ಕೆಜಿಎಫ್‍ನಲ್ಲಿ ಪವರ್ ಫುಲ್ ಡೈಲಾಗ್ ಬರೆದವ ಈಗ ಡೈರೆಕ್ಟರ್..!

kgf dialogue writer now director

ಕೆಜಿಎಫ್ ಸಿನಿಮಾ ಬಂದ ಮೇಲೆ ಅದ್ಯಾರ್ಯಾರ ಹಣೆ ಬರಹ ಹೇಗೇಗೋ ಬದಲಾಗಿ ಹೋಗಿದೆ, ಆ ಒಂದು ಸಿನಿಮಾದಿಂದ ತಮ್ಮ ಜೀವನವನ್ನೇ ಬದಲಾಯಿಸಿಕೊಂಡಿದ್ದಾರೆ, ಈ ಒಂದು ಚಿತ್ರದಲ್ಲಿ ಕೆಲಸ ಮಾಡಿದ ಅದೆಷ್ಟೋ ಮಂದಿ ಈಗ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ, ಈಗ ಅದೇ ಸಾಲಿಗೆ ಕೆಜಿಎಫ್ ಚಿತ್ರದಲ್ಲಿ ಪವರ್ ಫುಲ್ ಡೈಲಾಗ್‍ಗಳನ್ನು ಕೊಟ್ಟು ಶಹಬ್ಬಾಸ್ ಅನಿಸಿಕೊಂಡಿದ್ದ ಚಂದ್ರಮೌಳಿ ಈಗ ನಿರ್ದೇಶಕರಾಗಿ ಬಡ್ತಿ ಪಡಿಯುತ್ತಿದ್ದಾರೆ, ಹಲವು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಚಂದ್ರಮೌಳಿ, ಇದೀಗ ಚಿತ್ರವೊಂದನ್ನು ನಿರ್ದೇಶನ ಮಾಡೋ ತಯಾರಿಯನ್ನು ನಡೆಸಿದ್ದಾರೆ. ಚಂದ್ರಮೌಳಿ ಹೊಸಬರ ತಂಡವೊಂದನ್ನು ಕಟ್ಟಿಕೊಂಡು ಹೊಸದೊಂದು ಸಿನಿಮಾ ಮಾಡೋಕೆ ರೆಡಿಯಾಗಿದ್ದು, ರಾಮ್ ಅನ್ನೋ ಹುಡುಗ ಈ ಸಿನಿಮಾ ಮೂಲಕ ಹೀರೋ ಆಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡಲಿದ್ದಾರೆ, ಇನ್ನು ಈ ಚಿತ್ರಕ್ಕೆ ತೆಲುಗಿನ ಡಿಂಪಲ್ ಹುಡುಗಿಯೊಬ್ಬಳು ಆಯ್ಕೆಯಾಗಿದ್ದು, ಸಾಯಿಕುಮಾರ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ, ಇನ್ನು ಈ ಚಿತ್ರಕ್ಕೆ ಅರ್ಜುನ್ ರೆಡ್ಡಿ ಖ್ಯಾತಿಯ ಸಂಗೀತ ನಿರ್ದೇಶಕ ರಾಧನ್ ಚಂದ್ರಮೌಳಿ ಚಿತ್ರಕ್ಕೆ ಸಂಗೀತ ನೀಡ್ತಾ ಇರೋದು ಮತ್ತೊಂದು ವಿಶೇಷ, ಇನ್ನು ಕೆಜಿಎಫ್ ನಲ್ಲಿ ಕೆಲಸ ಮಾಡಿದ ಬಹುತೇಕ ಅದೇ ಟೆಕ್ನಿಕಲ್ ಟೀಂ ಚಂದ್ರಮೌಳಿಯವರ ಹೊಸ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು, ಇದೇ ತಿಂಗಳು 18ರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top