ನಾಳೆ ಕೆಜಿಎಫ್ ಸಿನಿಮಾ ರಿಲೀಸ್..ಯಾವ್ಯಾವ ಥಿಯೇಟರ್ ನಲ್ಲಿ ಇರಲಿದೆ ಗೊತ್ತಾ..?

kgf re release

ಕೆಜಿಎಫ್ ಸಿನಿಮಾ ಸ್ಯಾಂಡಲ್ವುಡ್ ನ ಗೋಲ್ಡನ್ ಸಿನಿಮಾ ಕಳೆದ ವರ್ಷ ಕೆಜಿಎಫ್ ಸಿನಿಮಾ ಭರ್ಜರಿಯಾಗಿ ತೆರೆಕಂಡು ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಕನ್ನಡದಲ್ಲಿ ರಿಲೀಸ್ ಆಗಿ ದಾಖಲೆ ಕಲೆಕ್ಷನ್ ಜೊತೆ 100ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಯ್ತು, ಇದೇ ಯಶಸ್ಸಿನಲ್ಲಿ ಕೆಜಿಎಫ್ 2 ಸಿನಿಮಾ ಮೇಲೂ ಬಹಳ ನಿರೀಕ್ಷೆಗಳಿವೆ, ಹೀಗಿರುವಾಗ ನಾಳೆ ಕೆಜಿಎಫ್ ರಿಲೀಸ್ ಆಗ್ತಾ ಇದೆ,ಆದ್ರೆ ರಿಲೀಸ್ ಆಗ್ತಾ ಇರೋದು ಕೆಜಿಎಫ್ 2 ಅಲ್ಲಾ ಬದಲಿಗೆ ಕೆಜಿಎಫ್ ಚಾಪ್ಟರ್ 1 ಹೌದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೆಜಿಎಫ್ ಚಾಪ್ಟರ್ 1 ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ, ಅದರಲ್ಲೂ ಲಾಲ್ ಬಾಗ್ ಬಳಿ ಇರೋ ಊರ್ವಶಿ ಚಿತ್ರಮಂದಿರದಲ್ಲೂ ನಾಳೆ ಸಿನಿಮಾ ರಿ ರಿಲೀಸ್ ಆಗ್ತಾ ಇದೆ, ಅದರಲ್ಲೂ ವಿಶೇಷ ಎಂಬಂತೆ ಟಿಕೆಟ್ ದರದಲ್ಲೂ ವಿಶೇಷ ಆಫರ್ ಕೂಡ ನೀಡಿದೆ, ಹೌದು ಊರ್ವಶಿ ಚಿತ್ರಮಂದಿರದಲ್ಲಿ ಒಂದು ಟಿಕೆಟ್ ಬೆಲೆ 150ರೂಪಾಯಿಯಿಂದ ಶುರುವಾಗಲಿದ್ದು, ಆದ್ರೆ ಕೆಜಿಎಫ್ ರಿ ರಿಲೀಸ್ ಟಿಕೆಟ್ ದರವನ್ನು ಕಡಿಮೆ ಮಾಡಿದ್ದು 50,40,30ರೂಪಾಯಿ ದರವನ್ನು ನಿಗದಿ ಮಾಡಿದೆ ಇದನ್ನು ಅಧಿಕೃತವಾಗಿ ತಮ್ಮ ಟ್ವಿಟರ್ & ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದು ನಾಳೆ ಬೆಳಗ್ಗೆ ಮತ್ತು ಮಧ್ಯಾಹ್ನ ಕೆಜಿಎಫ್ ಪ್ರದರ್ಶನ ಕಾಣಲಿದೆ.

On occasion of Kannada Rajyotsava we will have a special screening of Kannada's pride @KGFTheFilm at special prices of…

Posted by Urvashi Digital 4K Cinema on Wednesday, 30 October 2019

ಸದ್ಯ ಊರ್ವಶಿ ಚಿತ್ರಮಂದಿರದಲ್ಲಿ ವಿಜಯ್ ಅಭಿನಯದ ಬಿಗಿಲ್ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ನಾಳೆ ಬೆಳಗ್ಗೆ ಮತ್ತು‌ ಮಧ್ಯಾಹ್ನ ಕೆಜಿಎಫ್ ಚಿತ್ರ ಪ್ರದರ್ಶನವಾದ ನಂತರ ಉಳಿದ ಪ್ರದರ್ಶನ ಬಿಗಿಲ್ ಸಿನಿಮಾ ಪ್ರದರ್ಶನವಾಗಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top