ಪೈಲ್ವಾನ್ ಗಾಗಿ 16ಕೆಜಿ ತೂಕ ಇಳಿಸಿಕೊಂಡ ಕಿಚ್ಚ..!

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ಗಾಗಿ ಕಿಚ್ಚ ಸುದೀಪ್‌ ತಮ್ಮ ದೇಹಕ್ಕೆ ಇನ್ನಿಲ್ಲದ ದಂಡನೆ ಮಾಡ್ತಾ ಇರೋದು‌ ಪೈಲ್ವಾನ್‌ ಚಿತ್ರದ ಪೋಸ್ಟರ್ ನೋಡಿದ್ರೇನೆ ಗೊತ್ತಾಗುತ್ತೆ.. ಇತ್ತೀಚೆಗೆ ಬಿಗ್ ಬಾಸ್ ವೇದಿಕೆಯಲ್ಲೂ ಕಿಚ್ಚ ಸುದೀಪ್ ಆಕಾರ ನೋಡಿ ಅವರ ಅಭಿಮಾನಿಗಳು ಸಹ ದಂಗಾಗಿ ಹೋಗಿದ್ರು ಕಿಚ್ಚ ಯಾಕೆ ಇಷ್ಟು ಸಣ್ಣವಾಗಿದ್ದಾರೆ ಅಂತ ಆದ್ರೆ ಕಿಚ್ಚ ಅದೇ ವೇದಿಕೆಯಲ್ಲಿ ಸಿನಿಮಾಗಾಗಿ ಈ ರೀತಿ ಬಾಡಿ ಮೆನ್ ಟೇನ್ ಮಾಡಿದ್ದೇನೆ ಅಂತ ಹೇಳಿದ್ರು. ಆದ್ರೀಗಾ ಸುದೀಪ್ ಯಾವ ಮಟ್ಟಕ್ಕೆ ಬಾಡಿ ಲಾಸ್ ಮಾಡಿಕೊಂಡಿದ್ದೇ‌ನೆ ಅಂತ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಟ್ವೀಟರ್ ನಲ್ಲಿ ಬರೆದುಕೊಂಡಿರೋ‌ ಕಿಚ್ಚ ಪೈಲ್ವಾನ್ ಗಾಗಿ ವರ್ಕ್ ಔಟ್ ಮಾಡೋಕೆ ಶುರುಮಾಡಿದಾಗ ನನ್ನ ತೂಕ 89ಕೆಜಿ ಇತ್ತು ಆದ್ರೆ ಈಗ ಪೈಲ್ವಾನ್ ಗಾಗಿ ತಯಾರಾದ ಮೇಲೆ 73ಕೆಜಿಗೆ ಇಳಿದಿದ್ದೇನೆ.. ತುಂಬಾ ಹಗುರವಾಗಿದ್ದೇನೆ ಇದಕ್ಕೆ ನಾನು ಪೈಲ್ವಾನ್ ಚಿತ್ರ ತಂಡಕ್ಕೆ ಮತ್ತು ಇದಕ್ಕೆ ಸ್ಪೂರ್ತಿಯಾದ ಕಬೀರ್ ದುಶನ್ ಸಿಂಗ್ ಗೆ ಥ್ಯಾಂಕ್ಸ್ ಹೇಳ್ತೀನಿ ಅಂತ ಬರೆದುಕೊಂಡಿದ್ದಾರೆ..

ಪೈಲ್ವಾನ್ ಗಾಗಿ 16ಕೆಜಿ ತೂಕ ಇಳಿಸಿಕೊಂಡ ಕಿಚ್ಚ..!

8 ಭಾಷೆಯಲ್ಲಿ ಪೈಲ್ವಾನ್


ಇನ್ನು ಪೈಲ್ವಾನ್ ಚಿತ್ರಕ್ಕೆ ಈಗಾಗ್ಲೇ ಹೈಪ್ ಕ್ರಿಯೆಟ್ ಆಗಿದ್ದು ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಅದ್ಧೂರಿ ಸೆಟ್ ಹಾಕಿ ಗರಡಿ ಮನೆ ಮತ್ತು ಬಾಕ್ಸಿಂಗ್ ಅಖಾಡ ರೆಡಿ ಮಾಡಲಾಗಿದೆ ಕೋಟಿ ಗಟ್ಟಲೆ ವೆಚ್ಚದಲ್ಲಿ ಸೆಟ್ ಹಾಕಿದ್ದು ಅದ್ದೂರಿಯಾಗಿ ಚಿತ್ರದ ಶೂಟಿಂಗ್ ಮಾಡಲಾಗ್ತಾ ಇದೆ.. ಇನ್ನು ಪೈಲ್ವಾನ್ ಚಿತ್ರ 8 ಭಾಷೆಯಲ್ಲಿ ತೆರೆಗೆ ತರೋ ಪ್ಲಾನ್ ನಲ್ಲಿ ಇರೋ ಚಿತ್ರತಂಡ ಇದಕ್ಕಾಗೆ ಸಖತ್ ಆಗಿ ಪ್ಲಾನ್ ರೆಡಿಮಾಡಿಕೊಳ್ತಾ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top