ಇದು ಕಿರಿಕ್ ಕೀರ್ತಿಯ ಟ್ರಯಾಂಗಲ್ ನೋವ್ ಸ್ಟೋರಿ..!

ಬಿಗ್ ಬಾಸ್ ಖ್ಯಾತಿಯ ಕಿರಿಕ್‌ ಕೀರ್ತಿಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಬಿಗ್ ಬಾಸ್ ನಂತರ ಕಿರಿಕ್ ಏನ್ ಮಾಡ್ತಿದ್ದಾರೆ. ಅಂತ ಕೇಳಿದ್ರೆ ಕಿರಿಕ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿ, ಹೌದು ಕಿರಿಕ್ ಕೀರ್ತಿ ಸದ್ಯ ಮೂರು ವಿಭಿನ್ನ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಚಿತ್ರಾಲಿ, ಮತ್ತು ತಿರುಮಲ ವೈನ್ ಸ್ಟೋರ್ ಟ್ರೈಲರ್ ಮೂಲಕ ಎಲ್ಲರನ್ನು ಆಕರ್ಷಿಸಿತ್ತು, ಈಗ ಹುಟ್ಟುಹಬ್ಬದ ಪ್ರಯುಕ್ತ ಕಿರಿಕ್‌ ಅವರ ಮತ್ತೊಂದು ಸಿನಿಮಾದ ಟೀಸರ್ ರಿಲೀಸ್ ಆಗಿದೆ ಸಿಲಿಂಡರ್ ಸತೀಶ ಅನ್ನೋ ಸಿನಿಮಾದಲ್ಲಿ ಕಿರಿಕ್ ಸಿಲಿಂಡರ್ ಡೆಲಿವರಿ ಮಾಡೋ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಟೀಸರ್ ನೋಡಿದ್ರೆ ಇದೊಂದು ಪ್ರೇ‌ಮ ಕಥೆ ಅನಿಸಿದ್ರು ಚಿತ್ರದಲ್ಲಿ ಒಂದೊಂದು ಹಂತದಲ್ಲೂ ತಿರುವು ಪಡೆದುಕೊಳ್ತಾ ಹೋಗುತ್ತೆ, ಇನ್ನು ಟೀಸರ್ ನಲ್ಲೇ ಹೇಳೋ ಹಾಗೆ ಇಂದೊಂದು‌ ಟ್ರಯಾಂಗಲ್ ಲವ್ ಸ್ಟೋರಿ ಅಲ್ಲ ಅಲ್ಲ ಇದು ಟ್ರಯಾಂಗಲ್‌ ನೋವ್ ಸ್ಟೋರಿ.

ಇನ್ನು ಈ ಚಿತ್ರದಲ್ಲಿ ಕಿರಿಕ್ ಕೀರ್ತಿಗೆ ಖ್ಯಾತ ನಟಿ ನಿರೂಪಕಿ‌ ಶಾಲಿನಿ ಮತ್ತು ಸಂಗೀತ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಮಧುಸೂದನ್ ಶ್ರೀಕರ್ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರಕ್ಕೆ ಕಿರಿಕ್ ಪತ್ನಿ‌ ಅರ್ಪಿತಾ ಕೀರ್ತಿ ಬಂಡವಾಳ ಹೂಡಿದ್ದಾರೆ. ಈಗಾಗ್ಲೇ ಟೀಸರ್ ಸೋಶಿಯಲ್‌ ಮೀಡಿಯಾದಲ್ಲಿ ಸೌಂಡ್ ಮಾಡ್ತಾ ಇದ್ದು ಆದಷ್ಟು ಬೇಗ ಥಿಯೇಟರ್ ನಲ್ಲೂ ಸೌಂಡ್ ಮಾಡಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top