ಡಿಸೆಂಬರ್‌ 21ಕ್ಕೆ ಕೆಜಿಎಫ್‌2 ಫಸ್ಟ್‌ ಲುಕ್‌.!

ಕೆಜಿಎಫ್‌, ಕರ್ನಾಟಕ ಗೋಲ್ಡನ್‌ ಸಿನಿಮಾ ಸ್ಯಾಂಡಲ್‌ವುಡ್‌ಗೆ ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ ಪರಿಚಯಿಸಿದ ಸಿನಿಮಾ, ರಾಕಿಂಗ್‌ ಸ್ಟಾರ್‌ ಯಶ್‌ ಅವರನ್ನು ನ್ಯಾಶನಲ್‌ ಸ್ಟಾರ್‌ ಮಾಡಿದ ಸಿನಿಮಾ, ಕೆಜಿಎಫ್‌ ಚಾಪ್ಟರ್‌ 1 ಸಿನಿಮಾ ರಿಲೀಸ್‌ ಆಗಿ ಸಖತ್‌ ಸೌಂಡ್‌ ಮಾಡಿದ್ದು, ಇಂಡಿಯನ್‌ ಮಾಸ್ಟರ್‌ ಸಿನಿಮಾ ಅನ್ನೊ ಹೆಸರನ್ನು ಪಡೀತು, ಈಗ ಸಿನಿರಸಿಕರು ಕೆಜಿಎಫ್‌ ಚಾಪ್ಟರ್‌ 2 ಚಿತ್ರಕ್ಕೆ ಕುತೂಹಲದಿಂದ ಕಾಯುತ್ತಿದ್ದು. ಚಿತ್ರ ನಿರ್ಮಾಪಕರು ಸಿನಿರಸಿಕರಿಗೆ ತಿಂಗಳ ಅಂತ್ಯದಲ್ಲಿ ಗಿಫ್ಟ್‌ ಕೊಡಲು ರೆಡಿಯಾಗಿದ್ದಾರೆ. ಹೌದು ಕೆಜಿಎಫ್‌ 2 ಚಿತ್ರದ ಫಸ್ಟ್‌ ಲುಕ್‌ ಅನ್ನು ಇದೇ ಡಿಸೆಂಬರ್‌ 21 ರಂದು ರಿಲೀಸ್‌ ಮಾಡಲು ಪ್ಲಾನ್‌ ಮಾಡಿಕೊಂಡಿದ್ದು. ಈ ಬಗ್ಗೆ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ನಿಮ್ಮನ್ನು ಇನ್ನು ಹೆಚ್ಚು ಕಾಯಿಸಲ್ಲ!ಕೆಜಿಎಫ್ 2 ಚಿತ್ರದ ಮೊದಲ ನೋಟ, ಇದೇ ತಿಂಗಳು 21 ರಂದು ಸಂಜೆ 5:45 ಕ್ಕೆ ನಿಮ್ಮ ಮುಂದೆ… #KGFChapter2FirstLook Hombale Films

Posted by Vijay Kiragandur on Friday, 13 December 2019

`ನಿಮ್ಮನ್ನು ಇನ್ನು ಹೆಚ್ಚು ಕಾಯಿಸಲ್ಲ!ಕೆಜಿಎಫ್ 2 ಚಿತ್ರದ ಮೊದಲ ನೋಟ, ಇದೇ ತಿಂಗಳು 21 ರಂದು ಸಂಜೆ 5:45 ಕ್ಕೆ ನಿಮ್ಮ ಮುಂದೆ’ ಅಂತ ಬರೆದುಕೊಂಡಿದ್ದು ಫಸ್ಟ್‌ ಲುಕ್‌ ನೋಡೋದಕ್ಕೆ ಕಾತುರದಿಂದ ಕಾಯ್ತಿದ್ದಾರೆ ಸಿನಿರಸಿಕರು.

#KGF ಅಭಿಮಾನಿಗಳಿಗೆಲ್ಲಾ ಒಂದು ಸಿಹಿ ಸುದ್ದಿ.ಬಹು ನಿರೀಕ್ಷೆಯ #KGFChapter2 ನ ಫಸ್ಟ್ ಲುಕ್ ಡಿಸೆಂಬರ್ 21 ರಂದು ಸಂಜೆ 5:45 ಕ್ಕೆ ನಿಮ್ಮ ಮುಂದೆ!#KGFChapter2FirstLook

Posted by K.G.F on Friday, 13 December 2019
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top