ಕುಡಿದು ಸಿಕ್ಕಿ ಹಾಕಿಕೊಂಡ್ರೆ ಇಡೀ ಊರಿಗೆ ಮಟನ್‌ ಪಾರ್ಟಿ ಕೊಡಿಸ್ಬೇಕು..!

ನೀವೇನಾದ್ರೂ ಕುಡಿತೀರಾ, ಕುಡಿದು ತೂರಾಡ್ತೀರಾ, ಕುಡಿದು ಗಲಾಟೆ ಮಾಡ್ತೀರಾ, ಹಾಗಾದ್ರೆ ನೀವೇನಾದ್ರೂ ಕುಡಿದು ಅಪ್ಪಿ ತಪ್ಪಿ ಊರಿಗೆ ಮಾತ್ರ ಹೋಗ್ಬೇಡಿ, ಹೋದ್ರೆ ನೀವೂ ಇಡೀ ಊರಿಗೆ ಮಟನ್‌ ಪಾರ್ಟಿ ಕೊಡಬೇಕಾಗುತ್ತೆ ಹುಷಾರ್‌..! ಹೌದು ಕುಡಿದು ಈ ಊರಿನಲ್ಲಿ ಓಡಾಡಿದ್ರೆ ನೀವೂ ಬರೋಬ್ಬರಿ 30 ರಿಂದ 40 ಸಾವಿರ ರೂಪಾಯಿ ಖರ್ಚುಮಾಡಿ ಊರಿನವರಿಗೆಲ್ಲಾ ಮಟನ್‌ ಊಟ ಹಾಕಿಸಬೇಕಾಗುತ್ತದೆ, ಹೌದು ಇಂತಹ ಒಂದು ಪದ್ಧತಿ ಇರೋದು ಗುಜರಾತಿನ ಬನಸ್ಕಂತ ಜಿಲ್ಲೆಯ ಅಮೀರ್‌ಘಢದ ಖತಿಸಿತರಾ ಅನ್ನೋ ಹಳ್ಳಿಯಲ್ಲಿ ಈ ಹಳ್ಳಿ ಒಂದು ಕಾಲದಲ್ಲಿ ಕುಡುಕರ ಸಾಮ್ರಾಜ್ಯವಾಗಿತ್ತು.

ಪ್ರತಿದಿನ ಕುಡಿದುಕೊಂಡು ಬಂದು ತನ್ನ ಪತ್ನಿಯರಿಗೆ ಹಿಂಸಿಸುವುದು ಜೊತೆ ಕುಡಿದ ಮತ್ತಿನಲ್ಲಿ ಇತರರ ಜೊತೆ ಸೇರಿ ಇಲ್ಲ ಸಲ್ಲದ ಗಲಾಟೆಗಳನ್ನು ಮಾಡಿಕೊಳ್ಳುತ್ತಿದ್ದರು. ಇದರಿಂದ ಬೇಸತ್ತ ಇಲ್ಲಿನ ಊರಿನ ಹಿರಿಯರು ಒಂದು ನಿಯಮವನ್ನು 2013ರಲ್ಲಿ ಜಾರಿಗೆ ತಂದರು, ಈ ನಿಯಮದ ಪ್ರಕಾರ ಯಾರಾದರೂ ಕುಡಿದು ಸಿಕ್ಕಿ ಹಾಕಿಕೊಂಡರೆ ಅವರಿಗೆ 2 ಸಾವಿರ ರೂಪಾಯಿ ದಂಡ ಮತ್ತು ಕುಡಿದು ಗಲಾಟೆ ಮಾಡಿ ಅವಾಂತರಗಳನ್ನು ಸೃಷ್ಟಿಸಿದ್ರೆ ಅವರಿಗೆ 5 ಸಾವಿರ ದಂಡದ ಜೊತೆಯಲ್ಲಿ ಇಡೀ ಊರಿಗೆ ಅಲ್ಲಿನ ಸ್ಥಳೀಯ ಆಹಾರವಾದ ʻಬೊಕ್ಡು ಮತ್ತು ಮಟನ್‌ ಊಟವನ್ನು ಹಾಕಿಸಬೇಕು ಎಂಬ ನಿಯಮವನ್ನು ಜಾರಿಗೆ ತಂದರು.

ಇನ್ನು ಈ ಗ್ರಾಮದಲ್ಲಿ ಸುಮಾರು 800 ಜನ ವಾಸವಾಗಿದ್ದು, ಕುಡಿದು ಸಿಕ್ಕಿಹಾಕಿಕೊಂಡರೆ ಆತ ಏನಿಲ್ಲವೆಂದರೂ 20 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಇಲ್ಲಿ ಈ ನಿಯಮ ಬಂದ ಮೇಲೆ ಕ್ರಮೇಣ ಕುಡಿತಕ್ಕೆ ಒಳಗಾಗುವವರ ಸಂಖ್ಯೆಯೂ ಕೂಡ ಕಡಿಮೆಯಾಗುತ್ತ ಹೋಗಿದೆ. ಇನ್ನು ಈ ನಿಯಮ ಬಂದ ಮೇಲೆ ಇದುವರೆಗೂ 4 ರಿಂದ 5 ಜನರಷ್ಟೇ ಕುಡಿದು ಸಿಕ್ಕಿಹಾಕಿಕೊಂಡು ದಂಡವನ್ನು ಕಟ್ಟಿದ್ದಾರೆ. ಅಲ್ಲದೇ ಈ ನಿಯಮದ ನಂತರ ಗ್ರಾಮಸ್ಥರು ಅತೀ ಸಂತೋಷದಿಂದ ಇದ್ದು ಊರ ಮಹಿಳೆಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ..

ಹಾಗಾಗಿ ನೀವೂ ಕೂಡ ಅಪ್ಪಿ ತಪ್ಪಿ ಈ ಊರ ಕಡೆ ಹೋಗೋದಾದ್ರೆ ಕುಡಿದು ಮಾತ್ರ ಹೋಗಬೇಡಿ.. ಕುಡಿದು ಹೋದ್ರೆ ಜೇಬಿಗೆ ಕತ್ತರಿ ಗ್ಯಾರಂಟಿ..!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top