ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಕವನ (ಲವ್ ಸ್ಟೇಟಸ್) – valentine’s day ಪ್ರೇಮಿಗಳ ದಿನ

ಹೊರಗೆ ಹೇಳಿಕೊಳ್ಳಲಾಗದ
ಒಂದು ಮಧುರ ಭಾವನೆ.
ಒಳಗೆ ಅನುಭವಿಸಲಾಗದ
ಒಂದು ಮಧುರ ಯಾತನೆ.
ಇದೇ ಇರಬಹುದೇ ಆ ಪ್ರೀತಿ…

——————
ಪ್ರೀತಿಗೆ ಒಂದೇ ದಿನ ಸಾಕೇ ?
ಈ ಹೃದಯವು ಮಿಡಿಯುವ ಪ್ರತೀ ಕ್ಷಣ,
ಧಮನಿಯಲಿ ಹರಿಯುವ ಪ್ರತೀ ಕಣ,
ನೀನೇ ಆಗಿರುವಾಗ ಮತ್ತಿನ್ನೇಕೆ ಪ್ರೀತಿಗೆ ಒಂದೇ ದಿನ ?
———————–
ಮುಂಗಾರು ಮಳೆ ಮುಂಚೆ
ತಂಗಾಳಿ ಬೀಸಿದ ಹಾಗೆ
ತಂಪು ಕೊಡುವ ಆ ನಿನ್ನ ಮುಗುಳ್ನಗೆ!
ಇಂಪು ಸುರಿಸುವ ಸಂಗೀತದಂತೆ
———————–
ಮಿಂಚುವ ಮೋಡಗಳ ಹಿಂದೆ
ಜಿಂಕೆಯಂತೆ ನೀ ಹಾರಿ ಮರೆಯದಾಗ
ನಿಂತ ನೀರಲ್ಲಿ ಕಲ್ಲು ಎಸೆದಂತೆ
ಮಂಗಳನ ಅಂಗಳದಲಿ
ತಿಂಗಳು ಕಳೆದಂತೆ.
———————–
ಬಂಗಾರದ ಅಂಗಡಿಯಲ್ಲಿ
ಗೊಂಬೆ ಅಲಂಕರಿಸಿದ ಹಾಗೆ
ಇಂಬು ಕೊಡುವ ಅ ನಿನ್ನ ಚಲುವು
ಸೌಂದರ್ಯಕ್ಕೆ ಕಲಶ ಇಟ್ಟಂತೆ.
————————-
ಮಂಪರು ಬಂದ ಮನಸಿಗೆ
ತುಂತುರು ಹನಿ ಸುರಿಸಿ
ಕಂಪು ತುಂಬುವ ಆ ನಿನ್ನ ಪ್ರೀತಿ
ಕಂಗಳಿಗೆ ಕಾಂತಿ ಹರೆಸಿದಂತೆ – ಪ್ರಮೋದ್ ಎನ್.
—————————-

Kannada love status ಕನ್ನಡ ಲವ್ ಸ್ಟೇಟಸ್
Kannada love status
kannada love status 
ಕನ್ನಡ ಲವ್ ಸ್ಟೋರಿ
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top