ಕಿಚ್ಚನ 18ವರ್ಷದ ಕನಸು ಈಗ ನನಸು..!

ಕಿಚ್ಚ ಸುದೀಪ್ ಯಾವುದಾದರು ಕನಸು ಕಂಡರೇ ಅದನ್ನು ನನಸು ಮಾಡಿಕೊಳ್ಳುವ ತನಕ ಹಪಹಪಿಸುತ್ತಿರುತ್ತಾರೆ.. ಹೌದು ಕಿಚ್ಚನ ಸ್ವಭಾವವೇ ಅಂತದ್ದು ಈಗ ಕಿಚ್ಚ ತನ್ನ 18ವರ್ಷದ ಕನಸು ಒಂದನ್ನ ಈಗ ನನಸು ಮಾಡಿಕೊಳ್ಳೋಕೆ ಹೊರಟ್ಟಿದ್ದಾರೆ. 18ವರ್ಷದ ಕನಸು ನನಸಾಗುತ್ತಿರುವದು ಅನುಪ್ ಭಂಡಾರಿ ನಿರ್ದೇಶನದ ಮೂಲಕ.. ರಂಗಿತ ರಂಗ ಅಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟು‌ ರಾಜರಥ ಅನ್ನೋ ಸಿನಿಮಾ‌ಮಾಡಿ ಎಲ್ಲಾರಿಂದ ಟೀಕೆಗೆ ಗುರಿಯಾಗಿದ್ದ ಅನುಪ್ ಮತ್ತೆ ಮೈ ಕೊಡವಿ‌ ನಿಂತಿದ್ದಾರೆ.. ಈಗ ಅನೂಪ್ ಭಂಡಾರಿ ಕಿಚ್ಚ ಸುದೀಪ್ ಗಾಗಿ ಕಥೆ ರೆಡಿ ಮಾಡಿಕೊಂಡಿದ್ದು ಕಿಚ್ಚನಿಗೆ ಕಥೆಯನ್ನು ಹೇಳಿ‌ ಓಕೆ‌ ಮಾಡಿಸಿಕೊಂಡಿದ್ದಾರೆ..ಇನ್ನು ಈ ಸಿನಿಮಾದ ನಿರ್ಮಾಣವನ್ನು ಕಿಚ್ಚ ಸುದೀಪ್ ತಮ್ಮ ಹೆಗಲಿಗೆ ಏರಿಸಿಕೊಳ್ಳುವ ಮೂಲಕ ತಮ್ಮ 18 ವರ್ಷದ ಆಸೆಯನ್ನು ಕೊನೆಗೂ ಈಡೇರಿಸಿಕೊಂಡಿದ್ದಾರೆ… ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ನಾಯಕನಾಗಿ ನಟಿಸೋ ಸಿನಿಮಾ ಟೈಟಲ್ ಆಗಲಿ ತಾರಾ ಬಳಗವೇ ಆಗಲಿ ಯಾವುದು ಇನ್ನು ಫೈನಲ್ ಆಗಿಲ್ಲ.. ಆದ್ರೆ ಈ ಮೂಲಕ ಸುದೀಪ್ ಪ್ರೊಡಕ್ಷನ್ ಕಂಪನಿಯನ್ನು ಹೊರ ತರಲಿದ್ದಾರೆ. ಇನ್ನು ಈ ಪ್ರೊಡಕ್ಷನ್ ಕಂಪನಿಗೆ ಹೆಸರು‌ ಸಹ ವಿಭಿನ್ನವಾಗಿ‌ ಇಟ್ಟಿದ್ದಾರೆ. ಸುದೀಪ್ ,ಅವರ ಪತ್ನಿ ಮತ್ತು‌ ಅವರ ಮಗಳು ಮೂರು ಜನರ ಹೆಸರು ಸೇರಿಸಿ ಪ್ರೊಡಕ್ಷನ್ ಕಂಪನಿಗೆ ಹೆಸರಿಡಲಾಗಿದೆ.

ಇನ್ನು ತಮ್ಮ ಪ್ರೊಡಕ್ಷನ್‌ ಕಂಪನಿಗೆ ‘ಸುಪ್ರಿಯಾನ್ವಿ’ ಅನ್ನೋ ಡಿಫರೆಂಟ್ ಹೆಸರನ್ನು ಇಟ್ಟಿದ್ದಾರೆ.. ಇನ್ನು ಅನುಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಶುರುವಾಗಲು ಇನ್ನು ಬಹಳ ಸಮಯಗಳೇ ಬೇಕಾಗಿದೆ. ಸದ್ಯ ಕಿಚ್ಚ ಕೋಟಿಗೊಬ್ಬ, ಪೈಲ್ವಾನ್ ಸಿನಿಮಾದಲ್ಲಿ‌ ಬ್ಯೂಸಿ ಆಗಿದ್ದು, ಇದರ ಜೊತೆಯಲ್ಲಿ ಸೈರಾ ನರಸಿಂಹರೆಡ್ಡಿ ಚಿತ್ರದಲ್ಲೂ ತೊಡಗಿದ್ದಾರೆ. ಇನ್ನು ಈ‌ ಚಿತ್ರಗಳು ಮುಗಿದ ಮೇಲೆ ಹಾಲಿವುಡ್ ಗೆ ಹಾರಲಿದ್ದಾರೆ.. ಈ ಎಲ್ಲಾ ಸಿನಿಮಾಗಳ ಮುಗಿದ ಮೇಲಷ್ಟೇ ‘ಸುಪ್ರಿಯಾನ್ವಿ’ ಪ್ರೊಡಕ್ಷನ್ ನಲ್ಲಿ ಅನೂಪ್ ಭಂಡಾರಿ‌ ನಿರ್ದೇಶನದ ಸಿನಿಮಾ ಸೆಟ್ಟೇರಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top