ಅಯ್ಯೋ ದೇವರೇ ಕೆಟ್ಟದಾಗಿ ಬೈಯ್ಯೋದು ರ್ಯಾಪ್ ಸಾಂಗ್ ಅಂತೆ ನೋಡಿ

kannada rap song ante

ಇತ್ತೀಚೆಗೆ ನಮ್ಮ ಸೋಷಿಯಲ್‌ ಮೀಡಿಯಾ ಯಾವ ಮಟ್ಟಕ್ಕೆ ಹೋಗಿದೆ ಅಂದ್ರೆ, ಕೆಲವೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್ ಗಳನ್ನ ನೋಡಿದ್ರೆ ಸಭ್ಯ ವ್ಯಕ್ತಿಗಳು ಒಮ್ಮೆ ತಲೆ ತಿರುಗಿಬೀಳೋ ಹಾಗೆ ಮಾಡಿ ಬಿಡುತ್ತೆ. ಯಾಕೆ ಈ ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಇಷ್ಟು ಕೆಟ್ಟದಾಗಿ ಪದಗಳನ್ನ ಬಳಸ್ತಾರೆ ಅನ್ನೊದು ಇನ್ನು ಮಿಲಿಯನ್ ಡಾಲರ್ ಪ್ರಶ್ನೆ ಬಿಡಿ.. ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರೆ ಇತ್ತಿಚೆಗೆ ಯೂಟ್ಯೂಬ್‌ನಲ್ಲಿ ಒಂದು ರ್ಯಾಪ್ ಸಾಂಗ್ ಬಿಡುಗಡೆಯಾಗಿದ್ದು ಈ ಸಾಂಗ್ ಕೇಳಿದ್ರೆ ಸಾಂಗ್ ಬಂದು ಪದ ಬಳಕೆಯನ್ನು ರೇಪ್ ಮಾಡಿದ ರೀತಿ ಇದೆ. ಈ ಸಾಂಗ್ ಅನ್ನು ಎಲ್ಲಾದರೂ ಲೌಡ್ ಸ್ಪೀಕರ್ ನಲ್ಲಿ ಹಾಕಿ ಕೇಳಿದ್ರೆ ಸಭ್ಯಸ್ಥರ ಮಾನ ಮರ್ಯಾದೆ ಹರಾಜಾಗೋದಂತು ಗ್ಯಾರಂಟಿ.. ಚಿರಾಯು ಅನ್ನೋ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆಗಿರೋ ಈ ರ್ಯಾಪ್ ಸಾಂಗ್ ಅನ್ನು ಕೇಳಿದ್ರೆ ಕಿವಿಗೆ ಇಂಪು ನೀಡುವುದಿಲ್ಲ.. ಮನಸಿಗೆ ಜೋಶ್ ಕೂಡ ನೀಡುವುದಿಲ್ಲ ಬದಲಿಗೆ ಮನಸ್ಸಿಗೆ ಮುಜುಗರ‌ ನೀಡೋದಂತು ಗ್ಯಾರಂಟಿ.. ಇನ್ನು ಸಾಂಗ್ ನಲ್ಲಿ ಬರೋ ಸಾಲುಗಳನ್ನು ಬರೆಯಲು ಸಹ ಮುಜುಗರವಾಗುತ್ತೆ ಇಲ್ಲಿ ಬಳಸಿರೋ ಪದಗಳೆಲ್ಲವೂ ಡ್ಯಾಶ್, ಡ್ಯಾಶ್, ಡ್ಯಾಶ್ ಹಾಗಾಗಿ ಇಂತಹ ಹಾಡುಗಳನ್ನು ಯುವಕರು ಯಾಕೆ ಮಾಡ್ತಿದ್ದಾರೋ ದೇವರೇ ಬಲ್ಲ, ಇಂತಹ ಹಾಡುಗಳನ್ನು ಅವರ ಮನೆಯ ಹಿರಿಯರು ನೋಡಿದಾಗ ಏನಂತಾರೋ ಗೊತ್ತಿಲ್ಲ, ಆದರೆ ಇಂತಹ ಪದಬಳಕೆಗಳ ಮೇಲೆ ಇನ್ನಾದ್ರು ಸೋಷಿಯಲ್‌ ಮೀಡಿಯಾದಲ್ಲಿ ಕಡಿವಾಣ ಮಾಡಲೇ ಬೇಕು ಅನ್ನೋದು ಸಭ್ಯ ಜನರ ಕಳಕಳಿ.

ಯಾರು ಇಲ್ಲದಾಗ ಕೇಳಿ ಈ ಹಾಡನ್ನು.. ಇಲ್ಲಿದೆ ನೋಡಿ ಆ ವಿಡಿಯೋ
ಇದರ ಬಗ್ಗೆ ನೀವೇನಂತೀರಾ ಕಮೆಂಟ್ ಮಾಡಿ ತಿಳಿಸಿ

ಕಿಚ್ಚ ಸುದೀಪ್ ಪೈಲ್ವಾನ್‍ಗಾಗಿ ಇಳಿಸಿಕೊಂಡ ತೂಕವೆಷ್ಟು ಗೊತ್ತಾ.?

360° ಡಿಗ್ರಿ ಬ್ಯಾಟಿಂಗ್ ನೋಡಿದ್ರಿ, ಇವಾಗ 360° ಬೌಲಿಂಗ್ ನೋಡಿ

ಒಂದೇ ಪಿಚ್ ನಲ್ಲಿ ದಂಪತಿಗಳ ಭರ್ಜರಿ‌ ಆಟ

ಕೊನೆಗೂ ಮೀ ಟೂ ಬಗ್ಗೆ ಬಾಯ್ಬಿಟ್ಟ ಶುಭಾ ಪೂಂಜಾ!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top