ಕಿಚ್ಚನ ಹೊಸ ಅಡುಗೆ ವೀಡಿಯೋ! ಅಭಿಮಾನಿಗಳಿಂದ ಸಖತ್ ಬೇಡಿಕೆ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಕಲಕಲಾವಲ್ಲಭ ಅನ್ನೋದು ಎಲ್ಲಾರಿಗೂ ಗೊತ್ತಿರೋ ವಿಚಾರ, ಚಿತ್ರರಂಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಕೊಂಡಿರುವ ಕಿಚ್ಚ, ಇನ್ನು ತಮ್ಮ ಲೈಫ್ ಸ್ಟೆಲ್‌ನಲ್ಲಿ ಅನೇಕ ಗುಣಗಳನ್ನು ಹೊಂದಿರೋ ಸುದೀಪ್, ಅದರಲ್ಲೂ ಅಡುಗೆಯಲ್ಲಿ ಪ್ರವೀಣ ಆಂತಾನೇ ಹೇಳಬಹುದು, ಯಾವುದೇ ಕಾರ್ಯಕ್ರಮವಿರಲಿ, ಸಿನಿಮಾದ ಶೂಟಿಂಗ್ ಇರಲಿ, ಮನೆಯಲ್ಲಿ ಫ್ರಿ ಟೈಂನಲ್ಲಿ ಅಡುಗೆ ಮಾಡುವ ಹವ್ಯಾಸವನ್ನು ಕಿಚ್ಚ ಬೆಳಸಿಕೊಂಡಿದ್ದಾರೆ. ಇನ್ನು ಕಿಚ್ಚನ ಅಡುಗೆ ಎಂದರೆ ಸ್ಯಾಂಡಲ್‌ವುಡ್ ಮಂದಿಗೂ ಕೂಡ ಅಚ್ಚಮೆಚ್ಚು,

ಸದ್ಯ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಬ್ಯೂಸಿಯಾಗಿರೋ ಕಿಚ್ಚ ಸುದೀಪ್.. ಈ ಹಿಂದೆ ಬಿಗ್‌ಬಾಸ್ ಸ್ಪರ್ಧಿಗಳಿಗೆ ಅಡುಗೆ ಮಾಡಿ ಕೊಡುವ ಮೂಲಕ ಅವರನ್ನು ಖುಷಿ ಪಡಿಸಿದ್ರು, ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿಚ್ಚನ್ ಕಿಚನ್' ಅನ್ನೋ ಕಾರ್ಯಕ್ರಮ ನಡೆಸಿಕೊಡೋ ಮೂಲಕ ಸೆಲೆಬ್ರಿಟಿಗಳಿಗೆ ಅಡುಗೆ ಮಾಡಿ ಬಡಿಸಿದ್ರು. ಇವೆಲ್ಲವೂ ಕಿಚ್ಚ ಒಬ್ಬ ನಳಪಾಕ ತಜ್ಞ ಅನ್ನೋದನ್ನು ಹೇಳುತ್ತವೆ, ಇನ್ನು ಇತ್ತೀಚೆಗೆ ಸೈರಾ ಸಿನಿಮಾ ಸೆಟ್‌ನಲ್ಲಿ ಮೊಟ್ಟೆ ದೋಸೆ ಮಾಡೋ ಮೂಲಕ ಸುದ್ದಿಯಾಗಿದ್ದ ಕಿಚ್ಚ ಸುದೀಪ್ ಈ ಬಾರಿಕ್ರಿಸ್ಪಿ ಕ್ರೋಸೈಂಟ್ಸ್’ ಮಾಡೋ ವಿಡಿಯೋ ಈಗ ವೈರಲ್ ಆಗಿದ್ದು, ಕಿಚ್ಚನ ಅಭಿಮಾನಿಗಳು ನಮ್ ಬಾಸ್ ಅಂದ್ರೆ ಬಾಸ್ ಎಲ್ಲದರಲ್ಲೂ ಸಕಲಕಲಾವಲ್ಲಭ ಅಂತ ಹೇಳ್ತಿದ್ರೆ, ಕಿಚ್ಚನ ಆಪ್ತ ಬಳಗ ಬ್ರೋ ಯಾವಾಗ ಮತ್ತೆ ನಿಮ್ಮ ಕೈ ರುಚಿನೋಡೋದು ಅಂತ ಹೇಳ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top