ಕಾಲ ಬದಲಾದಂತೆ ನಾವು ಬದಲಾಗಬೇಕು ಕಿಚ್ಚ ಸುದೀಪ್..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವುಕು ರಾಜನಾಗಿ ಮಿಂಚಿದ ಬಹುತಾರಾಗಣದ ಸೈರಾ ನರಸಿಂಹ ರೆಡ್ಡಿ ಚಿತ್ರ ಬಿಡುಗಡೆಯಾದ ಎಲ್ಲಾ ಕಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದೆ, ಇನ್ನು ಕರ್ನಾಟಕದಲ್ಲೂ ಚಿತ್ರ ಡಬ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಾ ಇದೆ, ಈ ವೇಳೆ ಸೈರಾ ಸಕ್ಸಸ್ ಮೀಟ್‍ನಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಕಾಲ ಬದಲಾದಂತೆ ನಾವು ಬದಲಾಗಬೇಕು. ಕೆಲ ವರ್ಷಗಳ ಹಿಂದೆ ಡಬ್ಬಿಂಗ್ ವಿರುದ್ಧ ನಾನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ನಿಜ. ಆದ್ರೆ ದೊಡ್ಡ ದೊಡ್ಡ ಸಿನಿಮಾಗಳು ಮಾಡುವಾಗ ಡಬ್ಬಿಂಗ್ ಅನಿವಾರ್ಯ. ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಬಂದ್ರೆ ಸಂತೋಷ ಪಡಬೇಕು ಅಂತ ಹೇಳಿದ್ರು, ಇನ್ನು ಇದೇ ವೇಳೆ ರಾಹುಲ್ ದ್ರಾವಿಡ್ ಮತ್ತು ಅಂಬಿ ಬಯೋಪಿಕ್ ಮಾಡ್ತೀರಾ ಅಂತ ಕೇಳಿದ ಪ್ರಶ್ನೆಗೆ ಬಯೋಪಿಕ್ ಸಿನಿಮಾ ಮಾಡೋದು ಕಷ್ಟ ರಾಹುಲ್ ದ್ರಾವಿಡ್ ಸಿನಿಮಾ ಮಾಡಲು ಚಿಕ್ಕ ವಯಸ್ಸಿನ ಹೀರೋ ಬೇಕು ಮತ್ತು ಅಂಬರೀಶ್ ಕುರಿತು ಸಿನಿಮಾ ಮಾಡೋದು ಕಷ್ಟ, ಅವರು ನಮ್ಮ ಜೊತೆ ಇದ್ದವರು ಪರ್ಫೆಕ್ಟ್ ಆಗಿ ಅವರ ಬಯೋಪಿಕ್ ಮಾಡೋದು ಸಾಧ್ಯವಿಲ್ಲ ಅಂತ ಕಿಚ್ಚ ಸುದೀಪ್ ಹೇಳಿದ್ರು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top