ಕಿಚ್ಚ ಸುದೀಪ್‍ಗೆ ಸಿಕ್ತು ಹೊಸದೊಂದು ಬಿರುದು..!

ಕಿಚ್ಚ ಸುದೀಪ್‍ಗೆ ಸ್ಯಾಂಡಲ್‍ವುಡ್‍ನಲ್ಲಿ ತನ್ನದೇ ಆದ ಹೆಸರಿದೆ, ತನ್ನದೇ ಆದ ಸ್ಟಾರ್ ಢಮ್ ಇದೆ, ಇನ್ನು ತನ್ನದೇ ಆದ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ, ಅಭಿನಯ ಚಕ್ರವರ್ತಿ ಎಂಬ ಬಿರುದು ಪಡೆದಿದ್ದ ಕಿಚ್ಚ ಸುದೀಪ್‍ಗೆ ಈಗ ಮತ್ತೊಂದು ಬಿರುದು ದೊರೆತಿದೆ, ಸದ್ಯ ಪೈಲ್ವಾನ್' ಚಿತ್ರ ತಂಡಬಾದ್ ಷಾ’ ಎಂಬ ಬಿರುದು ನೀಡಿದ್ದು, ಈಗ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಿಚ್ಚನಿಗೆ ಹೊಸದೊಂದು ಬಿರುದು ನೀಡಿದ್ದಾರೆ. ಮಂಗಳವಾರ ಪೈಲ್ವಾನ್ ಚಿತ್ರದ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದ್ದು ಈ ಹಾಡಿಗೆ ಈಗಾಗ್ಲೇ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ, ಕಣ್ಣು ಮಣಿಯೇ ಕಣ್ಣು ಹೊಡೆಯೇ' ಅನ್ನೋ ಈ ಹಾಡು ಸದ್ಯ ಯೂಟ್ಯೂಬ್‍ನಲ್ಲಿ ಮಿಲಿಯನ್ ವಿವ್ಸ್ ಪಡೆದಿದ್ದು, ಈ ಹಾಡನ್ನು ನೋಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸುದೀಪ್‍ಗೆ ಹೊಸ ಟೈಟಲ್ ನೀಡಿದ್ದಾರೆ. ಸುದೀಪ್‍ರನ್ನುಪೈಲ್ವಾನ್ ಆಫ್ ರೊಮ್ಯಾನ್ಸ್’ ಎಂದು ಸಂತೋಷ್ ಆನಂದ್ ರಾಮ್ ಕರೆದಿದ್ದಾರೆ. ಇನ್ನು ಸಂತೋಷ್ ನೀಡಿದ್ದ ಈ ಟೈಟಲ್ ಅನ್ನೂ ಸುದೀಪ್‍ಗೂ ಕೂಡ ಇಷ್ಟವಾಗಿದ್ದು, ಸಂತೋಷ್ ಆನಂದ್ ರಾಮ್ ಟ್ವೀಟ್‍ಗೆ ರೀ ಟ್ವೀಟ್ ಮಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top