KL ರಾಹುಲ್ ,ಮಯಾಂಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಿಚ್ಚ

ಐಪಿಎಲ್‌2020ಯಲ್ಲಿ ಈಬಾರಿ ಕನ್ನಡಿಗರ ಅಬ್ಬರ ಜೋರಾಗಿದ್ದು,ಈಗಾಗಲೇ ಕನ್ನಡಿಗರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.ಇನ್ನು ಪಂಜಾಬ್ ತಂಡದಲ್ಲಿ 5ಜನ ಕನ್ನಡಿಗರಿದ್ದು,ಅದ್ಭುತ ಪ್ರದರ್ಶನ ನೀಡ್ತಿದ್ದಾರೆ.ಅದರಲ್ಲೂ ರಾಹುಲ್ ಮತ್ತು ಮಯಾಂಕ್ ಆಟಕ್ಕೆ ಎಲ್ಲಾ ಮನಸೋತಿದ್ದಾರೆ.ನಿನ್ನೆ ನಡೆದ ರಾಜಸ್ಥಾನ್ ರಾಯಲ್ಸ್ ತಂಡ ವಿರುದ್ಧದ ಇವರಿಬ್ಬರ ಜೊತೆಯಾಟ ನೋಡಿ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ.ಇದೀಗ ರಾಹುಲ್ ಮತ್ತು ಮಯಾಂಕ್ ಆಟಕ್ಕೆ ಕಿಚ್ಚ ಫಿದಾ ಆಗಿದ್ದಾರೆ.ತಮ್ಮ ಟ್ವೀಟರ್ ನಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.ಕೆ.ಎಲ್ ರಾಹುಲ್ ವಿಶ್ವದ ಉತ್ತಮ‌ ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದಾರೆ.ಮಯಾಂಕ್ ಸಹ ಅದ್ಭುತ ಸಾಮರ್ಥ್ಯ ಹೊಂದಿದ್ದಾರೆ.ಈ ಬಾರಿಯ ಐಪಿಎಲ್‌ ಆದಕ್ಕೆ ಸಾಕ್ಷಿಯಾಗಬೇಕಿತ್ತು,ಅದೇ ಆಗುತ್ತಿದೆ ಎಂದು ಕಿಚ್ಚ ಸುದೀಪ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top