ಹಳೇ KSRTC ಬಸ್‍ನಿಂದ ರೆಡಿಯಾಯ್ತು ಮಹಿಳಾ ಶೌಚಾಲಯ..

ಹಳೆಯ ಬಸ್‍ನಿಂದ ಮಹಿಳಾ ಶೌಚಾಲಯವನ್ನು ಕೆಎಸ್‍ಆರ್‍ಟಿಸಿ ಹಾಗೂ ಬಿಐಎಲ್ ಸಹಯೋದಲ್ಲಿ ನಿಮಿಸಿದ್ದು, ಇಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಬೆಂಗಳೂರಿನ ಮೆಜೆಸ್ಟಿಕ್‍ನಲ್ಲಿ ಉದ್ಘಾಟಿಸಿದ್ದಾರೆ.
ಕೆಎಸ್‍ಆರ್‍ಟಿಸಿಯು ಉಪಯೋಗಕ್ಕೆ ಬರದ ಬಸ್ಸನ್ನು ಸುಸಜ್ಜಿತ ಮಹಿಳಾ ಶೌಚಾಲಯವನ್ನಾಗಿ ನಿರ್ಮಿಸಿದ್ದು, ಇದಕ್ಕೆ `ಸ್ತ್ರೀ ಶೌಚಾಲಯ’ ಎಂದು ಹೆಸರಿಡಲಾಗಿದೆ.

ಈ ಶೌಚಾಲಯದಲ್ಲಿ ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ ನ್ಯಾಪ್‍ಕಿನ್, ಮಗುವಿಗೆ ಡೈಪರ್ ಬದಲಿಸುವ ಸ್ಥಳ, ಇಂಡಿಯನ್ ಮತ್ತು ವೆಸ್ಟ್ರನ್ ಮಾದರಿಯ ಕಮೋಡ್‍ಗಳು, ಕೈ ತೊಳೆಯಲು ಚೇಸಿನ್‍ಗಳು ಅಳವಡಿಸಲಾಗಿದೆ. ಇದು ಸಂಪೂರ್ಣ ಸೌರ ವಿದ್ಯುತ್ ಅಳವಡಿಕೆಯಾಗಿದೆ.


ಇನ್ನು ಮಹಿಳಾ ಶೌಚಾಲಯವನ್ನು ಅನುಪಯುಕ್ತ ಬಸ್‍ನಿಂದ ರೆಡಿಮಾಡಿದ್ದು, ಇದು ಸಂಚರಿಸುವುದಿಲ್ಲ, ಇದು ಕೆಂಪೇಗೌಡ ಬಸ್ ನಿಲ್ದಾಣ ಟರ್ಮಿನಲ್ 1ರಲ್ಲಿ ಮಹಿಳಾ ಪ್ರಯಾಣಿಕರ ಸೇವೆಗಾಗಿ ನಿಲ್ಲಿಸಲಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೇಳಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top