendati thale kadida

ಕುಡಿತ ಯಾವ ಮಟ್ಟಕ್ಕೆ ತಂದು ನಿಲ್ಲಿಸಿಬಿಡುತ್ತದೆ ಅನ್ನೋದಕ್ಕೆ ಭಯಾನಕ ನಿದರ್ಶನ ಒಂದು ಈಗ ಬೆಳಕಿಗೆ ಬಂದಿದೆ. ಪತಿ ಕುಡಿಯುತ್ತಿದ್ದ ವೇಳೆ ಪತ್ನಿ ಕುಡಿಯಬೇಡಿ ಎಂದು ತಡೆದಿದ್ದಕ್ಕೆ ಪತ್ನಿಯ ತಲೆಯನ್ನೇ ಕಡಿದಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ನರೇಶ್‌ ಮತ್ತು ಶಾಂತಿ ದಂಪತಿಗಳಾಗಿದ್ದು, ನರೇಶ್‌ ತಲೆಕಡಿದ ಪಾಪಿ ಪತಿರಾಯ, ಭಾನುವಾರ ರಾತ್ರಿ ನರೇಶ್‌ ಮನೆಯಲ್ಲಿ ಕುಡಿಯುತ್ತಿರುವ ವೇಳೆ ಪತ್ನಿ ಶಾಂತಿ ಕುಡಿಯಬೇಡಿ ಎಂದು ತಡೆದಿದ್ದಾಳೆ. ಇದರಿಂದ ಕುಡಿದ ನಶೆಯಲ್ಲಿದ್ದ ನರೇಶ್‌ ತನ್ನ ಪತ್ನಿಯನ್ನು ಒಂದು ಕೋಣೆ ಕರೆದುಕೊಂಡು ಹೋಗಿ ಕತ್ತಿಯಿಂದ ಕತ್ತನ್ನು ಕತ್ತರಿಸಿದ್ದಾನೆ. ಇನ್ನು ರುಂಡವನ್ನು ತೆಗೆದುಕೊಂಡು ದೇಹವನ್ನು ಕೋಣೆಯಲ್ಲಿ ಇಟ್ಟು ಬೀಗ ಹಾಕಿ ಮನೆಯಿಂದ ಪರಾರಿಯಾಗಿದ್ದಾನೆ. ಇನ್ನು ಈ ದಂಪತಿಗಳಿಗೆ ಮೂವರು ಮಕ್ಕಳಿದ್ದು, ಬೆಳಗ್ಗೆ ಎದ್ದು ತಾಯಿಯನ್ನು ಹುಡುಕುವ ವೇಳೆ ತಾಯಿ ಕಾಣದನ್ನು ನೋಡಿ ಬೀಗ ಹಾಕಿದ್ದ ಕೋಣೆಯ ಬೀಗವನ್ನು ಒಡೆದು ನೋಡಿದಾಗ ತಲೆ ಇಲ್ಲದ ತಾಯಿಯ ದೇಹವನ್ನು ನೋಡಿ ಗಾಬರಿಗೊಂಡಿದ್ದಾರೆ.

ಅಲ್ಲದೇ ತಮ್ಮ ಕುಟುಂಬದವರಿಗೆ ತಿಳಿಸಿದ್ದಾರೆ, ಇನ್ನು ಸ್ಥಳಕ್ಕೆ ಬಂದ ಕುಟುಂಬದವರು ವಿಷಯ ತಿಳಿದು ಪೊಲೀಸರಿಗೆ ದೂರು ಸಹ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ತಲೆ ಇಲ್ಲದ ದೇಹವನ್ನು ವಿಧಿವಿಜ್ಞಾನಕ್ಕೆ ಕಳುಹಿಸಿದ್ದಾರೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಹೆಂಡತಿಯ ತಲೆಯನ್ನು ಹಿಡಿದುಕೊಂಡು ಪತಿ ನರೇಶ್‌ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾನೆ. ತಕ್ಷಣ ಆತನನ್ನು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿ , ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಆತನನ್ನು ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top