ನಿಮಗೆ ಮೌನದ ಶಕ್ತಿ ಗೊತ್ತೇ? ಈ ಸ್ಟೋರಿ ನೋಡಿ ಖಂಡಿತಾ ಇಷ್ಟ ಆಗುತ್ತೆ!

ಮೌನ ದೌರ್ಬಲ್ಯವಲ್ಲ ಅದು ಶಕ್ತಿ! ಯಾವ ಒಬ್ಬ ವ್ಯಕ್ತಿ ಮೌನವಾಗಿರ್ತಾನೋ ಆತ ಬುದ್ಧಿಶಾಲಿ, ಧೈರ್ಯಶಾಲಿ..! ಎಲ್ಲದಕ್ಕೂ ಆತನ ಮೌನವೇ ಉತ್ತರವಾಗಿರುತ್ತೆ. ಮೌನ ಎಷ್ಟು ಪವರ್ ಫುಲ್ ಅನ್ನೋದನ್ನು ಹೇಳುತ್ತೆ ಈ ಸ್ಟೋರಿ..

ಒಬ್ಬ ಶ್ರೀಮಂತ, ಇನ್ನೊಬ್ಬ ಸಾಮಾನ್ಯ ವರ್ತಕ. ಒಂದು ದಿನ ವರ್ತಕ ತನ್ನ ಕುದುರೆಯನ್ನು ಒಂದೆಡೆ ಕಟ್ಟಿ ತನ್ನ ಕೆಲಸಕ್ಕೆ ಹೊರಟಿರುತ್ತಾನೆ. ಅದೇ ಸಮಯದಲ್ಲಿ ಬಂದ ಶ್ರೀಮಂತ ವರ್ತಕನ ಕುದುರೆ ಪಕ್ಕದಲ್ಲಿ ತನ್ನ ಕುದುರೆಯನ್ನು ಕಟ್ಟಲು ಮುಂದಾಗ್ತಾನೆ. ಆಗ ವರ್ತಕ, ”ಸ್ವಾಮಿ ನನ್ನ ಕುದುರೆ ಒಂಥರಾ ಮೊಂಡು.. ಅದು ಉಡಾಫೆ.. ಅದು ನಿಮ್ಮ ಕುದುರೆ ಜೊತೆ ಗುದ್ದಾಡಿ, ಗಾಯ ಮಾಡಬಹುದು… ಹಾಗಾಗಿ ನಡುವೆ ಆ ಒಂದು ಕಂಬ ಬಿಟ್ಟು ಬೇರೆ ಕಂಬಕ್ಕೆ ನಿಮ್ಮ ಕುದುರೆಯನ್ನು ಕಟ್ಟಿಹಾಕಿ ಎನ್ನುತ್ತಾನೆ. ಹೀಗೆ ವರ್ತಕ ಎಷ್ಟೇ ಕಳಕಳಿಯಿಂದ ಹೇಳಿದರೂ ಶ್ರೀಮಂತ ಕೇಳಲಿಲ್ಲ. ಆತನಿಗೆ ನಾನೇನು ಈ ವರ್ತಕನ ಮಾತು ಕೇಳೋದು.. ಅವನ ಕುದುರೆಗೆ ನನ್ನ ಕುದುರೆ ಭಯ ಪಡ್ಬೇಕೇ? ನನ್ನ ಕುದುರೆ ಸುಮ್ಮನಿರುತ್ತಾ ಆತನ ಕುದುರೆಯನ್ನು ಮುಗಿಸಿಯೇ ಬಿಡುತ್ತೆ ಅಂತ ಅಲ್ಲೇ ಕಟ್ಟಿದ.


ಸಂಜೆ ವರ್ತಕ ಮತ್ತು ಶ್ರೀಮಂತ ಇಬ್ಬರೂ ಕೆಲಸ ಮುಗಿಸಿಕೊಂಡು ಕುದುರೆ ಕಟ್ಟಿದ್ದ ಸ್ಥಳಕ್ಕೆ ಬಂದರು. ಅವರು ಬರುವ ವೇಳೆಗೆ ಶ್ರೀಮಂತನ ಕುದುರೆ ಕೆಳಕ್ಕೆ ಬಿದ್ದಿತ್ತು! ಅದರ ಕಾಲುಗಳು ಮುರಿದಿದ್ದವು.. ರಕ್ತ ಸುರಿಯುತ್ತಿತ್ತು. ಅದನ್ನು ಕಂಡ ಶ್ರೀಮಂತ ವರ್ತಕನ ಮೇಲೆ ಮುಗಿಬಿದ್ದ..ಜಗಳಕ್ಕಿಳಿದ…ನಿನ್ನ‌ ಕುದುರೆ ನೋಡು ನನ್ನ ಕುದುರೆಗೆ ಎಂಥಾ ಸ್ಥಿತಿ ತಂದಿದೆ ಎಂದು ಕಿರುಚಾಡಿದ. ನೀನು ಪರಿಹಾರ ನೀಡಲೇ ಬೇಕೆಂದು ಪಟ್ಟು ಹಿಡಿದ. ವರ್ತಕ, ಅಲ್ಲಾ ಸ್ವಾಮಿ…ನಾನು ನಿಮ್ಮಲ್ಲಿ ಪರಿಪರಿಯಾಗಿ ಕೇಳಿಕೊಂಡರೂ ನೀವು ಹಠಕ್ಕೆ ಬಿದ್ದು ಕುದುರೆ ಕಟ್ಟಿ ಈಗ ನನ್ನ ಮೇಲೆ ರೇಗಾಡಿದ್ರೆ ಹೇಗೆ? ನಾನು ನಿಮಗೆ ಹೇಳದೇ ಇದ್ದಿದ್ದರೆ ಒಂದು ಲೆಕ್ಕ…ಅದು ತಪ್ಪಾಗ್ತಿತ್ತು ಕೂಡ… ಆದ್ರೆ ನಾನಾಗಿಯೇ ಹೇಳಿದ್ದೆನಲ್ಲಾ ಸ್ವಾಮಿ…ನನ್ನ ಕುದುರೆ ನಿಮ್ಮ ಕುದುರೆಗೆ ಹಲ್ಲೆ ಮಾಡುತ್ತೆ ಅಂತ! ನೀವೋ ಮಾತು ಕೇಳಿಲ್ಲ.. ನಾನೇಕೆ ದಂಡ ಕಟ್ಟಲಿ, ನಾನೇಕೆ ಪರಿಹಾರ ಕೊಡಲಿ ಅಂತ ನೇರಾ ನೇರವಾಗಿ ಹೇಳಿದ.


ಆದರೂ ಅಹಂ, ಹಠ ಬಿಡದ ಶ್ರೀಮಂತ ತನ್ನ ತಪ್ಪಿದ್ದರೂ ಕೋರ್ಟ್ ಮೆಟ್ಟಿಲೇರಿದ, ನ್ಯಾಯಾಧೀಶರು ವಿಚಾರಣೆ ಆರಂಭಿಸಿದ್ರು. ಶ್ರೀಮಂತ ತನ್ನ ದೂರು ಹೇಳಿದ. ನ್ಯಾಯಾಧೀಶರು ವರ್ತಕನ ರಿಯಾಕ್ಷನ್ ಕೇಳಿದ್ರು. ವರ್ತಕ ಮಾತನಾಡಲಿಲ್ಲ.. ಎಷ್ಟೇ ಪ್ರಶ್ನೆ ಕೇಳಿದ್ರು ಆತನದ್ದು ಮೌನವೇ ಉತ್ತರವಾಗಿತ್ತು. ಆಗ ನ್ಯಾಯಾಧೀಶರು ವರ್ತಕ ಮೂಕನೆಂದು ತಿಳಿದು ಅರ್ಜಿ ವಜಾ ಮಾಡುವ ನಿರ್ಧಾರಕ್ಕೆ ಬಂದ್ರು. ಆಗ ಶ್ರೀಮಂತ… ನ್ಯಾಯಾಧೀಶರೇ ಆತ ನಾಟಕ ಮಾಡ್ತಿದ್ದಾನೆ. ಆತ ಮೂಕನಲ್ಲ. ಅವನು ಚೆನ್ನಾಗಿಯೇ ಮಾತನಾಡುತ್ತಾನೆ. ಅವನ ಕುದುರೆ ಪಕ್ಕದಲ್ಲಿ ನನ್ನ ಕುದುರೆ ಕಟ್ಟಲು ಹೋದಾಗ ನನ್ನೊಡನೆ ಮಾತನಾಡಿದ್ದ! ನನ್ನ ಕುದುರೆ ನಿಮ್ಮ ಕುದುರೆಗೆ ಹಲ್ಲೆ ಮಾಡಬಹುದು. ಹಾಗಾಗಿ ಬೇರೆ ಕಡೆ ಕಟ್ಟಿ ಅಂತೆಲ್ಲಾ ಅವನೇ ಹೇಳಿದ್ದಾನೆ! ಅದಕ್ಕೆ ನಾನೇ ಸಾಕ್ಷಿ.. ಆತ ಮೂಕನಲ್ಲ ಎಂದು ರೋಷಾವೇಷದಿಂದ ಹೇಳಿದ!


ಆಗ ನ್ಯಾಯಾಧೀಶರು ನಕ್ಕು.. ಅಲ್ಲಯ್ಯಾ ನೀನೇ ಸತ್ಯ ಹೇಳಿದಿಯಲ್ಲಾ..? ಆತ ಹೇಳಿದ ಬಳಿಕವೂ ಕುದುರೆ ಕಟ್ಟಿದ್ದು ಯಾರಿದ್ದಪ್ಪಾ ತಪ್ಪು? ಎಂದು ಕೇಳಿದ್ರು! ಅಲ್ಲಿಗೆ ವರ್ತಕ ಸತ್ಯ ಗೆದ್ದಿತು.. ಆತನ ಮೌನ ಶಕ್ತಿ ಸಾಬೀತಾಯ್ತು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top