ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡುತ್ತಾ K.G.F !

ರಾಕಿಂಗ್ ಸ್ಟಾರ್ ಯಶ್ ಕೆ.ಜಿ.ಎಫ್ ಮೂಲಕ ವಿಶ್ವ ಮಟ್ಟದಲ್ಲಿ ಕನ್ನಡ ಚಿತ್ರವನ್ನ ಕೊಂಡೊಯ್ಯೋ ಪ್ರಯತ್ನದಲ್ಲಿದ್ದಾರೆ. ಕೆ.ಜಿ.ಎಫ್ ಚಿತ್ರವನ್ನ ಒಂದು ರೇಂಜಿಗೆ ಬಿಡುಗಡೆ ಮಾಡಲು ಸನ್ನದ್ದರಾಗಿದ್ದಾರೆ. ಬಾಹುಬಲಿಯ ಪರಾಕ್ರಮಕ್ಕೆ ಕರಣ್ ಜೋಹರ್ ಸಾಥ್ ಕೊಟ್ಟಂತೆ. ಕನ್ನಡದ ಈ ಕೆ.ಜಿ.ಎಫ್‍ಗೂ ಬಾಲಿವುಡ್‍ನ ದೊಡ್ಡ ನಾಮ ಬಲ ಸಿಕ್ಕಿದೆ.
ಯಶ್ ನಟನೆಯಲ್ಲಿ, ಉಗ್ರಂ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಕೆ.ಜಿ.ಎಫ್ ಎಂಬ ಸಿನಿಮಾ ಶುರುವಾದಾಗಲೇ ಕನ್ನಡ ಚಿತ್ರರಸಿಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿತ್ತು. ಇನ್ನು ಕೆ.ಜಿ.ಎಫ್ ಪೋಸ್ಟರ್, ಮೇಕಿಂಗ್ ಟೀಸರ್ ಬಿಡುಗಡೆಯಾಗುವ ವೇಳೆಗೆಲ್ಲಾ ಈ ಸಿನಿಮಾ ಕನ್ನಡ ಚಿತ್ರರಂಗವನ್ನ ಎಲ್ಲಿಗೋ ಕರೆದೊಯ್ಯಲಿದೆ ಎಂಬ ಆಸೆಯೊಂದು ಬಲವಾಗುವಂತೆ ಮಾಡಿತ್ತು. ಅದನ್ನೀಗ ಸಾಕ್ಷೀಕರಿಸುವಂತಹ ಡೆವಲಪ್‍ಮೆಂಟ್‍ಗಳು ಕೆ.ಜಿ.ಎಫ್ ಅಡ್ಡದಲ್ಲಿ ನಡೆಯುತ್ತಿವೆ. ತನ್ಮೂಲಕ ಕನ್ನಡದ ಸಿನಿಮಾವನ್ನ ಯೂನಿವರ್ಸಲ್ ಲೆವೆಲ್‍ನಲ್ಲಿ ನೋಡುವಂತೆ ಮಾಡಿವೆ.


ಕೆ.ಜಿ.ಎಫ್ ಸಿನಿಮಾ ಈಗ ಕೇವಲ ಕನ್ನಡ ಚಿತ್ರವಾಗಿ ಉಳಿದಿಲ್ಲ. ಇದ್ರ ಮೇಲೆ ಈಗ ಕೇವಲ ಕನ್ನಡ ಸಿನಿರಸಿಕರಷ್ಟೇ ನಿರೀಕ್ಷೆ ಇಟ್ಕೊಂಡಿಲ್ಲ. ತಮಿಳು, ತೆಲುಗು, ಹಿಂದಿ ಸೇರಿ ಪಂಚಭಾಷೆಯ ಸಿನಿರಸಿಕರು ಕೆ.ಜಿ.ಎಫ್ ಸಿನಿಮಾಗಾಗಿ ಆಸೆಗಣ್ಣಿನಲ್ಲಿ ಕಾಯ್ತಿದ್ದಾರೆ. ಅದ್ರಂತೆ ಚಿತ್ರದ ಮೇಲಿನ ನಿರೀಕ್ಷೆಗೆ ತಕ್ಕಂತೆ ಅಷ್ಟೇ ದೊಡ್ಡ ಮಟ್ಟದಲ್ಲಿ ಥಿಯೇಟರ್‍ಗೆ ತರೋಕೆ ಚಿತ್ರತಂಡ ಕೂಡ ನಿರ್ಧರಿಸಿದೆ. ಚಿತ್ರತಂಡದ ಈ ಪ್ರಯತ್ನಕ್ಕೆ ಆನೆಬಲವೊಂದು ಸಿಕ್ಕಿದೆ.. ಬಾಲಿವುಡ್‍ನ ಫೇಮಸ್ ಪ್ರೊಡಕ್ಷನ್ ಹೌಸ್ ಎಕ್ಸೆಲ್ ಎಂಟರ್‍ಟೈನ್ಮೆಂಟ್ ಕೆ.ಜಿ.ಎಫ್‍ಗೆ ಕೈ ಜೋಡಿಸಿದೆ.
ಸೌತ್‍ನ ಬಾಹುಬಲಿ ಸಿನಿಮಾ ವಿಶ್ವದಾದ್ಯಂತ ಅಬ್ಬರಿಸಲು ಕರಣ್ ಜೋಹರ್ ಅವ್ರ ಧರ್ಮ ಪ್ರೊಡಕ್ಷನ್ ಹೌಸ್ ಸಾಥ್ ಕೊಟ್ಟಿತ್ತು. ಈಗ ಅದೇ ರೀತಿ ಎಕ್ಸೆಲ್ ಎಂಟರ್‍ಟೈನ್ಮೆಂಟ್ ಅವ್ರ ಸಹಕಾರದೊಂದಿಗೆ ಕೆ.ಜಿಎಫ್ ಸಿನಿಮಾ ಡಿಸೆಂಬರ್ 21ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ನಿಮ್ಗೆ ತಿಳಿದಿರಲಿ ಕನ್ನಡ ಚಿತ್ರರಂಗದಲ್ಲಿಯೇ ಕಂಡು ಕೇಳರಿಯದಷ್ಟು ದೊಡ್ಡ ಪ್ರಮಾಣದಲ್ಲಿ ಕೆ.ಜಿ.ಎಫ್ ಚಿತ್ರವನ್ನ ತೆರೆಗೆ ತರೋಕೆ ಚಿತ್ರತಂಡ ನಿರ್ಧರಿಸಿದೆ. ಸುಮಾರು 2000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರವೊಂದು ರಾರಾಜಿಸಲಿದೆ. ಒಟ್ಟಾರೆ ಕೆ.ಜಿ.ಎಫ್‍ನಿಂದ ಕನ್ನಡದ ಮಾರುಕಟ್ಟೆ ಎಕ್ಸ್ ಪೆಂಡ್ ಆಗುವ ಸೂಚನೆ ಸಿಕ್ತಿದ್ದು, ಇದು ಕನ್ನಡ ಚಿತ್ರರಂಗದಲ್ಲೊಂದು ಸಂಭ್ರಮ ಮೂಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top