ಕೊತ್ತಂಬರಿಯಲ್ಲಿದೆ ನಿಮ್ಮಲಿರುವ ಕಾಯಿಲೆಯನ್ನು ಗುಣಪಡಿಸುವ ಮದ್ದು..!

kottumbari soppu

ಕೊತ್ತಂಬರಿ ಬೀಜ..ಸದ್ಯ ಅಡುಗೆಯಲ್ಲಿ ಬಳಸುವ ಪ್ರಮುಖವಾದ ಪದಾರ್ಥ, ಕೊತ್ತಂಬರಿಯಲ್ಲಿ ಅನೇಕ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳು ಸಹ ಇದ್ದು, ಇದರಲ್ಲಿ ವಿಟಮಿನ್‌ ʻಸಿʼ ಮತ್ತು ವಿಟಮಿನ್‌ ʻಎʼ ಅಂಶವಿದ್ದು ಇದರಲ್ಲಿ ಪೋಷಕಾಂಶಗಳಾದ ರಂಜಕ ಮತ್ತು ಕಬ್ಬಿಣದ ಅಂಶಗಳು ಸಹ ಇವೆ.

ಇದರಲ್ಲಿ ಯಾವೆಲ್ಲ ಜೌಷಧಿಯ ಗುಣಗಳು ಇವೆ ಅನ್ನೋದನ್ನು ಈ ಕೆಳಕಂಡಂತೆ ನೋಡೋಣ

1.ಇದರಲ್ಲಿ ಕಬ್ಭಿಣಾಂಶ ಇರುವುದರಿಂದ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ಜೇನಿನೊಂದಿಗೆ ಬೆರಸಿ ಸೇವನೆ ಮಾಡುವುದರಿಂದ ರಕ್ತಹೀನತೆಯಿಂದ ಬಳಲುವವರಿಗೆ ಉತ್ತಮ ಔಷಧಿ ಅಂತಾನೇ ಹೇಳಬಹದು

2.ಬಾಯಿಹುಣ್ಣಿನ ತೊಂದರೆ ಇದ್ದವರು ಕೊತ್ತಂಬರಿ ಸೊಪ್ಪಿನ ರಸದಿಂದ ಬಾಯಿ ಮುಕ್ಕಳಿಸುವ ಜೊತೆ ಊಟವಾದ ನಂತರ ಎಲೆಯನ್ನು ಅಗಿದು ತಿನ್ನುವುದರಿಂದ ಬಾಯಿಹುಣ್ಣಿನ ಸಮಸ್ಯೆಯಿಂದ ದೂರವಾಗಬಹುದು.

3.ಮೂಗಿನಲ್ಲಿ ರಕ್ತಸ್ರಾವ ಸಮಸ್ಯೆ ಇರುವವರು ಕೊತ್ತಂಬರಿ ಸೊಪ್ಪಿ ರಸವನ್ನು ಮೂಗಿಗೆ ಹಿಂಡಿಕೊಳ್ಳುವುದರಿಂದ ರಕ್ತಸ್ರಾವದ ತೊಂದರೆ ದೂರವಾಗುತ್ತದೆ.

4.ಪ್ರತಿದಿನ ಊಟವಾದ ನಂತರ ಕೊತ್ತಂಬರಿ ಸೊಪ್ಪನ್ನು ಬೆರೆಸಿ ಮಜ್ಜಿಗೆಯನ್ನು ಕುಡಿಯುವುದರಿಂದ ಅಜೀರ್ಣ ಸಮಸ್ಯೆ ಮತ್ತು ಹೊಟ್ಟೆಯುಬ್ಬರದ ಸಮಸ್ಯೆ ನಿವಾರಣೆಯಾಗುತ್ತದೆ.

5.ಊಟವಾದ ನಂತರ ಕೊತ್ತಂಬರಿ ಸೊಪ್ಪನ್ನು ತಿನ್ನುವುದರಿಂದ ಹಲ್ಲು ಹುಳುಕು ಮತ್ತು ಒಸಡನ್ನು ಗಟ್ಟಿಗೊಳಿಸಲು ಸಹಕಾರಿಯಾಗುವುದರಲ್ಲಿ ಅನುಮಾನವೇ ಇಲ್ಲ.

ಈ ರೀತಿ ಕೊತ್ತಂಬರಿ ಸೊಪ್ಪು ಅಥವಾ ಕೊತ್ತಂಬರಿ ಬೀಜವನ್ನು ಉಪಯೋಗಿಸುವುದರಿಂದ ನಿಮ್ಮ ಆರೋಗ್ಯವನ್ನು ಭಾಗ್ಯವಾಗಿ ಇಟ್ಟುಕೊಳ್ಳಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top