ಪೈಲ್ವಾನ್​ ನಂತಾ ಸಿನಿಮಾ ಮಾಡಲ್ಲ ಎಂದಿದ್ದೇಕೆ ಸುದೀಪ್..?!

ಕಿಚ್ಚ ಸುದೀಪ್ ಸಿನಿಮಾ ಪೈಲ್ವಾನ್

‘ಹೆಬ್ಬುಲಿ’ ಖ್ಯಾತಿಯ ಡೈರೆಕ್ಟರ್ ಕೃಷ್ಣ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಂಬಿನೇಷನ್​ನ ಸಿನಿಮಾ ಪೈಲ್ವಾನ್ ಬಗ್ಗೆ ಎಲ್ಲರಲ್ಲೂ ನಿರೀಕ್ಷೆ ಇದೆ.
ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಸುದೀಪ್ ಇನ್ನು ಪೈಲ್ವಾನ್ ಅಂಥಾ ಸಿನಿಮಾವನ್ನು ಮಾಡಲ್ಲ ಎಂದಿದ್ದಾರೆ..!

ಕಿಚ್ಚ ಸುದೀಪ್   ಸಿನಿಮಾ ಪೈಲ್ವಾನ್


ಹೌದು ಪ್ರೆಸ್​ಮೀಟ್​ನಲ್ಲಿ ಸುದೀಪ್ ಹೀಗಂದಿದ್ದಾರೆ. ನಾನು ಇನ್ಮುಂದೆ ಪೈಲ್ವಾನ್ ರೀತಿಯ ಸಿನಿಮಾ ಮಾಡಲ್ಲ. ಯಾಕಂದ್ರೆ ಅಷ್ಟೊಂದು ಕಷ್ಟಪಟ್ಟಿದ್ದೇನೆ. ಪೈಲ್ವಾನ್​ -2 ಆದ್ರೆ ಪೈಲ್ವಾನ್ ಕೋಚ್ ಪಾತ್ರ ಕೊಡಲಿ ಎಂದು ಹಾಸ್ಯ ಚಟಾಕಿ ಹಾರಿಸಿದ್ರು.
ಇನ್ನು ಆಗಸ್ಟ್ ನಲ್ಲಿ ಪೈಲ್ವಾನ್ ರಿಲೀಸ್ ಆಗುತ್ತಿದ್ದು, ಸುನೀಲ್ ಶೆಟ್ಟಿ, ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್ ಮತ್ತಿತರರು ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top