ನಿಮ್ ಮಗುವಿಗೆ ಸುಂದರವಾಗಿ ಹೊಳೆಯುವ ತ್ವಚೆ ಬೇಕೆಂದರೆ ಸೋಪ್ ಬದಲು ಇವುಗಳನ್ನು ಬಳಸಿ..!

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಹುಟ್ಟುವ ಮೊದಲೇ ನನ್ನ ಮಗು ಸುಂದರವಾಗಿರಬೇಕು ಕೆಂಪಗೆ ಬೆಳ್ಳಗೆ ಇರಬೇಕು ಅಂತ ಆಸೆ ಪಡುವವರು ಇದ್ದಾರೆ, ಇನ್ನು ನಿಮ್ಮ ಮಗುವಿನ ತ್ವಚೆ ಒಳ್ಳೆಯ ಕಲರ್ ಬರಬೇಕೆಂದರೆ ನೀವೂ ಸೋಪು, ಅಥವಾ ಯಾವುದೋ ಕ್ರೀಂಗಳನ್ನು ಬಳಸುವ ಬದಲು ಹೀಗೆ ಮಾಡಿ..

  1. ಮಗುವಿಗೆ ನೀವೂ ಸ್ನಾನ ಮಾಡಿಸುವಾಗ ಮಗುವಿಗೆ ಎಣ್ಣೆಯಿಂದ ಮಸಾಜ್ ಮಾಡಿ ಸ್ನಾನ ಮಾಡಿಸಿದ್ರೆ ಮಗಿವಿನ ಚರ್ಮ ಕಾಂತಿಯುತವಾಗಿ ಹೊಳೆಯುತ್ತದೆ.
  2. ಚಳಿಗಾಲ ಮತ್ತು ಮಳೆಗಾಲದಲ್ಲಿ ಮಗುವಿಗೆ ಆಲೀವ್ ಆಯಿಲ್, ಬಾದಾಮಿ ಎಣ್ಣೆ ಅಥವಾ ಸಾಸಿವೆ ಎಣ್ಣೆ ಇದರಲ್ಲಿ ಯಾವುದಾದರು ಒಂದನ್ನು ಬೆಚ್ಚಗೆ ಮಾಡಿ ಅದನ್ನು ಮಗುವಿಗೆ ಮೈಗೆ ಹಚ್ಚಿ ಮಸಾಜ್ ಮಾಡಿ 1 ಗಂಟೆಯ ನಂತರ ಸ್ನಾನ ಮಾಡಿಸಿದ್ರೆ ಮಗುವಿಗೂ ಲವ ಲವಿಕೆಯಿಂದಿರುತ್ತದೆ ಜೊತೆಗೆ ಮಗುವಿನ ಬಣ್ಣವೂ ಹೊಳಪಾಗಿರುತ್ತದೆ.
  3. ಬೇಸಿಗೆ ಕಾಲದಲ್ಲಿ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಹದವಾಗಿ ಬಿಸಿಮಾಡಿ ಮಗುವಿಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿಸಿದ್ರೆ ಮಗುವಿಗೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಅಂತಾನೇ ಹೇಳಬಹುದು.
  4. ಮಗುವಿಗೆ ಸೋಪಿನ ಬದಲು ಮನೆಯಲ್ಲಿಯೇ ಹೆಸರುಕಾಳನ್ನು ಹುರಿದು ಪುಡಿಮಾಡಿ ಅದಕ್ಕೆ ಸ್ಪಲ್ಪ ಅರಿಶಿನ ಹಾಗೂ ಒಂದು ಇಂಚು ಲವಾಂಚವನ್ನು ಹಾಲಿನ ಜೊತೆ ಬೆರೆಸಿ ಪೇಸ್ಟ್ ಮಾಡಿಕೊಂಡು ಮಗುವಿನ ಮೈಗೆ ಹಚ್ಚಿ ಸ್ನಾನ ಮಾಡಿಸಿದ್ರೆ ಮಗುವಿನ ದೇಹಕ್ಕೆ ಉತ್ತಮ ಹಾಗೂ ತ್ವಚೆಯೂ ಕಾಂತಿಯುತವಾಗಿರುತ್ತದೆ, ಹೆಸರು ಕಾಳಿನ ಪುಡಿ ಬೇಡವೆನ್ನುವವರು ಕಡಲೆ ಹಿಟ್ಟಿನಿಂದಲು ಈ ರೀತಿ ಮಾಡಿಕೊಳ್ಳಬಹುದು..

ಈ ರೀತಿ ಮಗುವಿಗೆ ಸ್ನಾನ ಮಾಡಿಸುವ ಸಮಯದಲ್ಲಿ ಈ ಮೇಲಿನ ಅಂಶಗಳನ್ನು ಅನುಸರಿಸಿದ್ರೆ ಮಗುವಿನ ತ್ವಚೆ ಸುಂದರವಾಗಿ ಹೊಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top