ಕೆ.ಎಲ್.ರಾಹುಲ್‍ಗೆ ಒಲಿದ ಕ್ಯಾಪ್ಟನ್ ಪಟ್ಟ!

ಕೆ.ಎಲ್.ರಾಹುಲ್‍ಗೆ ಒಲಿದ ಕ್ಯಾಪ್ಟನ್ ಪಟ್ಟ!

ಟೀಂ ಇಂಡಿಯಾದ ಸ್ಮಾರ್ಟ್ ಆಟಗಾರ ಕೆ.ಎಲ್.ರಾಹುಲ್‍ಗೆ ಈಗ ಕ್ಯಾಪ್ಟನ್ ಆಗೋ ಅವಕಾಶ ಒದಗಿಬಂದಿದೆ. ಹೌದು ಅರೇ ವಿರಾಟ್ ಕೊಹ್ಲಿ ಇದ್ದರಲ್ಲಾ ಅಂತ ಯೋಚ್ನೆ ಮಾಡ್ತಿದ್ದೀರಾ.. ಆದ್ರೆ ಕೆ.ಎಲ್.ರಾಹುಲ್ ಕ್ಯಾಪ್ಟನ್ ಆಗ್ತಾ ಇರೋದು ಟೀಂ ಇಂಡಿಯಾಗೆ ಅಲ್ಲ ಬದಲಿಗೆ ಐಪಿಎಲ್ ನಲ್ಲಿ ತಾವು ಪ್ರತಿನಿಧಿಸೋ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ, ಹೌದು ಕಿಂಗ್ಸ್ ಇಲೆವೆನ್ ಪಂಜಾಬ್ ಈ ಬಾರಿ ಐಪಿಎಲ್ ಆವೃತ್ತಿಯಲ್ಲಿ ತಂಡವನ್ನು ಮುನ್ನೆಡೆಸಿದ ಆರ್.ಅಶ್ವಿನ್ ಅವರನ್ನು ತಂಡದಿಂದ ಕೈ ಬಿಡೋ ಪ್ಲಾನ್ ನಲ್ಲಿದ್ದು, ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ತಂಡವನ್ನು ಯಾರು ಮುನ್ನಡೆಸಬೇಕು ಅನ್ನೋ ಮಾತುಗಳು ಕೇಳಿ ಬರ್ತಾ ಇದೆ.

ಇನ್ನು ಈ ವಿಚಾರವಾಗಿ ಅಶ್ವಿನ್ ನಂತರದ ತಂಡವನ್ನು ಮುನ್ನೆಡಸಲು ಕೆ.ಎಲ್.ರಾಹುಲ್‍ ಸೂಕ್ತ ಅನ್ನೋ ಮಾತುಗಳು ಕೇಳಿಬರ್ತಾ ಇದೆ, ಈ ಹಿನ್ನಲೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಆರ್. ಅಶ್ವಿನ್ ಬದಲಿಗೆ ಕೆ.ಎಲ್.ರಾಹುಲ್ ರನ್ನು ನಾಯಕನಾಗಿ ಆಯ್ಕೆ ಮಾಡಲು ಮ್ಯಾನೆಜ್‌ಮೆಂಟ್‌ ನಿರ್ಧರಿಸಿದೆ ಅನ್ನೋ ಮಾತುಗಳು ಕೇಳಿ ಬರ್ತಾ ಇದೆ.

ಅಂದುಕೊಂಡಂತೆ ಅದ್ರೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ತಂಡವನ್ನು ಕನ್ನಡಿಗ ರಾಹುಲ್ ಮುನ್ನಡೆಸಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top