ಕನ್ನಡದ ಬಿಗ್‍ಬಾಸ್‍ಗೆ ಬಂದ್ರು ಬಾಲಿವುಡ್ ಸಲ್ಮಾನ್ ಖಾನ್..!

kiccha sudeep salman khan bigg boss

ಬಿಗ್‍ಬಾಸ್ ಸೀಸನ್ 7 ಈ ಬಾರಿಯ ಸ್ಪೆಷಲ್ ಡೇಗೆ ಇಂದು ಸಾಕ್ಷಿಯಾಗಲಿದೆ.. ಬಿಗ್‍ಬಾಸ್‍ ಇತಿಹಾಸದಲ್ಲಿಯೇ ಮೊದಲ ಬಾರಿ ಇಂತಹದೊಂದು ಪ್ರಯತ್ನಕ್ಕೆ ಕೈ ಹಾಕಿದೆ ಕಲರ್ಸ್ ಕನ್ನಡ.. ಹೌದು ಪ್ರಪ್ರಥಮ ಬಾರಿಗೆ ಬಾಲಿವುಡ್ ಬಾಕ್ಸಾಫಿಸ್ ಸುಲ್ತಾನ್ ಸಲ್ಮಾನ್ ಖಾನ್ ಕನ್ನಡದ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಶನಿವಾರ ಬಿಗ್‍ಬಾಸ್‍ ಶೋನಲ್ಲಿ ಇಂದು ವಾರದ ಕಥೆ ಕಿಚ್ಚನ ಜೊತೆ ಇದ್ದು, ಕಿಚ್ಚ ಸುದೀಪ್ ಬಿಗ್‍ಬಾಸ್‍ನ ಇಡೀ ವಾರದ ಬಗ್ಗೆ ಸ್ಪರ್ಧಿಗಳ ಜೊತೆ ಮಾತನಾಡಲಿದ್ದಾರೆ. ಅದರ ಜೊತೆಯಲ್ಲಿಯೇ ಇ‌ಂದು ಬಿಗ್‍ಬಾಸ್‍ನ ಒಂದೇ ವೇದಿಕೆಯಲ್ಲಿ ಸ್ಯಾಂಡಲ್ವುಡ್ ನ ಬಾದ್ ಶಾ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಸಲ್ಮಾನ್‌ಖಾನ್ ಕಾಣಿಸಿಕೊಳ್ಳಲಿದ್ದಾರೆ‌.

ಇದೇ ತಿಂಗಳು 20ರಂದು ದಬಾಂಗ್ 3 ರಿಲೀಸ್ ಆಗ್ತಾ ಇದ್ದು ಈ ಹಿನ್ನಲೆಯಲ್ಲಿ ದಬಾಂಗ್ ಚಿತ್ರತಂಡ ಬಿಗ್‍ಬಾಸ್‍ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲ್ಲೇ ಕಾರ್ಯಕ್ರಮದ ಪ್ರೋಮೋ ಕಲರ್ಸ್ ಕನ್ನಡ ಬಿಡುಗಡೆ ಮಾಡಿದ್ದು ,ಅದರಲ್ಲಿ ಸಲ್ಮಾನ್ ಕನ್ನಡದಲ್ಲಿ ಮಾತನಾಡಿದ್ದು,ಇಂದು ಬಿಗ್‍ಬಾಸ್‍ ಶೋ ನೋಡೋಕೆ ಇದೊಂದು ಕಾರಣ ಸಾಕು ಅಂತಿದ್ದಾರೆ.

Bigg Boss

ಪೈಲ್ವಾನ್ ಎದುರು ಸುಲ್ತಾನ್ ನಿಂತಿದ್ದಾರೆ ಅಂದ್ಮೇಲೆ ಬಿಗ್‌ಬಾಸ್ ವೇದಿಕೆಯು ಮೂರು ಪಟ್ಟು ಹೆಚ್ಚು ದಬಂಗ್ ಆಗಲಿದೆ.ಬಿಗ್‌ಬಾಸ್ | ಇಂದು ರಾತ್ರಿ 9ಕ್ಕೆ#BBK7 #BiggBoss #ColorsKannada Salman Khan

Posted by Colors Kannada on Saturday, 7 December 2019
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top